ಬರ್ಮಿಂಗ್ಹ್ಯಾಂನಲ್ಲಿ ಟೀಮ್ ಇಂಡಿಯಾಗೆ ಸೋಲು.!

ಜೀವನ್, ಅಸೋಸಿಯೇಟ್ ಎಡಿಟರ್, ಟಿವಿ5 ಬೆಂಗಳೂರು
ಗೆಲ್ಲಬೇಕು ಅನ್ನೋ ಕನಸು.. ಅದಕ್ಕೆ ಸುವರ್ಣಾವಕಾಶವೂ ಇತ್ತು. ಆದ್ರೆ ಇಂಗ್ಲೆಂಡ್ ತಂಡದ ಟೈಟ್ ಬೌಲಿಂಗ್ ವಿರಾಟ್ ಬಳಗದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತ್ತು. ಸ್ಟೋಕ್ಸ್ ಕೊಟ್ಟ ಸ್ಟ್ರೋಕ್ ಬ್ಯಾಟಿಂಗ್ ಬೆನ್ನುಮೂಳೆ ಮುರಿದಿತ್ತು. ಆ್ಯಂಡರ್ಸನ್, ಬ್ರಾಡ್ ಮತ್ತು ರಶೀದ್ ಟೀಮ್ ಇಂಡಿಯಾದ ರನ್ ಬೇಟೆಗೆ ಕಡಿವಾಣ ಹಾಕಿದ್ದರು. ಬರ್ಮಿಂಗ್ ಹ್ಯಾಂ ಟೆಸ್ಟ್ ಗೆದ್ದು ಇಂಗ್ಲೆಂಡ್ ಮುನ್ನಡೆ ಸಾಧಿಸಿತು.
ಇಂಗ್ಲೆಂಡ್ನಲ್ಲಿ ಇಂಡಿಯಾ ಟೀಂ ಗೆಲ್ಲೋ ಕನಸು ಛಿದ್ರ ಛಿದ್ರ..!
ಬರ್ಮಿಂಗ್ಹ್ಯಾಂನಲ್ಲಿ ಟೀಮ್ ಇಂಡಿಯಾ ಗೆಲ್ಲುತ್ತೆ ಅನ್ನೋ ಕನಸಿತ್ತು. ಇಂಗ್ಲೆಂಡ್ ಅಭಿಮಾನಿಗಳು ಅತಿಥೇಯ ತಂಡ ಪಟ್ಟು ಬಿಡಲ್ಲ ಅನ್ನೋ ಲೆಕ್ಕಾಚಾರದಲ್ಲಿದ್ರು. ಟೀಮ್ ಇಂಡಿಯಾದ ಗೆಲುವಿಗೆ ಬೇಕಿದ್ದಿದ್ದು ಜಸ್ಟ್ 84 ರನ್. ಇಂಗ್ಲೆಂಡ್ ಗೆಲುವಿಗೆ ಬೇಕಿತ್ತು ಐದೇ ಐದು ವಿಕೆಟ್. ಉಪಾಂತ್ಯ ದಿನದ ಆಟ ಬೊಂಬಾಟ್ ಆಗಿ ಆರಂಭವಾಯಿತು. ಟೈಟ್ ಲೈನ್ ಅಂಡ್ ಲೆಂಗ್ತ್ ಇಂಗ್ಲೀಷರ ಮಂತ್ರವಾಗಿದ್ರೆ, ಟೀಮ್ ಇಂಡಿಯಾ ವಿಕೆಟ್ ಉಳಿಸಿಕೊಳ್ಳುವ ಪ್ಲಾನ್ಗೆ ಫಿಕ್ಸ್ ಆಗಿತ್ತು.
