ಸಾವಿನಲ್ಲೂ ಒಂದಾದ ರೈತ ದಂಪತಿ!

X
TV5 Kannada4 Aug 2018 7:39 AM GMT
ಆದರ್ಶ ರೈತ ದಂಪತಿ ಸಾವಿನಲ್ಲೂ ಒಂದಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಹೊಂಬೇಗೌಡ (70) ಮಂಜಮ್ಮ (65) ಮೃತ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
ಕಳೆದ ರಾತ್ರಿ ಹೊಂಬೇಗೌಡರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಕುಟುಂಬಸ್ಥರು ಅವರನ್ನ ಕಾರಿನಲ್ಲಿ ಮಳವಳ್ಳಿ ಆಸ್ಪತ್ರೆಗೆ ಕರೆದೊಯ್ಯುತಿದ್ದರು. ಮಾರ್ಗ ಮಧ್ಯೆ ಹೊಂಬೇಗೌಡ ಕುಡಿಯಲು ನೀರು ಕೇಳಿದ್ದಾರೆ. ಈ ವೇಳೆ ಪತ್ನಿ ಮಂಜಮ್ಮ ನೀರು ಕುಡಿಸಿದ್ದು, ಇದಾದ ಕೆಲವೇ ನಿಮಿಷಗಳಲ್ಲಿ ಹೊಂಬೇಗೌಡ ಮೃತಪಟ್ಟಿದ್ದಾರೆ.
ಪತಿ ಸಾವಿನಿಂದ ಆಘಾತಗೊಂಡ ಮಂಜಮ್ಮ 5 ನಿಮಿಷದಲ್ಲೇ ಮೃತಪಟ್ಟಿದ್ದು, ಜೀವನದುದ್ದಕ್ಕೂ ಆದರ್ಶವಾಗಿದ್ದ ಬದುಕಿದ್ದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
Next Story