Top

ಮೊದಲ ಟೆಸ್ಟ್​ನಲ್ಲೇ ಕೊಹ್ಲಿ ಪಡೆ `ಬರ್ನ್​': ಇಂಗ್ಲೆಂಡ್​ಗೆ ಜಯ

ಮೊದಲ ಟೆಸ್ಟ್​ನಲ್ಲೇ ಕೊಹ್ಲಿ ಪಡೆ `ಬರ್ನ್​: ಇಂಗ್ಲೆಂಡ್​ಗೆ ಜಯ
X

ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದ ನಂತರ ಔಟಾಗುತ್ತಿದ್ದಂತೆ ಭಾರತ ತಂಡದ ಹೋರಾಟ ಹಳಿ ತಪ್ಪಿತು. ಇದರಿಂದ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯವನ್ನು 31 ರನ್ ಗಳಿಂದ ಜಯಭೇರಿ ಬಾರಿಸುವ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿತು.

ಬರ್ಮಿಂಗ್​ ಹ್ಯಾಮ್​ನ ಎಡ್ಜ್ ಬಾಸ್ಟನ್​ನಲ್ಲಿ ನಡೆದ ಪಂದ್ಯದ ಗೆಲ್ಲಲು 194 ರನ್​ಗಳ ಸುಲಭ ಗುರಿ ಪಡೆದ ಭಾರತ ತಂಡ ಪಂದ್ಯದ ನಾಲ್ಕನೇ ದಿನವಾದ ಶನಿವಾರ 4 ವಿಕೆಟ್​ಗೆ 110 ರನ್​ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿತು.

ದಿನದ ಮೊದಲ ಓವರ್​ನಲ್ಲೇ ದಿನೇಶ್ ಕಾರ್ತಿಕ್ ಔಟಾಗುವ ಮೂಲಕ ಭಾರತದ ಪತನ ಆರಂಭಗೊಂಡಿತು. ಮೊದಲ ಇನಿಂಗ್ಸ್​ನಲ್ಲಿ ಶತಕ ಬಾರಿಸಿ ತಂಡವನ್ನು ಆಧರಿಸಿದ್ದ ವಿರಾಟ್ ಕೊಹ್ಲಿ 93 ಎಸೆತಗಳಲ್ಲಿ 4 ಬೌಂಡರಿ ಸೇರಿದ 51 ರನ್ ಬಾರಿಸುತ್ತಿದ್ದಂತೆ ಬೆನ್ ಸ್ಟೋಕ್ಸ್ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು.

ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ (31) ತಕ್ಕಮಟ್ಟಿಗೆ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.

  • ಸಂಕ್ಷಿಪ್ತ ಸ್ಕೋರ್
  • ಇಂಗ್ಲೆಂಡ್ 287 ಮತ್ತು 180
  • ಭಾರತ 274 ಮತ್ತು 2ನೇ ಇನಿಂಗ್ಸ್ 54.2 ಓವರ್ 162 (ವಿರಾಟ್ ಕೊಹ್ಲಿ 51, ಹಾರ್ದಿಕ್ 31, ದಿನೇಶ್ ಕಾರ್ತಿಕ್ 20, ಬೆನ್ ಸ್ಟೋಕ್ಸ್ 40/4, ಬ್ರಾಡ್ 43/2, ಆ್ಯಂಡರ್ಸನ್ 50/2).

Next Story

RELATED STORIES