Top

'ಸಿಎಂ ಕಣ್ಣೀರು ಹಾಕಿದ್ರೆ ಮೂರು ಕರ್ಚೀಫ್ ಒದ್ದೆಯಾಗತ್ತೆ'

ಸಿಎಂ ಕಣ್ಣೀರು ಹಾಕಿದ್ರೆ ಮೂರು ಕರ್ಚೀಫ್ ಒದ್ದೆಯಾಗತ್ತೆ
X

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಡಿ.ವಿ.ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.

ಯಾರೋ ಆಟಕ್ಕುಂಟು ಲೆಕ್ಕಕ್ಕಿಲ್ಲದವರಿಂದ ರಾಜ್ಯದಲ್ಲಿ ಆಡಳಿತ ನಡೆಯುತ್ತಿದೆ. ಕುಮಾರಸ್ವಾಮಿಯವರಿಗೆ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ.ಕಣ್ಣೀರು ಹಾಕುವುದಕ್ಕೂ ಇತಿ ಮಿತಿ ಇದೆ. ಎರಡು ಮೂರು ಕರ್ಚೀಫ್ ಗಳು ಒದ್ದೆ ಆಗುವವರೆಗೆ ಯಾರಾದ್ರೂ ಅಳ್ತಾರಾ? ಆ ಕರ್ಚೀಪಿನಲ್ಲಿ ಕಣ್ಣೀರು ಬರಿಸುವ ವಸ್ತು ಇತ್ತೋ ಇಲ್ವೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಅಲ್ಲದೇ ಕಾಂಗ್ರೆಸ್ ಜೆಡಿಎಸ್ ನವರು ಯಾವಾಗ ತಬ್ಬಿಕೊಳ್ತಾರೆ ಯಾವಾಗ ಕಿತ್ತಾಡ್ತಾರೋ ಗೊತ್ತಿಲ್ಲ. ಯಾವುದೇ ಸಂದರ್ಭದಲ್ಲಿ ಮೈತ್ರಿ ಸರಕಾರ ಬೀಳಬಹುದು. ಆಗ ಮತ್ತೆ ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿ ಆಗ್ತಾರೆ ಎಂದು ಹೇಳಿದ್ದಾರೆ.

https://www.youtube.com/watch?v=641mVTpUzoE

Next Story

RELATED STORIES