Top

ವರದಕ್ಷಿಣೆಗೆ ಹೆತ್ತ ತಾಯಿಯ ಜೊತೆ ಸುಟ್ಟು ಕರಕಲಾದ ಮಗು

ವರದಕ್ಷಿಣೆಗೆ ಹೆತ್ತ ತಾಯಿಯ ಜೊತೆ ಸುಟ್ಟು ಕರಕಲಾದ ಮಗು
X

ಮೈಸೂರು : ಶಿಕ್ಷಕನನ್ನ ಮದುವೆಯಾಗಿದ್ದೇನೆ‌ ನಾನೂ ಸುಖ ಸಂಸಾರ ನಡೆಸ್ತಿನಿ ಅಂತಾ ಅಂದುಕೊಂಡಿದ್ಲು ಆಕೆ. ಅಳಿಯನ ಜೊತೆ ತನ್ನ ಮಗಳ ಬದುಕು ಸುಂದರವಾಗಿರಲಿ‌ ಅಂತಾ ಸಾಲ ಸೋಲಾ ಮಾಡಿ ಮನೆಯನ್ನು ತೆಗದುಕೊಟ್ಟು, ಲಕ್ಷ ಲಕ್ಷ ವರದಕ್ಷಿಣೆ ಕೊಟ್ಟು ಮದುವೆ ಮಾಡಿದ್ರು ಆಕೆಯ ಕುಟುಂಬ.‌ ಆದ್ರೆ ಶಿಕ್ಷಕನ ಕುಟುಂಬದ ಹಣದ ಮೋಹಕ್ಕೆ ಆ ಗೃಹಿಣಿಯ ಬದುಕೆ ಸುಟ್ಟು ಭಸ್ಮವಾಗಿದೆ. ತನ್ನ ಗಂಡನ ಮನೆಯವರ ಕಿರುಕುಳಕ್ಕೆ ತನ್ನ ಪುಟ್ಟ ಕಂದನ ಜೊತೆ ಬೆಂಕಿಯಲ್ಲಿ ಆ ಗೃಹಿಣಿ ಬಲಿಯಾಗಿದ್ದಾಳೆ.

ಹೌದು ಇದೊಂದು ಮನಕಲಕುವ ಘಟನೆ. ತಾಯಿಯ ಮಡಿಲೊಳಗೆ ಪುಟ್ಟ ಮಗು ಕರಕಲಾದ ದೃಶ್ಯ ನೋಡುತ್ತಿದ್ದರೇ, ಕರುಳು ಕಿತ್ತು ಬರುತ್ತದೆ. ಹೀಗೆ ಆತ್ಮಹತ್ಯೆ ಮಾಡಿಕೊಂಡಾಕಯೇ, ಗೌರಮ್ಮ. ಮೂಲತಃ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ‌ ಸೋಮನಾಥ ಪುರದ ನಿವಾಸಿ. ಈಕೆ ಕಳೆದ ಮೂರು ವರ್ಷದ ಹಿಂದೆ ಮೈಸೂರಿನಲ್ಲಿ ಶಿಕ್ಷಕನಾಗಿ ಕೆಲಸಮಾಡ್ತಾ ಇದ್ದ ಲೋಹಿತ್ ಎಂಬಾತನ ಜೊತೆ ಮದುವೆಯಾಗಿದ್ಲು. ಅದೇ ರೀತಿ ಸಂಸಾರ ಕೂಡ ತುಂಬಾ ಚೆನ್ನಾಗಿ ಸಾಗ್ತಾ ಇತ್ತು ಅದರ ಫಲವಾಗಿ ಒಂದು ಗಂಡುಮಗುವಿಗೆ ಆಕೆ ಜನ್ಮ ಸುಂದರ ಸಂಸಾರ ನಡೆಸುತ್ತಿದ್ದರು.

