Top

ಕೆರೆಯ ನೀರನ್ನ ಕದ್ದು ಮಾರುತಿದ್ದವರ ವಿರುದ್ಧ ಸಾಕ್ಷಿ ನುಡಿದ ವಾಟ್ಸಪ್‌.!!

ಕೆರೆಯ ನೀರನ್ನ ಕದ್ದು ಮಾರುತಿದ್ದವರ ವಿರುದ್ಧ ಸಾಕ್ಷಿ ನುಡಿದ ವಾಟ್ಸಪ್‌.!!
X

ತುಮಕೂರು : ವಾಟ್ಸ್ ಆಪ್ ಗ್ರೂಪಲ್ಲಿ ಚರ್ಚೆಯಾಗುವ ವಿಚಾರ ಕೆಲವೊಮ್ಮೆ ಗ್ರೂಪ್ ಅಡ್ಮಿನ್ಗೆ ಮುಳುವಾಗತ್ತೆ ಎಂಬುದಕ್ಕೆ ಈ ಸುದ್ದಿ ಘಟನೆ ಸಾಕ್ಷಿ.

ವಾಟ್ಸ್ ಆಪ್ ಗ್ರೂಪಲ್ಲಿ ನಡೆದ ಚರ್ಚೆ, ಶೇರ್ ಮಾಡಿದ ವೀಡಿಯೋವನ್ನೇ ಸಾಕ್ಷ್ಯವಾಗಿ ಪರಿಗಣಿಸಿದ ನ್ಯಾಯಾಲಯ ಐದು ಜನ ಅಧಿಕಾರಿಗಳ ವಿರುದ್ದ ಎಫ್ ಐ ಆರ್ ದಾಖಲಿಸಿವಂತೆ ಅಪರೂಪದ ಆದೇಶ ಹೊರಡಿಸಿದೆ.

ವಾಟ್ಸ್ ಆಪ್ ಗ್ರೂಪ್ ಚರ್ಚೆಯನ್ನೇ ಸಾಕ್ಷ್ಯವಾಗಿ ಪರಿಣಿಸಿದ ಕೋರ್ಟ್‌

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಮಲ್ಲಿಕಾರ್ಜುನ್‌, ಚಿಕ್ಕನಾಹಕನಹಳ್ಳಿ ಅಭಿವೃದ್ಧಿಗಾಗಿ ಎಂಬ ವಾಟ್ಸಪ್ ಗ್ರೂಪ್‌ ಕ್ರಿಯೇಟ್‌ ಮಾಡಿದ್ದರು. ಇದಕ್ಕೆ ಇವರೇ ಆಡ್ಮೀನ್‌ ಕೂಡ.

ಇವರು ಕ್ರಿಯೇಟ್‌ ಮಾಡಿದ್ದ ವಾಟ್ಸಪ್ ಗ್ರೂಪ್‌ನಲ್ಲಿ, ಚಿಕ್ಕನಾಯಕನಹಳ್ಳಿ ಕೆರೆಯ ನೀರನ್ನು ಕದ್ದು ಹೇಗೆ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ಚಿತ್ರೀಕರಸಿಕೊಂಡು ಆ ದೃಶ್ಯವನ್ನು ಗ್ರೂಪ್‌ನಲ್ಲಿ ಹಾಕಿದ್ದರು.

ಅಲ್ಲದೇ ಇದೇ ವೀಡಿಯೋವನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೂ ಕಳುಹಿಸಿ, ಕ್ರಮಕ್ಕೆ ಒತ್ತಾಯಿಸಿದ್ದರು. ಈ ವೀಡಿಯೋ ಗಮನಿಸಿ ಸ್ಥಳಕ್ಕೆ ಬಂದ ಪುರಸಭೆ ಅಧಿಕಾರಿಗಳು, ಪರಿಶೀಲನೆ ನಡೆಸಿ, ಕೆರೆ ನೀರು ಕದಿಯುತ್ತಿದ್ದ ದಂಧೆಯಲ್ಲಿ ತೊಡಗಿದ್ದವರು ವಿರುದ್ಧ ಪೈನ್‌ ಹಾಕಿದ್ದರು. ಜೊತೆಗೆ ನೀರು ಕದಿಯಲು ಬಯಸುತ್ತಿದ್ದ ಪೈಪ್‌ ಮಾತ್ರ ವಶಪಡಿಸಿಕೊಂಡು ನೆಪಮಾತ್ರಕ್ಕೆ, ಭೇಟಿಕೊಟ್ಟ ಹಾಗೆ ಮಾಡಿ, ತೆರಳಿದ್ದರು.

ತಾನೂ ವೀಡಿಯೋ ಸಮೇತ ಚಿತ್ರೀಕರಿಸಿ, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದೂ, ನೆಪ ಮಾತ್ರಕ್ಕೆ ಭೇಟಿಕೊಟ್ಟು, ಫೈನ್‌ ಹಾಕಿದ್ದು ಮಾತ್ರ ಮಲ್ಲಿಕಾರ್ಜುನ್‌ ಅವರಿಗೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಿಟ್ಟು ಭರಿಸುವಂತೆ ಮಾಡಿತ್ತು.

