Top

ಪೊಲೀಸ್ ನಾಯಿ ಕೊಲ್ಲಲು 5 ಲಕ್ಷ ರೂ. ಬಹುಮಾನ ಘೋಷಣೆ!

ಪೊಲೀಸ್ ನಾಯಿ ಕೊಲ್ಲಲು 5 ಲಕ್ಷ ರೂ. ಬಹುಮಾನ ಘೋಷಣೆ!
X

6 ವರ್ಷದ ಈ ಜರ್ಮನ್ ಶೆರ್ಪಡ್ ನಾಯಿ ಕೊಂದರೆ 7 ಸಾವಿರ ಡಾಲರ್ ಅಂದರೆ ಸುಮಾರು 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ ಪೊಲೀಸ್ ಇಲಾಖೆಗೆ ತಲೆನೋವು ಶುರುವಾಗಿದೆ.

ಸಾಂಬ್ರಾ ಹೆಸರಿನ ಈ ಶ್ವಾನ ಕೊಲಂಬಿಯಾದಲ್ಲಿ ಡ್ರಗ್ ಡೀಲರ್​ಗಳ ನಿದ್ದೆಗೆಡಿಸಿದೆ. ಸಾಂಬ್ರಾ ಹಾಗೂ ಅದರ ನೇತೃತ್ವದ ಶ್ವಾನದಳ ದೇಶದಲ್ಲಿ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಡ್ರಗ್ಸ್ ಸಂಗ್ರಹವನ್ನು ಪತ್ತೆ ಹಚ್ಚುತ್ತಿವೆ. ಇವುಗಳ ಯಶಸ್ವಿ ಕಾರ್ಯಾಚರಣೆಯಿಂದ ಬೆಚ್ಚಿಬಿದ್ದಿರುವ ಡ್ರಗ್ಸ್ ಸ್ಮಗ್ಲರ್ಸ್​, ಸಾಂಬ್ರಾ ಹಾಗೂ ಇತರೆ ನಾಯಿಗಳ ಹತ್ತೆಗೆ ಬಹುಮಾನ ಘೋಷಿಸಿದ್ದಾರೆ.

ಇದರಿಂದ ಶ್ವಾನದಳ ತರಬೇತುದಾರರು ಚಿಂತೆಗೀಡಾಗಿದ್ದು, ಶ್ವಾನದಳಕ್ಕೆ ರಕ್ಷಣೆ ನೀಡುವ ಬಗ್ಗೆ ಚಿಂತಿಸುತ್ತಿದ್ದಾರೆ. ಇಷ್ಟು ದೊಡ್ಡ ಮೊತ್ತದ ಆಮೀಷ ಒಡ್ಡಿದರೆ ಯಾರಾದರೂ ಈ ಹಾನಿ ಮಾಡಿದರೆ ಕಷ್ಟ ಎಂದು ಹೇಳಿದ್ದಾರೆ.

ಸಾಂಬ್ರಾ 2016ರಲ್ಲಿಬೆಲ್ಜಿಯಂಗೆ ಸಾಗಿಸಲು ಬಂದರಿನಲ್ಲಿ ಬಾಳೆಹಣ್ಣುಗಳ ಮಧ್ಯೆ ಇರಿಸಿದ್ದ 2.9 ಟನ್ ಕೊಕೆನ್ ಪತ್ತೆ ಹಚ್ಚಿತ್ತು. ನಂತರ ಕೆರಿಬಿಯನ್ ನಗರದ ಸಂತ ಮಂತ್ರದಲ್ಲಿ ಹಣ್ಣುಗಳ ಮಧ್ಯೆ ಇರಿಸಿದ್ದ 1.1 ಟನ್ ಕೋಕ್ ಕ್ಯಾಚಿ ಎಂಬ ಡ್ರಗ್ಸ್ ಸುಳಿವು ಕಂಡು ಹಿಡಿದಿತ್ತು.

Next Story

RELATED STORIES