ಆದ್ರೆ ವರ್ಷಕಳೆದಂತೆ ಶಿಕ್ಷಕ ಲೋಹಿತ್‌ ಮನೆಯವರ ಹಣದ‌ ಮೋಹ ಹೆಚ್ಚಾಗಿದೆ. ಈಗಾಗಲೆ ಮದುವೆಯಾದ ಮೇಲೆ ಸಾಲ ಸೋಲಾ ಮಾಡಿ 18 ಲಕ್ಷ ಕೊಟ್ಟು ಒಂದು ಮನೆಯನ್ನು ತೆಗೆದುಕೊಟ್ಟಿದ್ರು. ಅಷ್ಟೆ ಅಲ್ಲದೆ ಮದುವೆಯ ಸಮಯದಲ್ಲಿ ಲಕ್ಷ ಲಕ್ಷ ಹಣವನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ರು. ಆದ್ರೆ ಈಗ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದ ಲೋಹಿತ್‌ ಹಾಗೂ ಕುಟುಂಬಸ್ಥರು ಆಕೆಗೆ ಚಿತ್ರಹಿಂಸೆ ನೀಡಿದ್ರು. ಗಂಡನ ಮನೆಯವರ ಕಿರುಕುಳಕ್ಕೆ ಆಕೆ ತಾನೆ ಹೆತ್ತ ಒಂದೂವರೆ ವರ್ಷದ ಮಗುವನ್ನು ತನ್ನ ಮಡಿಲಲ್ಲೆ ಇಟ್ಟುಕೊಂಡು ಬೆಂಕಿ ಹಚ್ಚಿಕೊಂಡು ಇಹಲೋಕ ತ್ಯೇಜಿಸಿದ್ದಾಳೆ. ಹೃದಯ ವಿದ್ರಾವಕವಾಗಿ ಮೃತವಾಗಿರೋ ಗೌರಮ್ಮ ಮುದ್ದು ಕಂದಮ್ಮನ ಜೊತೆ ಪ್ರಾಣ ಬಿಟ್ಟಿದ್ದಾಳೆ.

ಇನ್ನೂ ಕಳೆದ ರಾತ್ರಿ ತನ್ನ ಮನೆಯ ಕೊಠಡಿಯಲ್ಲಿ ತನ್ನ ಒಂದೂವರೆ ವರ್ಷದ ಪುಟ್ಟ ಕಂದ ನಿಯಾಲ್ ತನ್ನ ಮಡಿಲಲ್ಲಿ ಇಟ್ಟುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಆದ್ರೆ ಗೌರಮ್ಮ ಕುಟುಂಬಸ್ಥರು ಮಾತ್ರ ಇದು ಆತ್ಮಹತ್ಯೆ ಅಲ್ಲ ಕೊಲೆ ಅಂತಾ ಆರೋಪ‌ ಮಾಡ್ತಾ ಇದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ ನಮ್ಮ ಹುಡುಗಿ, ಆಕೆಯನ್ನ ತನ್ನ ಗಂಡ ಹಾಗೂ ಅತ್ತೆ, ಮಾವ, ಮೈದ ಸೇರಿ ಕೊಲೆ‌ ಮಾಡಿದ್ದಾರೆ. ಎಲ್ಲರು ಮಗುವನ್ನ ಜೊತೆಯಲ್ಲೆ ಸುಟ್ಟು ಹಾಕಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಆ ಶಿಕ್ಷಕನಿಗೆ ನಮ್ಮ ಮಗಳಂತೆ ಸಾವಿನ ನೋವು ಗೊತ್ತಾಗುವಂತೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು‌ ಮಾಡಿದ್ದಾರೆ.

ಒಟ್ಟಾರೆ, ಗಂಡ ಹೆಂಡತಿ ಜಗಳ ಏನೆ ಇರಲಿ. ಆದರೆ ಬೆಂಕಿ ಹಚ್ಚಿಕೊಳ್ಳುವ ಅಥವಾ ಹಚ್ಚುವ ಈ ಮನಸ್ಥಿತಿಗಳಿಗೆ ನಾವ್ ಏನೂ ಹೇಳಬೇಕೋ ಗೊತ್ತಿಲ್ಲ. ಸದ್ಯ ಇಬ್ಬರ ಜಗಳದಲ್ಲಿ ಏನು ಅರಿಯದ ಪುಟ್ಟ ಕಂದಮ್ಮ ಕೂಡ ಬೆಂಕಿಯಲ್ಲಿ ಬೆಂದು ಹೋಗಿರುವುದು ಮಾತ್ರ ಘೋರ ದುರಂತವೇ ಸರಿ..

ವರದಿ : ಸುರೇಶ್, ಟಿವಿ5 ಮೈಸೂರು..

Next Story

RELATED STORIES