ಈ ಸಂಬಂಧ ತುಮಕೂರಿನ ಚಿಕ್ಕನಾಯಕನಹಳ್ಳಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ, ನಿರ್ಲಕ್ಷ್ಯ ವಹಿಸಿದ ಪುರಸಭೆ ಅಧಿಕಾರಿಗಳ ವಿರುದ್ಧ ನ್ಯಾಯಾಲದ ಮೊರೆ ಹೋಗಿದ್ದರು.

ವಿಡಿಯೋ ಸಹಿತ ಗ್ರೂಫಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿದ ಅಡ್ಮಿನ್

ತಾವು ಕ್ರಿಯೆಟ್ ಮಾಡಿದ" ಚಿಕ್ಕನಾಯಕನಹಳ್ಳಿ ಅಭಿವೃದ್ದಿಗಾಗಿ" ಎಂಬ ಗ್ರೂಪ್‌ನಲ್ಲಿ ಅಧಿಕಾರಿಗಳೂ ಸದಸ್ಯರಾಗಿದ್ದಾರೆ. ದಂಧೆಕೋರರು ಕೆರೆಯ ನೀರು ಕದ್ದುಮಾರುತ್ತಿರುವ ಎಲ್ಲಾ ಮಾಹಿತಿಯನ್ನ ಅವರಿಗೆ ಕೊಟ್ಟಿದ್ದೇವೆ. ನೀರು ಕಳ್ಳತನ ಆಗುತ್ತಿರುವುದನ್ನು ಗ್ರೂಫನಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಒಪ್ಪಿಕೊಂಡಿದ್ರು ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಅಲ್ಲದೇ, ತಪ್ಪಿತಸ್ಥರ ವಿರುದ್ದ ಕ್ರಮಕೈಗೊಂಡಿಲ್ಲದ ಬಗ್ಗೆ ವಾಟ್ಸ್ ಆಪ್ ಚರ್ಚೆಯ ಸ್ಕ್ರಿನ್ ಶಾಟ್ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮನವರಿಕೆ ಮಾಡಿಕೊಟ್ಟರು.

ಚಿಕ್ಕನಾಯಕನಹಳ್ಳಿ ಜೆ.ಎಮ್.ಎಫ್.ಸಿ.ನ್ಯಾಯಾಲಯ ಮಹತ್ವದ ಆದೇಶ

ಇದನ್ನೇ ಸಾಕ್ಷ್ಯವನ್ನಾಗಿ ಪರಿಗಣಿಸಿದ ತುಮಕೂರಿನ ಚಿಕ್ಕನಾಯಕನಹಳ್ಳಿ ಜೆ.ಎಮ್.ಎಫ್.ಸಿ ನ್ಯಾಯಾಲಯ, ಚಿಕ್ಕನಾಯಕನಹಳ್ಳಿ ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮುಖ್ಯಾಧಿಕಾರಿ ಮಂಜುಳಾದೇವಿ, ಪರಿಸರ ಇಂಜಿನಿಯರ್ ಚಂದ್ರಶೇಖರ್, ಪಿಎಸೈ ಮಂಜುನಾಥ್ ಹಾಗೂ ಸಿಪಿಐ ಮಾರಪ್ಪ ಸೇರಿ ಒಟ್ಟು ಐವರು ಅಧಿಕಾರಿಗಳ ವಿರುದ್ದ ಎಫ್ ಐ ಆರ್ ದಾಖಲಿಸುವಂತೆ ತಿಪಟೂರು ಡಿವೈಎಸ್ಪಿಗೆ ತಾಕೀತು ಮಾಡಿ ಆದೇಶ ಹೊರಡಿಸಿದೆ.

ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳದೇ ತಾವೇ ತಪ್ಪಿತಸ್ಥರಾದ ಅಧಿಕಾರಿಗಳು

ಈ ಆದೇಶದಂತೆ ಐವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ವಾಟ್ಸ್ ಕೇವಲ ಮನರಂಜನೆಗೆ ಅಲ್ಲದೆ ಭ್ರಷ್ಟರ ವಿರುದ್ಧ ಹೋರಾಟಕ್ಕೆ ವೇದಿಕೆಯಾಗಿ ಕೂಡ ವರ್ತಿಸುತ್ತದೆ. ಈ ಮೂಲಕ ತಪ್ಪಿತಸ್ಥ ಅಧಿಕಾರಿಗಳಿಗೆ ಚಾಟಿ ಕೂಡ ಬೀಸಲು ಸಹಕಾರಿ ಆಗುತ್ತದೆ ಎಂಬುದನ್ನು ನ್ಯಾಯಲಾಯದ ಮೂಲಕ ಮನವರಿಗೆ ಮಾಡಿಕೊಟ್ಟಿದೆ.

ವರದಿ : ಟಿ.ಯೋಗಿಶ್, ಟಿವಿ5 ತುಮಕೂರು

Next Story

RELATED STORIES