Top

ಗುರು ಶಿಷ್ಯರ ಭೇಟಿಗೆ ವೇದಿಕೆ ಸಿದ್ದತೆ

ಗುರು ಶಿಷ್ಯರ ಭೇಟಿಗೆ ವೇದಿಕೆ ಸಿದ್ದತೆ
X

ಮೈಸೂರು : ನಾನೊಂದು ತೀರ ನೀನೊಂದು ತೀರ ಎಂಬಂತಿರುವ ಗುರು-ಶಿಷ್ಯರಾದ ಶಾಸಕ ವಿಶ್ವನಾಥ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವ್ರನ್ನ ಒಂದೂಗೂಡಿಸಲು ವೇದಿಕೆ ಸಜ್ಜಾಗುತ್ತಿದೆ. ಅದಕ್ಕಾಗಿ ಸ್ವತಹ ಕಾಗಿನೆಲೆ ಭಕ್ತರು ವೇದಿಕೆ ಸಿದ್ಧತೆ ಬಗ್ಗೆ ಸಭೆ ನಡೆಸಲಿದ್ದು, ಈ ವಾರದ ಕೊನೆಯಲ್ಲಿ ಮೊದಲಿಗೆ ಕಾಗಿನೆಲೆ ಶ್ರೀಗಳು ಹಾಗೂ ವಿಶ್ವನಾಥ್ರ ಮುಖಾಮುಖಿಗೆ ಪ್ಲ್ಯಾನ್ ನಡೆಯುತ್ತಿದೆ. ಈ ಮೂಲಕ ಸ್ವಾಮೀಜಿಗಳ ಮೇಲೆ ಮುನಿಸಿಕೊಂಡಿರುವ ವಿಶ್ವನಾಥ್‌ಗೆ ಸಮಾಧಾನ ಮಾಡಲು ಕಾಗಿನೆಲೆ ಭಕ್ತರು ಯತ್ನಿಸುತ್ತಿದ್ದಾರೆ.

ಕುರುಬ ಸಮಾಜದ ಅಧಿಕಾರಿಗಳನ್ನ ಏಕಾಏಕಿ ವರ್ಗಾವಣೆ ಮಾಡಿದ್ದು ಸರಿಯಿಲ್ಲ, ಸಿದ್ದರಾಮಯ್ಯನವ್ರನ್ನ ಪರಿಗಣನೆಗೆ ತೆಗೆದುಕೊಳ್ಳಬೇಕು ಅಂತ ಕಾಗಿನೆಲೆ ಶ್ರೀಗಳು ಕಿಡಿಕಾರಿ, ಸಿದ್ದರಾಮಯ್ಯನವ್ರ ಪರ ಬ್ಯಾಟ್ ಮಾಡಿದ್ದೆ ತಡ ಹಳ್ಳಿಹಕ್ಕಿ ಶ್ರೀಗಳ ವಿರುದ್ಧವೇ ಕುಟುಕಿತ್ತು. ನನಗೆ ಅನ್ಯಾಯಾವಾದಾಗ ಎಲ್ಲಿ ಹೋಗಿದ್ರು ಇವ್ರು.? ಇವಾಗ ಸಿದ್ದರಾಮಯ್ಯ ಪರ ಬ್ಯಾಟ್ ಮಾಡುತ್ತಿದ್ದಾರೆ. ಸ್ವಾಮೀಜಿಗಳು ರಾಜಕಾರಣದ ಮಾತುಗಳ ಆಡಬಾರದು ಅವ್ರ ಪಾಡಿಗೆ ಧರ್ಮ ಕಾಪಾಡುತ್ತಾ..? ಮಠದ ಆಡಳಿತ ನೋಡಿಕೊಳ್ಳಲಿ ಎಂದು ಟಾಂಗ್ ಕೊಟ್ಟಿದ್ರು.

https://www.youtube.com/watch?v=IDqrM3pWSwE&list=PLmylWU4EY3N9gD5JWuWNqw5S_XHugS1np&index=35