ಕಾರ್ತಿಕ್ ವಿಕೆಟ್ ಬೇಟೆಯಾಡಿದ ಆ್ಯಂಡರ್ಸನ್
4ನೇ ದಿನದ ಆರಭದಲ್ಲೇ ಪ್ರವಾಸಿ ತಂಡಕ್ಕೆ ಶಾಕ್ ಆಗಿತ್ತು. ಜೇಮ್ಸ್ ಆ್ಯಂಡರ್ಸನ್ ಸೂಪರ್ ಔಟ್ ಸ್ವಿಂಗರ್ ಮೂಲಕ ಕಾರ್ತಿಕ್ ವಿಕೆಟ್ ಕಬಳಿಸಿದ್ದರು. ವಿರಾಟ್ ಮತ್ತು ಹಾರ್ದಿಕ್ ಪಾಂಡ್ಯಾ ಮೇಲೆ ತಂಡವನ್ನು ಗೆಲ್ಸೋ ಜವಾಬ್ದಾರಿ ಇತ್ತು. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ ವಿರಾಟ್ 2ನೇ ಇನ್ನಿಂಗ್ಸ್ನಲ್ಲೂ ಅರ್ಧಶತಕದ ಕಮಾಲ್ ಮಾಡಿದ್ರು. ಆದ್ರೆ ಗೆಲುವಿಗೆ ಅದು ಸಾಕಾಗಲಿಲ್ಲ.
ಇಂಗ್ಲೆಂಡ್ಗೆ ಸ್ಟೋಕ್ಸ್ ಡಬಲ್ ವಿಕೆಟ್ ಬೋನಸ್..!
ನಿಧಾನವಾಗಿ ಟೀಮ್ ಇಂಡಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದ್ರೆ ದಾಳಿಗಿಳಿದ ಸ್ಟೋಕ್ಸ್ ಟೀಮ್ ಇಂಡಿಯಾದ ಲೆಕ್ಕಾಚಾರವನ್ನು ನುಚ್ಚುನೂರು ಮಾಡಿದ್ರು. 51 ರನ್ಗಳಿಸಿದ್ದ ವಿರಾಟ್ಗೆ ಸ್ಟೋಕ್ಸ್ ಮೊದಲ ಬಲೆ ಹಾಕಿದ್ರು. 3 ಎಸೆತಗಳ ನಂತ್ರ ಮೊಹಮ್ಮದ್ ಶಮಿ ಕೂಡ ಸ್ಟೋಕ್ಸ್ ಬೌಲಿಂಗ್ ಮುಂದೆ ಗ್ಲೌಸ್ ಬಿಚ್ಚಿಡಬೇಕಾಯಿತು.
162 ರನ್ಗೆ ಟೀಮ್ ಇಂಡಿಯಾ ಆಲೌಟ್
ಇಶಾಂತ್ ಹಾರ್ದಿಕ್ ಜೊತೆಗೂಡಿ ಇನ್ನಿಂಗ್ಸ್ ಬೆಳೆಸುವ ಸೂಚನೆ ನೀಡಿದ್ರು. ಆದ್ರೆ ಆದಿಲ್ ರಶೀದ್ ಗೂಗ್ಲಿ ಇಶಾಂತ್ ಆಟವನ್ನು ಖತಂ ಮಾಡಿತ್ತು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಬೆನ್ ಸ್ಟೋಕ್ಸ್ ಸ್ಟ್ರೋಕ್ಗೆ ವಿಕೆಟ್ ಕೈ ಚೆಲ್ಲಿದ್ದರು. ಟೀಮ್ ಇಂಡಿಯಾದ 162 ರನ್ಗಳಿಗೆ ಮಕಾಡೆ ಮಲಗಿತ್ತು. ಬರ್ಮಿಂಗ್ಹ್ಯಾಂನಲ್ಲಿ 31 ರನ್ಗಳ ಸೋಲಿನೊಂದಿಗೆ ಖೇಲ್ ಖತಂ ಆಗಿತ್ತು.
