ಚರ್ಚೆಗೆ ಗ್ರಾಸವಾದ ನಿಧಿ ಸುಬ್ಬಯ್ಯ ಫೋಟೋಶೂಟ್

ಮೈಸೂರು: ಕೆಲ ತಿಂಗಳ ಹಿಂದೆ ಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯಲ್ಲಿ ಜೋಡಿಯೊಂದು ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಸ್ಯಾಂಡಲ್ವುಡ್ ತಾರೆ ನಿಧಿ ಸುಬ್ಬಯ್ಯ ಕೂಡ, ಮೈಸೂರು ಅವರಮನೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಅರಮನೆಯ ನಿಷೇಧಿತ ಜಾಗದಲ್ಲಿ ನಿಧಿ ಸುಬ್ಬಯ್ಯ ಫೋಟೋ ಶೂಟ್ ಮಾಡಿಸಿದ್ದು, ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆದರೆ ಅರಮನೆಯಲ್ಲಿ ಯಾರಿಗೂ ಫೋಟೋ ಶೂಟ್ಗೆ ಅನುಮತಿ ನೀಡಿಲ್ಲ. ಈ ಕಾರಣಕ್ಕಾಗಿ ಇದೀಗ ನಿಧಿ ಸುಬ್ಬಯ್ಯ ಫೋಟೋ ಶೂಟ್ ಸುದ್ದಿ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಈ ಬಗ್ಗೆ ಟಿವಿ5 ಜೊತೆ ಮಾತನಾಡಿದ ನಿಧಿ ಸುಬ್ಬಯ್ಯ, ನಾನೂ ಫೋಟೋ ಶೂಟ್ ಮಾಡಿಲ್ಲ. ಮೊಬೈಲ್ನಲ್ಲಿ ಫೋಟೋ ಕ್ಲಿಕಿಸಿಕೊಂಡಿದ್ದೇನೆ ಅಷ್ಟೇ. ಅದು ಮಾಡಿದರು ತಪ್ಪೇ.? ಎಂದು ಪ್ರಶ್ನಿಸಿದ್ದಾರೆ. ಇನ್ನು ನಾನೂ ಫೋಟೋ ಶೂಟ್ಗಾಗಿ ಅರಮನೆಗೆ ಬಂದಿದ್ದಲ್ಲ. ನಮ್ಮ ಮೈಸೂರು ಅರಮನೆಗೆ ಪ್ರವಾಸಕ್ಕೆ ಬಂದಿದ್ದು. ಆ ವೇಳೆ ಮೊಬೈಲ್ನಲ್ಲಿ ಫೋಟೋ ಕ್ಲಿಕಿಸಿಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಈ ಬಗ್ಗೆ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ Tv5ಗೆ ಸ್ಪಷ್ಟನೆ ನೀಡಿದ್ದು, ಮೈಸೂರು ಅರಮನೆಯಲ್ಲಿ ಫೋಟೋ ಕ್ಲಿಕಿಸಿಕೊಳ್ಳಲು ಅವಕಾಶ ಇದೆ. ದರ್ಬಾರ್ ಹಾಲ್ನಲ್ಲಿ ಪೋಟೋ ತೆಗೆದುಕೊಳ್ಳಲು ಅವಕಾಶ ಇದೆ. ಈ ಮೊದಲು ಅರಮನೆಯ ದರ್ಬಾರ್ ಹಾಲ್ನಲ್ಲಿ ಪೋಟೋ ತೆಗೆಯುವುದಕ್ಕೆ ನಿಷೇಧ ಇತ್ತು. ಇತ್ತೀಚಿನ ಕೆಲ ದಿನಗಳ ಹಿಂದಿನ ಗೊಂದಲದಿಂದ ಆ ನಿಷೇಧವನ್ನ ವಾಪಸ್ ತೆಗೆದುಕೊಳ್ಳಲಾಗಿದೆ. ಸದ್ಯ ಪ್ರವಾಸಿಗರು ಮುಕ್ತವಾಗಿ ದರ್ಬಾರ್ ಹಾಲ್ನಲ್ಲಿ ಪೋಟೋ ತೆಗೆದುಕೊಳ್ಳಬಹುದು. ಉಚಿತವಾಗಿ ಪೋಟೋ ತೆಗೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿಧಿ ಸುಬ್ಬಯ್ಯ ಅವರು ಪೋಟೋ ತೆಗೆಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಆದ್ರೆ ಪ್ರವಾಸಿಗರಿಗೆ ಪೋಟೋ ತೆಗೆಸಿಕೊಳ್ಳಲು ಅವಕಾಶ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.