Top

ಸುದೀಪ್-ದರ್ಶನ್​ಗೆ ರೆಬೆಲ್ ರಾಯಭಾರ

ಸುದೀಪ್-ದರ್ಶನ್​ಗೆ ರೆಬೆಲ್ ರಾಯಭಾರ
X

ವರ್ಷದಿಂದ ನಾನೊಂದು ತೀರಾ.. ನೀನೊಂದು ತೀರಾ ಅಂತಿದ್ದ ಸ್ಯಾಂಡಲ್​ವುಡ್ ಸೂಪರ್ ಸ್ಟಾರ್ಸ್​ ದರ್ಶನ್ ಹಾಗೂ ಸುದೀಪ್, ಇದೀಗ ಮತ್ತೆ ಒಂದಾಗ್ತಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ನೇತೃತ್ವದ ರೆಬೆಲ್ ರಾಯಭಾರ ನಿಜಕ್ಕೂ ಸಕ್ಸಸ್ ಆಗೋ ಸೂಚನೆ ಕೊಟ್ಟಿದೆ.

ಸ್ಯಾಂಡಲ್​ವುಡ್ ಅಂಗಳದಲ್ಲಿ ಕುಚಿಕು ಗೆಳೆಯರು ಅಂದಾಕ್ಷಣ ನೆನಪಾಗೋದೇ ಸಾಹಸ ಸಿಂಹ ಡಾ. ವಿಷ್ಣುವರ್ಧನ್- ರೆಬೆಲ್ ಸ್ಟಾರ್ ಅಂಬರೀಶ್. ಅದನ್ನ ಮತ್ತೊಂದು ಜನರೇಷನ್​ಗೂ ಮುಂದುವರೆಸಿದ ನಟರು ಅಂದರೆ ಅದು ದರ್ಶನ್ ಮತ್ತು ಸುದೀಪ್.

ಆದರೆ ಇವರ ನಡುವಿನ ಸಂಬಂಧ ಕಳೆದ ಮಾರ್ಚ್​ನಲ್ಲಿ ಮುರಿದು ಬಿದ್ದಿತ್ತು. ಕಾರಣಾಂತರಗಳಿಂದ ನಾವಿಬ್ಬರೂ ಒಂದೇ ಚಿತ್ರರಂಗದ ಕಲಾವಿದರಷ್ಟೇ ಹೊರತು, ಗೆಳೆಯರಲ್ಲ ಅಂತ ಖುದ್ದು ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.

ಅದಾದ ಬಳಿಕ ಇವರಿಬ್ಬರೂ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಿದರ್ಶನವೇ ಇಲ್ಲ. ಆದರೀಗ ಅಂಬರೀಶ್ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿರುವ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದ ಮೂಲಕ ಸುದೀಪ್- ದರ್ಶನ್ ಒಂದಾಗ್ತಿದ್ದಾರೆ. ಇದೇ ಆಗಸ್ಟ್ 10ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೃಹತ್ಕಾ ಕಾರ್ಯಕ್ರಮದಲ್ಲಿ ಕುಚಿಕು ಗೆಳೆಯರು ಒಂದಾಗ್ತಿದ್ದಾರೆ ಎನ್ನಲಾಗ್ತಿದೆ.

ಇಡೀ ಚಿತ್ರರಂಗದ ಸ್ಟಾರ್ಸ್​ನ ಒಂದೇ ವೇದಿಕೆಗೆ ಸೇರಿಸುವ ನಿಟ್ಟಿನಲ್ಲಿ ಅಂಬರೀಶ್ ಅವರೇ ಖುದ್ದು, ಎಲ್ಲಾ ಕನ್ನಡದ ಸ್ಟಾರ್ ನಟರಿಗೂ ಆಹ್ವಾನ ನೀಡುತ್ತಿದ್ದಾರೆ. ಹಾಗೆಯೇ ದರ್ಶನ್​ಗೂ ಆಹ್ವಾನ ನೀಡಿದ್ದಾರೆ. ಅಂಬರೀಶ್ ಕರೆದ ಮೇಲೆ ದರ್ಶನ್ ಹಾಜರಾತಿ ಇದ್ದೇ ಇರುತ್ತೆ. ಇನ್ನು ಇದು ಜಾಕ್ ಮಂಜು ಹಾಗೂ ಸುದೀಪ್​ರ ಹೋಮ್ ಪ್ರೊಡಕ್ಷನ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್​ನ ಸಿನಿಮಾ ಆದ್ದರಿಂದ, ಇಲ್ಲಿ ಸುದೀಪ್- ದರ್ಶನ್ ಪರಸ್ಪರ ಮಾತನಾಡಲಿದ್ದಾರೆ. ಈ ಕುರಿತು ಅಂಬಿ ಅದರ ಸಂಧಾನ ಜವಾಬ್ದಾರಿ ಹೊತ್ತಿದ್ದಾರೆ ಎನ್ನಲಾಗ್ತಿದೆ. ಅದೇನೇ ಇರಲಿ, ಇವರು ಒಂದಾಗ್ತಿರೋದು ಬರೀ ಅಭಿಮಾನಿಗಳಿಗಷ್ಟೇ ಅಲ್ಲ, ಚಿತ್ರರಂಗಕ್ಕೂ ಖುಷಿಯ ವಿಚಾರ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಮುಖ್ಯಸ್ಥ, ಟಿವಿ5

Next Story

RELATED STORIES