Top

ದೇಶದ ಮೊದಲ ಬೇಬಿ ಸ್ಪಾ: ಎಲ್ಲಿದೆ ಗೊತ್ತಾ?

ದೇಶದ ಮೊದಲ ಬೇಬಿ ಸ್ಪಾ: ಎಲ್ಲಿದೆ ಗೊತ್ತಾ?
X

ಈಗ ಎಲ್ಲೆಲ್ಲೂ ಸ್ಪಾಗಳದ್ದೇ ಕಾರುಬಾರು. ಗಲ್ಲಿಗೊಂದರಂತೆ ಸ್ಪಾಗಳು ತಲೆ ಎತ್ತುತ್ತಿವೆ. ಪುರುಷರು ಮತ್ತು ಮಹಿಳೆಯರು ಎನ್ನದೇ ಎಲ್ಲರೂ ಸ್ಪಾಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಹೊಸ ವಿಷಯ ಏನಪ್ಪಾ ಅಂದರೆ ಮಕ್ಕಳು ಅದರಲ್ಲೂ ಹಸುಗೂಸುಗಳಿಗಾಗಿಯೇ ಸ್ಪಾ ತಲೆ ಎತ್ತಿದೆ. ಅದೂ ದೇಶದಲ್ಲಿ ಮೊದಲ ಬಾರಿ ಇಂತಹ ಸ್ಪಾ ತಲೆ ಎತ್ತಿರುವುದು ನೆರೆಯ ತೆಲಂಗಾಣದಲ್ಲಿ...!

ಬಾಲವಿಹಾರ, ಶಿಶು ವಿಹಾರ ಕೇಂದ್ರಗಳನ್ನು ಕೇಳಿದ್ದೀವಿ. ಇದೀಗ ಹೈದರಾಬಾದ್​ನಲ್ಲಿ ಬೇಬಿ ಸ್ಪಾ ಆರಂಭವಾಗಿದೆ. ಈ ಮೂಲಕ ಹಿರಿಯರಿಗೆ ಅರ್ಥವಾಗದ ಶಿಶುಗಳ ಒತ್ತಡ, ದೈಹಿಕ ಸಮಸ್ಯೆಗಳು ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಈ ಸ್ಪಾ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

ಈ ಸ್ಪಾದಲ್ಲಿ ಹೈಡ್ರೋಥೆರಪಿ, ಮಸಾಜ್​ ಮತ್ತು ವ್ಯಾಯಾಮ ಮಾಡಿಸಲಾಗುತ್ತದೆ. ಈ ಸ್ಪಾದಿಂದ ಹೆತ್ತವರಿಗೆ ಮಕ್ಕಳನ್ನು ನೋಡಿಕೊಳ್ಳುವುದು ಸುಲಭವಾಗಲಿದೆ. ಆಗತಾನೆ ಹುಟ್ಟಿದ ಹಸುಗೂಸಿನಿಂದ 9 ತಿಂಗಳ ಮಗುವರೆಗೂ ನೀರಿಗೆ ಬಿಟ್ಟರೆ ತಾನಾಗಿಯೇ ಈಜು ಮಾಡುತ್ತವೆ. ತಾಯಿಯ ಗರ್ಭದಲ್ಲಿ ಮಾಡಿದಂತೆ ನೀರಿನಲ್ಲಿ ಸರಾಗವಾಗಿ ಈಜುತ್ತವೆ. ಈಜುಕೊಳದಲ್ಲಿ ಮಕ್ಕಳನ್ನು ನಿಲ್ಲಿಸುವ ಪ್ರಯತ್ನ ಮಾಡುವುದಿಲ್ಲ. ಈಜಲು ಬಿಡುತ್ತೇವೆ ಎಂದು ಬೇಬಿ ಸ್ಪಾ ಸಿಇಒ ಸ್ವಾತಿ ಜಿಲ್ಲಾ ವಿವರಿಸಿದ್ದಾರೆ.

Next Story

RELATED STORIES