Top

ಮುರಿದು ಬೀಳುತ್ತಾ ಕಿರಿಕ್ ಜೋಡಿ ಮದುವೆ..?

ಮುರಿದು ಬೀಳುತ್ತಾ ಕಿರಿಕ್ ಜೋಡಿ ಮದುವೆ..?
X

ಕಳೆದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಮದುವೆ ಮುರಿದು ಬೀಳುತ್ತೆ ಅನ್ನೋ ಸುದ್ದಿಗಳು ಹರಿದಾಡ್ತಿತ್ತು. ಈ ವಿಚಾರಕ್ಕೆ ಸಂಬಂಧಿಸಿ TV5ಗೆ ಪ್ರತಿಕ್ರಿಯಿಸಿರೋ ರಶ್ಮಿಕಾ ಮಂದಣ್ಣ ಇದೆಲ್ಲಾ ಸುಳ್ಳು ಸುದ್ದಿ, ನಾವು ಅನೋನ್ಯವಾಗಿ ಇದ್ದೀವಿ, ಮದುವೆ ಆಗ್ತೀವಿ ಅಂತ ಹೇಳಿದ್ದಾರೆ.

ತೆಲುಗು ಮತ್ತು ಇಂಗ್ಲೀಷ್ ವೆಬ್​ ಸೈಟ್​ಗಳಲ್ಲಿ ಬರ್ತಿರೋ ಸುದ್ದಿ ಸುಳ್ಳು, ಇದನ್ನ ಯಾರು ನಂಬಬೇಡಿ ಅಂತ ತಿಳಿಸಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಪರಸ್ಪರ ಪ್ರೀತಿಸಿ ಮದುವೆ ಆಗೋಕೆ ನಿರ್ಧರಿಸಿದ್ದರು. ಕಳೆದ ವರ್ಷ ಜುಲೈ 4ರಂದು ವೀರಾಜಪೇಟೆಯಲ್ಲಿ ಬಹಳ ಅದ್ದೂರಿಯಾಗಿ ಇವರಿಬ್ಬರ ಎಂಗೇಜ್ಮೆಂಟ್ ನಡೆದಿತ್ತು. ಸದ್ಯ ಕೊಡಗಿನ ಕುವರಿ ರಶ್ಮಿಕಾ ಸೌತ್ ಸಿನಿದುನಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

Next Story

RELATED STORIES