ಇದಾದ ಕೆಲವೇ ಗಂಟೆಗಳ ಅಂತರದಲ್ಲಿ ಮತ್ತೇ ಕಾಗಿನೆಲೆ ಶ್ರೀಗಳು ಪ್ರತಿಕ್ರಿಯೆ ಕೊಟ್ಟು ಆನೆ-ಧೂಳು, ನೀರು ಎಂದು ಉದಾಹರಣೆ ಸಮೇತ ಮತ್ತೇ ಹಳ್ಳಿಹಕ್ಕಿಗೆ ಕೆಣಕ್ಕಿದ್ರು. ಇದ್ರಿಂದ ಬೇಸರಗೊಂಡ ಕಾಗಿನೆಲೆ ಭಕ್ತ ವೃದ್ಧ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ರಾಜಕೀಯ ತೆವಲಾಟಕ್ಕೆ ವೈಯಕ್ತಿಕ ವಿಚಾರ ತರಬಾರದು. ಸ್ವಾಮೀಜಿ ಹಾಗೂ ಕುರುಬ ಸಮಾಜ ಯಾವುದೇ ಕಾರಣಕ್ಕೂ ವಿಶ್ವನಾಥ್ರನ್ನ ದೂರ ಮಾಡಿಲ್ಲ. ಹಾಗಾಗಿ ಮಠ ಹಾಗೂ ಸ್ವಾಮೀಜಿಯನ್ನ ನಿಮ್ಮ ವೈಯಕ್ತಿಕ ವಿಚಾರದಲ್ಲಿ ತರಬೇಡಿ ಎಂದಿದ್ದಾರೆ.

ಇನ್ನೂ ಈ ವಿಚಾರದಿಂದ ಮತ್ತಷ್ಟು ಮುನಿಸಿಕೊಂಡಿರುವ ಶಾಸಕ ವಿಶ್ವನಾಥ್ರನ್ನ ಮನವೊಲಿಸಲು ಮಾಜಿ ಸಿಎಂ ಸಿದ್ದರಾಮಯ್ಯರನ್ನ ಕರೆತರಲು ಪ್ಲ್ಯಾನ್ ಕೂಡ ನಡೆಯುತ್ತಿದೆ. ಅದರಂತೆ ಮೊದಲಿಗೆ ಈ ವಾರದ ಕೊನೆಯಲ್ಲಿ ಕಾಗಿನೆಲೆ ಮಠದಲ್ಲಿ ಸಭೆಯ ಮೂಲಕ ವಿಶ್ವನಾಥ್ ಹಾಗೂ ಕಾಗಿನೆಲೆ ಶ್ರೀಗಳನ್ನ ಭೇಟಿ ಮಾಡಿಸಲು ವಿಶೇಷ ಸಭೆ ಇದೆ. ಸಭೆಯಲ್ಲಿ ಒಂದೊಳ್ಳೆ ಸುದ್ದಿ ಕೊಡ್ತೀವಿ. ಯಾಕಂದ್ರೆ, ವಿಶ್ವನಾಥ್ ಹಾಗೂ ಸಿದ್ದರಾಮಯ್ಯನವ್ರು ಕುರುಬ ಸಮಾಜದ ಕಣ್ಣುಗಲಿದ್ದಂತೆ ಅಂತ ಟಿವಿ5ಗೆ ಹೇಳಿಕೆ ಕೊಟ್ಟಿದ್ದಾರೆ.

ಒಟ್ಟಾರೆ, ಇಬ್ಬರು ಕುರುಬ ಮುಖಂಡರು ಮುಖಾಮುಖಿಯಾಗಲು ಕಾಗಿನೆಲೆ ಮಠ ಸಿದ್ದಗೊಳ್ತಿದೆ. ಮೊದಲಿಗೆ ಶ್ರೀಗಳು ಹಾಗೂ ವಿಶ್ವನಾಥ್ ಮುಖಾಮುಖಿ ಭೇಟಿಯಾಗಲು ಈ ವಾರದ ಕೊನೆಯಲ್ಲಿ ಸಭೆಯ ಮೂಲಕ ವೇದಿಕೆ ಸಿದ್ದಗೊಂಡಿದೆ. ಆದ್ರೆ, ಸಿದ್ದು ಹಾಗೂ ವಿಶ್ವನಾಥ್ ಈ ಗದ್ದಲದ ಮಧ್ಯೆ ಮುಖಾಮುಖಿ ಆಗ್ತಾರಾ,? ಕಾಗಿನೆಲೆ ಶ್ರೀಗಳ ಮಾತಿಗೆ ಬೆಲೆ ಕೊಡ್ತಾರಾ.? ಎಂಬುದನ್ನ ಕಾಲವೇ ನಿರ್ಧರಿಸಬೇಕಿದೆ.

ವರದಿ : ಸುರೇಶ್, ಟಿವಿ5 ಮೈಸೂರು

Next Story

RELATED STORIES