Top

ಟಿಪ್ ಟಾಪ್ ಬೆಡಗಿಯರ ಹೈಟೆಕ್ ಭಿಕ್ಷಾಟನೆ

ಟಿಪ್ ಟಾಪ್ ಬೆಡಗಿಯರ ಹೈಟೆಕ್ ಭಿಕ್ಷಾಟನೆ
X

ಮಂಗಳೂರು: ಭಿಕ್ಷುಕರು ಅಂದರೆ ಹೇಗಿರುತ್ತಾರೆ? ಹರಿದ ಬಟ್ಟೆ, ಸ್ನಾನ ಮಾಡದ ಕೊಳಕು ಮೈ.. ಅಂಗವಿಕಲರು, ಮನೆಯಿಂದ ಹೊರದಬ್ಬಲ್ಪಟ್ಟ ವೃದ್ಧರು.. ಹೀಗೆ ನಾನಾ ರೀತಿಯ ಜನರನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲಿ ಕೆಲವರು ಹೈಟೆಕ್ ಭಿಕ್ಷಾಟನೆ ಮೂಲಕ ಸಾವಿರಾರು ರೂಪಾಯಿ ಸಂಗ್ರಹಿಸುತ್ತಿದ್ದಾರೆ.

ಹೌದು, ಮಂಗಳೂರಿನಲ್ಲಿ ಟಿಪ್​ಟಾಪ್ ಆಗಿ ಡ್ರೆಸ್ ಮಾಡ್ಕೊಂಡು, ರಸೀದಿ ಪುಸ್ತಕ ಇಟ್ಟುಕೊಂಡು ಒಬ್ಬೊಬ್ಬರಿಂದ ನೂರರಿಂದ ಸಾವಿರಾರು ರೂಪಾಯಿ ವಸೂಲು ಮಾಡುತ್ತಿರುವುದು ಕಂಡು ಬಂದಿದ್ದು, ವ್ಯಕ್ತಿಯೊಬ್ಬ ಇದನ್ನು ಬಯಲಿಗೆ ಎಳೆದಿದ್ದಾರೆ.

ಟಿಪ್ ಟಾಪ್ ಆಗಿರುವ ಯುವತಿಯರ ಗುಂಪು ಗುಂಪಾಗಿ ಓಡಾಡುತ್ತಾ.. ತಾವು ರಾಜಸ್ಥಾನದ ನಿರಾಶ್ರಿತರು. ಪ್ರಕೃತಿ ವಿಕೋಪದಲ್ಲಿ ನಮ್ಮ ಮನೆ, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡಿದ್ದೇವೆ. ಊಟ ಬಟ್ಟೆಗೂ ಕಷ್ಟವಿದೆ. ಆದರಿಂದ ನಮಗೆ ಸಹಾಯ ಮಾಡಿ ಅಂತಾ ಕೇಳುತ್ತಾರೆ. ಇನ್ನು ಹುಡುಗರು ಸಿಕ್ಕರೆ ಅವರ ಮೈಕೈ ಮುಟ್ಟಿ ಮಾತನಾಡಿಸಿ ಹಣ ಕೇಳುತ್ತಾರೆ. ಯಾರಾದ್ರು 20 ರೂಪಾಯಿ ಕೊಟ್ಟರೆ ಅದರ ಮುಂದೆ 2 ಸೊನ್ನೆ ಸೇರಿಸಿ ಬರೆದುಕೊಂಡು 2000 ಸಾವಿರ ಶೋ ಮಾಡುತ್ತಾರೆ. ಅದನ್ನು ನೋಡಿದವರು 200 ರೂಪಾಯಿಯಾದರೂ ವಸೂಲು ಮಾಡುತ್ತಿದ್ದಾರೆ.

ಮಂಗಳೂರಿನ ಕದ್ರಿ ಪಾರ್ಕ್ ಬಳಿ ಇವರು ಹಣ ಕೇಳುತ್ತಿದ್ದಾಗ ಮಂಗಳೂರು ನಿವಾಸಿ ಸೌರಾಜ್ ಎನ್ನುವವರು ಈ ಯುವತಿಯರನ್ನು ನೋಡಿ ತರಾಟೆಗೆ ತೆಗೆದುಕೊಂಡು ನಂತರ ಕದ್ರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಜಸ್ಥಾನದವರು ಅನ್ನೊದಕ್ಕೆ ಮತ್ತು ಪ್ರಕೃತಿ ವಿಕೋಪದ ಸಂತ್ರಸ್ತರು ಅನ್ನೊದಕ್ಕೆ ಯಾವುದು ದಾಖಲೆಗಳು ಅವರ ಬಳಿಯಿಲ್ಲ. ಬಂಗಾಳ ಅಥವಾ ಬಿಹಾರದಿಂದ ಬಂದು ಹೀಗೆ ಹೈಟೆಕ್ ಭೀಕ್ಷಾಟನೆ ಮಾಡುತ್ತಿದ್ದಾರೆ ಅನ್ನೊದು ಸೌರಾಜ್ ಆರೋಪ.

ಇದು ದೊಡ್ಡ ದಂಧೆಯಂತೆ ಕಾಣುತ್ತಿದ್ದು ಇದರ ಹಿಂದೆ ದೊಡ್ಡ ಗ್ಯಾಂಗ್ ಇರಬಹುದು. ಇವರು ಮಂಗಳೂರಿಗರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಅಂತಾ ಆರೋಪಿಸಿದ್ದಾರೆ. ಇನ್ನು ಕದ್ರಿ ಪೊಲೀಸರು ಇವರ ಮೇಲೆ ಪಿಟಿ ಕೇಸ್ ಹಾಕಿ ಬಿಟ್ಟು ಕಳುಹಿಸಿದ್ದಾರೆ. ಆದ್ರೆ ಇಂದು ಇದೇ ಗ್ಯಾಂಗ್ ಉಡುಪಿಯಲ್ಲಿ ಇದೇ ರೀತಿ ಮಾಡುತ್ತಿರೋದು ಗೊತ್ತಾಗಿದೆ. ಈ ಗ್ಯಾಂಗ್ ವಿರುದ್ಧ ಕ್ರಮ ಕೈಗೊಳ್ಳಿ ಅನ್ನೊದು ಮಂಗಳೂರಿಗರ ಆಗ್ರಹವಾಗಿದೆ.

Next Story

RELATED STORIES