Top

ಕೊನೆಗೂ ಬದಲಾಯ್ತು ಒಡೆಯರ್ ಸಿನಿಮಾ ಟೈಟಲ್

ಕೊನೆಗೂ ಬದಲಾಯ್ತು ಒಡೆಯರ್ ಸಿನಿಮಾ ಟೈಟಲ್
X

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯರ್ ಸಿನಿಮಾ ಟೈಟಲ್ ಬದಲಾಯಿಸಲಾಗಿದೆ. ಹಲವು ದಿನಗಳಿಂದ ಈ ಸುದ್ದಿ ಚರ್ಚೆಯಲ್ಲಿದ್ದು, ಒಡೆಯರ್ ಹೆಸರು ಮೈಸೂರು ರಾಜಮನೆತನಕ್ಕೆ ಸೇರಿದ್ದು, ಆ ಹೆಸರನ್ನ ಸಿನಿಮಾ ಟೈಟಲ್ ಆಗಿ ಬಳಸಬಾರದೆಂದು ಹಲವು ಸಂಘಟನೆಗಳು ಪ್ರತಿಭಟನೆ ಮಾಡಿ, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

ಒಡೆಯರ್ ಟೈಟಲ್‌ಗೆ ವಿರೋಧಿಸಿದ ಹಿನ್ನೆಲೆ, ನಿರ್ಮಾಪಕ ಸಂದೇಶ್ ಟೈಟಲ್ ಬದಲಾಯಿಸಿ, ಒಡೆಯ ಎಂದು ಮರುನಾಮಕರಣ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎನ್.ಸಂದೇಶ್ ಟೈಟಲ್ ಕಾರ್ಡ್ ಪೋಸ್ಟ್ ಮಾಡಿದ್ದಾರೆ.

Next Story

RELATED STORIES