Top

ಇಂಗ್ಲೆಂಡ್‌ನಲ್ಲಿ ಕೊಹ್ಲಿ ಚೊಚ್ಚಲ ಶತಕ: ಭಾರತಕ್ಕೆ ಅಲ್ಪ ಹಿನ್ನಡೆ

ಇಂಗ್ಲೆಂಡ್‌ನಲ್ಲಿ ಕೊಹ್ಲಿ ಚೊಚ್ಚಲ ಶತಕ: ಭಾರತಕ್ಕೆ ಅಲ್ಪ ಹಿನ್ನಡೆ
X

ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬಸ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಶತಕ ಸಿಡಿಸಿದರು. ಕೊಹ್ಲಿ ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತ ಮೊದಲ ಇನಿಂಗ್ಸ್ ನಲ್ಲಿ ಅಲ್ಪ ಹಿನ್ನಡೆಗೆ ಸಿಲುಕಿತು.

ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 287 ರನ್ ಗಳಿಗೆ ಆಲೌಟ್ ಮಾಡಿದ ಭಾರತ ಎರಡನೇ ದಿನ 274 ರನ್ ಗಳಿಗೆ ಆಲೌಟಾಯಿತು. ಇದರೊಂದಿಗೆ ಭಾರತ 13 ರನ್ ಗಳ ಅಲ್ಪ ಹಿನ್ನಡೆಗೆ ಒಳಗಾಯಿತು. ದಿನದಾಂತ್ಯಕ್ಕೆ ಇಂಗ್ಲೆಂಡ್ ಎರಡನೇ ಇನಿಂಗ್ಸ್ ನಲ್ಲಿ 9 ರನ್ ಗೆ 1ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿದೆ.

ಭಾರತ ತಂಡ ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ವೈಫಲ್ಯದಿಂದ ಬೃಹತ್ ಮೊತ್ತ ಕಲೆ ಹಾಕುವ ಅವಕಾಶ ಕಳೆದುಕೊಂಡಿತು. ಭಾರತ ಮೊದಲ ಇನಿಂಗ್ಸ್ 274 ರನ್ ಗಳಿಗೆ ಅಂತ್ಯಗೊಂಡಿತು. ಇದರೊಂದಿಗೆ ಆತಿಥೇಯ ತಂಡದ ವಿರುದ್ಧ ಭಾರತ 13 ರನ್ ಗಳ ಅಲ್ಪ ಹಿನ್ನಡೆಗೆ ಒಳಗಾಯಿತು.

ಆದರೆ ನೆಲಕಚ್ಚಿ ನಿಂತು ಆಡಿದ 29 ವರ್ಷದ ವಿರಾಟ್ ಕೊಹ್ಲಿ ಬೆನ್ ಸ್ಟೋಕ್ ಎಸೆತದಲ್ಲಿ ಸ್ಕಾರ್ ಕಟ್ ಮೂಲಕ ಶತಕ ಪೂರೈಸಿದರು. 172 ಎಸೆತಗಳನ್ನು ಎದುರಿಸಿದ ಕೊಹ್ಲಿ 14 ಮನಮೋಹಕ ಬೌಂಡರಿ ಸಿಡಿಸಿದರು. ಇದು ಕೊಹ್ಲಿ ಅವರ 22ನೇ ಟೆಸ್ಟ್ ಶತಕವಾಗಿದೆ. ಅಂತಿಮವಾಗಿ ಕೊಹ್ಲಿ 225 ಎಸೆತಗಳಲ್ಲಿ 22 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 149 ರನ್ ಬಾರಿಸಿ ಕೊನೆಯವರಾಗಿ ಔಟಾದರು.

ಡೇವಿಡ್ ಮಲಾನ್ ನೀಡಿದ 2 ಜೀವದಾನಗಳ ಲಾಭ ಪಡೆದ ಕೊಹ್ಲಿ ಶತಕ ಪೂರೈಸುವಲ್ಲಿ ಯಶಸ್ವಿಯಾದರು. ಕೊಹ್ಲಿ 21 ರನ್ ಗಳಿಸಿದ್ದಾಗ ಜೇಮ್ಸ್ ಆ್ಯಂಡರ್ಸನ್ ಎಸೆತದಲ್ಲಿ ಎರಡನೇ ಸ್ಲಿಪ್ ನಲ್ಲಿ ಡೇವಿಡ್ ಮಲಾನ್ ನೀಡಿದರೆ, 50 ರನ್ ಪೂರೈಸಿದ ಬೆನ್ನಲ್ಲೇ ಇದೇ ಡೇವಿಡ್ ಮಲಾನ್ ಮತ್ತೊಂದು ಜೀವದಾನ ನೀಡಿದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನಿಂಗ್ಸ್ 89.4 ಓವರ್ 287 ಮತ್ತು 2ನೇ ಇನಿಂಗ್ಸ್ 3.4 ಓವರ್ 1 ವಿಕೆಟ್ ಗೆ 9

ಭಾರತ ಮೊದಲ ಇನಿಂಗ್ಸ್ 75 ಓವರ್ 9 ವಿಕೆಟ್ 274 (ಕೊಹ್ಲಿ ಅಜೇಯ 143, ಧವನ್ 26, ಮುರಳಿ 20, ಹಾರ್ದಿಕ್ 22, ಕುರಾನ್ 74/4, ಜೇಮ್ಸ್ ಆ್ಯಂಡರ್ಸನ್ 41/2, ಬೆನ್ ಸ್ಟೋಕ್ಸ್ 73/2).

Next Story

RELATED STORIES