ಮೊದಲ ದಿನ ಟೀಮ್ ಇಂಡಿಯಾ ಮೇಲುಗೈ
ಬರ್ಮಿಂಗ್ ಹ್ಯಾಂ ಟೆಸ್ಟ್ನ ಮೊದಲ ದಿನ ಟೀಮ್ ಇಂಡಿಯಾ ನಿಜಕ್ಕೂ ಮೇಲುಗೈ ಸಾಧಿಸಿತ್ತು. ಇಂಗ್ಲೆಂಡ್ ತಂಡ 9 ವಿಕೆಟ್ ಕಳೆದುಕೊಂಡ್ರೂ ಕೇವಲ 285 ರನ್ಗಳಷ್ಟೇ ದಾಖಲಾಗಿತ್ತು. 2ನೇ ದಿನ ಇಂಗ್ಲೆಂಡ್ ಬೇಗನೆ ಆಲೌಟ್ ಆಗಿತ್ತು. ಆದ್ರೆ ಟೀಮ್ ಇಂಡಿಯಾದ ಆಟ ಕೂಡ ಹೆಚ್ಚು ನಡೆಯಲಿಲ್ಲ. ವಿರಾಟ್ ಶತಕದ ಮೆರುಗು ಬಿಟ್ರೆ ಟೀಮ್ ಇಂಡಿಯಾಕ್ಕೆ ಇನ್ನೇನು ಸಿಕ್ಕಿರಲಿಲ್ಲ. 274 ರನ್ಗಳಗೆ ಆಲೌಟ್ ಆಗಿದ್ದ ಟೀಮ್ ಇಂಡಿಯಾ 13 ರನ್ಗಳ ಇನ್ನಿಂಗ್ಸ್ ಹಿನ್ನಡೆ ಅನುಭವಿತ್ತು. ಅಷ್ಟೇ ಅಲ್ಲ 2ನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡದ 1 ವಿಕೆಟ್ ಪಡೆದುಕೊಂಡು ದಿನದ ಆಟ ಮುಗಿಸಿತ್ತು.
3ನೇ ದಿನ 14 ವಿಕೆಟ್ ಪತನ…!
ಇನ್ನು ಮೂರನೇ ದಿನದ ಆಟದಲ್ಲಿ ಇಂಗ್ಲೆಂಡ್ 9 ವಿಕೆಟ್ಗಳನ್ನು ಕಳೆದುಕೊಂಡು 180 ರನ್ಗಳಿಗೆ ಆಲೌಟ್ ಆಗಿತ್ತು. 194 ರನ್ಗಳ ಗುರಿ ಪಡೆದಿದ್ದ ಟೀಮ್ ಇಂಡಿಯಾ ಕೂಡ ಅದ್ಭುತ ಆಟ ಆಡಲಿಲ್ಲ. 5ವಿಕೆಟ್ ಕಳೆದುಕೊಂಡು 110 ರನ್ಗಳನ್ನಷ್ಟೇ ಗಳಿಸಿತ್ತು.
52 ರನ್ಗಳಿಗೆ ಕೊನೆಯ 5 ವಿಕೆಟ್ ಪತನ
ಗೆಲ್ಲಲು ಟೀಮ್ ಇಂಡಿಯಾಕ್ಕೆ 4ನೇ ದಿನ ಬೇಕಿದ್ದಿದ್ದು ಜಸ್ಟ್ 84 ರನ್ ಆಗಿತ್ತು. ಆದ್ರೆ ಇಂಗ್ಲೆಂಡ್ ಬೌಲರ್ಗಳು ಕಮಾಲ್ ಮಾಡಿದ್ದರು. ಕೊನೆಯ 5 ವಿಕೆಟ್ಗಳನ್ನು ಕೇವಲ 52 ರನ್ಗಳಿಗೆ ಕಬಳಿಸಿ ಬಿಟ್ಟಿದ್ದರು. ಟೀಮ್ ಇಂಡಿಯಾದ ಗೆಲುವಿನ ಕನಸು ನುಚ್ಚುನೂರಾಗಿತ್ತು.
- Birmingham captains Virat Kohli England edged home England to victory england vs india England won the first Test England’s captain Joe Root India in gripping first Test James Anderson took the first wicket Joe Root out kannada news today karnataka news today latest karnataka news topnews tv5 kannada tv5 kannada live tv5 live tv5kannada news