Top

ಫೇಸ್‌ಬುಕ್‌ ಲೈವ್‌ನಲ್ಲಿ ರಶ್ಮಿಕಾ ಮಂದಣ್ಣ ಹೇಳಿದ್ದೇನು...?

ಫೇಸ್‌ಬುಕ್‌ ಲೈವ್‌ನಲ್ಲಿ ರಶ್ಮಿಕಾ ಮಂದಣ್ಣ ಹೇಳಿದ್ದೇನು...?
X

ನಿನ್ನೆ ಎಲ್ಲೆಡೆ ಸುದ್ದಿಯಾಗಿದ್ದ ರಶ್ಮಿಕಾ ರಕ್ಷಿತ್ ಬ್ರೇಕಪ್ ಸುದ್ದಿ ಬಗ್ಗೆ ಇಂದು ರಶ್ಮಿಕಾ ಮಂದಣ್ಣ ಫೇಸ್‌ಬುಕ್ ಲೈವ್‌ನಲ್ಲಿ ಬಂದು ಸ್ಪಷ್ಟನೆ ನೀಡಿದ್ದಾರೆ.

ನನಗೆ ನಿಮ್ಮೆಲ್ಲರ ಸಪೋರ್ಟ್ ಇರೋದು ಖುಷಿ ತಂದಿದೆ. ನನಗೆ ಪರಭಾಷಾ ಚಿತ್ರರಂಗ ಸ್ವಾಗತ ಕೋರಿರೋದು ಖುಷಿ. ಕೆಲವು ವೆಬ್‌ಸೈಟ್‌ಗಳಲ್ಲಿ ನನ್ನ ಮತ್ತು ರಕ್ಷಿತ್ ಬ್ರೇಕಪ್ ಸುದ್ದಿ ಬದಿರುವುದು ನಿಜವಲ್ಲ. ಅಂತಹ ಸುಳ್ಳುಸುದ್ದಿಗೆ ದಯವಿಟ್ಟು ಕಿವಿಗೊಡಬೇಡಿ ಎಂದಿದ್ದಾರೆ.

ಅಲ್ಲದೇ ಟ್ರೋಲ್ಸ್ ಮಾಡೋದು, ತಮಾಷೆಗಾಗಿ, ಕಾಲೆಳೆಯುವುದಕ್ಕೆ. ಆದ್ರೆ ಅದು ಆರೋಗ್ಯಕರವಾದಂತಹ ಟ್ರೋಲ್ಸ್ ಆಗಿರಲಿ. ನಾವು ಮನುಷ್ಯರು, ನಮಗೂ ಭಾವನೆಗಳಿರುತ್ತೆ ಅನ್ನೋದು ಮರೆಯಬೇಡಿ. ನಾವು ಇರುವುದೇ ನಿಮ್ಮನ್ನ ಎಂಟ್ರಟೈನ್ ಮಾಡೋಕೆ. ನನ್ನ ಮೇಲಿನ ನಿಮ್ಮ ಪ್ರೀತಿ ಸದಾ ಹೀಗೇ ಇರಲಿ ಎಂದು ರಶ್ಮಿಕಾ ಫೇಸ್‌ಬುಕ್‌ ವೈಲ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

https://youtu.be/vuB6Krym1TI

Next Story

RELATED STORIES