Top

ಇಂಗ್ಲೆಂಡ್ ಶಾಂತಿ ಕದಡಿದ ಇಶಾಂತ್​: ಭಾರತಕ್ಕೆ 194 ರನ್ ಗುರಿ

ಇಂಗ್ಲೆಂಡ್ ಶಾಂತಿ ಕದಡಿದ ಇಶಾಂತ್​: ಭಾರತಕ್ಕೆ 194 ರನ್ ಗುರಿ
X

ಮಧ್ಯಮ ವೇಗಿ ಇಶಾಂತ್ ಶರ್ಮ ಮತ್ತು ಸ್ಪಿನ್ನರ್ ಆರ್. ಅಶ್ವಿನ್ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್​ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದೆ. ಇದರೊಂದಿಗೆ ಭಾರತ ಮೊದಲ ಇನಿಂಗ್ಸ್ ನಲ್ಲಿ 13 ರನ್ ಗಳ ಅಲ್ಪ ಹಿನ್ನಡೆ ಗಳಿಸಿದರೂ ಗೆಲುವು ಸಾಧಿಸುವ ಉತ್ತಮ ಅವಕಾಶ ಹೊಂದಿದೆ.

ಪಂದ್ಯದ ಮೂರನೇ ದಿನವಾದ ಶುಕ್ರವಾರ 1 ವಿಕೆಟ್​ಗೆ 9 ರನ್ ಗಳಿಂದ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಚಹಾ ವಿರಾಮಕ್ಕೂ ಮುನ್ನವೇ 180 ರನ್ ಗಳಿಗೆ ಆಲೌಟಾಯಿತು. ಮೊದಲ ಇನಿಂಗ್ಸ್ ನಲ್ಲಿ 13 ರನ್ ಹಿನ್ನಡೆ ಗಳಿಸಿರುವ ಭಾರತ ಉಳಿದ ಎರಡೂವರೆ ದಿನದಾಟದಲ್ಲಿ 194 ರನ್ ಗೆಲ್ಲಬೇಕಾದ ಸುಲಭ ಸವಾಲು ಪಡೆದಿದೆ.

ಮಧ್ಯಮ ವೇಗಿ ಇಶಾಂತ್ ಶರ್ಮ 5 ವಿಕೆಟ್ ಕಬಳಿಸಿದರೆ, ಆರ್​.ಅಶ್ವಿನ್ 3 ವಿಕೆಟ್ ಕಿತ್ತರು. ಕೊನೆಯ 2 ವಿಕೆಟ್​ಗಳನ್ನು ಉಮೇಶ್ ಯಾದವ್ ಪಡೆದರು. ಇಂಗ್ಲೆಂಡ್ ಪರ ಜಾನಿ ಕುರಾನ್ 65 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 63 ರನ್ ಬಾರಿಸಿ ಔಟಾದರು.

  • ಸಂಕ್ಷಿಪ್ತ ಸ್ಕೋರ್
  • ಇಂಗ್ಲೆಂಡ್ ಮೊದಲ ಇನಿಂಗ್ಸ್ 287
  • ಭಾರತ ಮೊದಲ ಇನಿಂಗ್ಸ್ 274
  • ಇಂಗ್ಲೆಂಡ್ ಎರಡನೇ ಇನಿಂಗ್ಸ್ 54 ಓವರ್ 180 (ಕುರಾನ್ 63, ಬೇರ್ ಸ್ಟೊ 28, ಮಲಾನ್ 20, ಇಶಾಂತ್ 51/5, ಅಶ್ವಿನ್ 59/3, ಉಮೇಶ್ 20/2).

Next Story

RELATED STORIES