Top

ಕರುವಿನ ಮೇಲೆ ಕಿ..ಕಿ.. ಡ್ಯಾನ್ಸ್ ಮಾಡಿದ ಮಕ್ಕಳು, ವೀಡಿಯೋ ವೈರಲ್

ಕರುವಿನ ಮೇಲೆ ಕಿ..ಕಿ.. ಡ್ಯಾನ್ಸ್ ಮಾಡಿದ ಮಕ್ಕಳು, ವೀಡಿಯೋ ವೈರಲ್
X

ಮೈಸೂರು: ಎಲ್ಲೆಲ್ಲೂ ಕಿಕಿ ಹಾಡಿನದ್ದೇ ಸದ್ದು, ಈ ಕಿಕಿ ಡ್ಯಾನ್ಸ್ ಯಾವ ಮಟ್ಟಿಗೆ ತನ್ನ ಹವಾ ಸೃಷ್ಟಿಸಿದೆ ಅಂದ್ರೆ, ಸೆಲೆಬ್ರಿಟಿಯಿಂದ ಹಳ್ಳಿಯ ಹುಡುಗರ ಮಟ್ಟಿಗೂ ಆವರಿಸಿದೆ. ಈ ಕಿಕಿ ಡ್ಯಾನ್ಸ್ ಹಾಡಲು ಹೋದ ಹಳ್ಳಿ ಹೈದರು ನೆಲದ ಮೇಲೆ ಬಿದ್ದು ಹೊರಳಾಡಿದ್ದಾರೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬರಗೇನಗಳ್ಳಿ ಗ್ರಾಮದಲ್ಲಿ ನಡೆದಿದೆ. ಮೂರನೇ ತರಗತಿಯ, ಇಬ್ಬರು ಬಾಲಕರು ವಿಶೇಷ ರೀತಿಯಲ್ಲಿ ಕಿಕಿ ಹಾಡಿಗೆ ನೃತ್ಯ ಮಾಡಲು, ಕಾರಿನ ಬದಲು ಹಸುವಿನ ಕರುವನ್ನು ಆರಿಸಿಕೊಂಡಿದ್ದಾರೆ.

ಈ ಇಬ್ಬರು ಪೋರರಲ್ಲಿ ಒಬ್ಬ ಬಾಲಕ ಹಸುವಿನ ಕರು ಮೇಲೆ ಕುಳಿತು ಕಿಕಿ ಹಾಡಿದರೇ, ಮತ್ತೊಬ್ಬ ಕರುವಿನ ಪಕ್ಕದಲ್ಲೇ ನಿಂತು ನೃತ್ಯ ಮಾಡಿದ್ದಾನೆ. ಇನ್ನೂ ಈ ವಿಡಿಯೋ ಕಿಕಿ ಹಾಡನ್ನು ಅಣಕಿಸುವಂತಿದೆ. ಕಿಕಿ ಡ್ಯಾನ್ಸ್ ಯಾವ ಮಟ್ಟಿಗೆ ಅಪಾಯಕಾರಿ ಎಂಬುದನ್ನ ಈ ಅಣಕು ದೃಶ್ಯದಂದಲು ಕಾಣಬಹುದಾಗಿದೆ. ಇನ್ನೂ ಈ ವಿಡಿಯೋ ನೆಲಮಂಗಲ ತಾಲೂಕಿನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಶಿಷ್ಟ ವಿಭಿನ್ನ ಕಿಕಿ ಹಾಡಿನ ದೃಶ್ಯ ಹಲವೆಡೆ ಹರಿದಾಡುತ್ತಿದೆ. ತನ್ನದೇ ರೀತಿಯಲ್ಲಿ ಹವಾ ಸೃಷ್ಟಿಸಿದೆ.

Next Story

RELATED STORIES