Top

ಉತ್ತರಕರ್ನಾಟಕ ಬಂದ್‌ ವಿರೋಧಿಸಿ, ವಿಶಿಷ್ಟ ರೀತಿ ಪ್ರತಿಭಟನೆ

ಉತ್ತರಕರ್ನಾಟಕ ಬಂದ್‌ ವಿರೋಧಿಸಿ, ವಿಶಿಷ್ಟ ರೀತಿ ಪ್ರತಿಭಟನೆ
X

ಯಾದಗಿರಿ : ಪ್ರತ್ಯೇಕ ರಾಜ್ಯ ಕುರಿತು ಉತ್ತರ ಕರ್ನಾಟಕ ಬಂದ್ ಕರೆ ನೀಡಿದ ಹಿನ್ನಲೆ, ಇಂದು ಬಂದ್ ವಿರೋಧಿಸಿ ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಕರವೇ ( ಪ್ರವೀಣ್ ಶೆಟ್ಟಿ) ಬಣದಿಂದ ವಿಭಿನ್ನ ಪ್ರತಿಭಟನೆ ನಡೆಸಿದರು.

ಸುಭಾಷ್ ವೃತ್ತ ಸಮೀಪದ ಅಕ್ಕ-ಪಕ್ಕದ ಅಂಗಡಿಗಳಿಗೆ ತೆರಳಿ ವ್ಯಾಪರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಟೀ ಮತ್ತು ಗುಲಾಬಿ ಹೂ ಕೊಟ್ಟು ಬಂದ್ ಗೆ ಬೆಂಬಲಿಸದಂತೆ ಕರೆ ನೀಡಿದ್ರು. ಟೀ, ಹೂ ಕೊಟ್ಟು ನಮ್ಮದು ಅಖಂಡ ಕರ್ನಾಟಕ ಎಂದು ಅರಿವ ಮೂಡಿಸುವ ಮೂಲಕ ವಿಶಿಷ್ಠವಾದ ಪ್ರತಿಭಟನೆ ಮಾಡಿ ಗಮನ ಸೆಳೆದರು.

ಅಲ್ಲದೆ ನಮಗೆ ಪ್ರತ್ಯೇಕ ರಾಜ್ಯಬೇಡಾ ಉತ್ತರ ಕರ್ನಾಟಕ ಅಭಿವೃದ್ಧಿ ಬೇಕಾಗಿದೆ. ಸಿಎಂ ಕುಮಾರ ಸ್ವಾಮಿ ಉ.ಕ ಬಂದು ಇಲ್ಲಿಯ ಸಮಸ್ಯೆಗಳನ್ನು ಹರಿತು ಅಭಿವೃದ್ಧಿ ಪಡಿಸಬೇಕಾಗಿದೆ. ಯಾವುದೇ ಕಾರಣಕ್ಕೆ ನಮಗೆ ಪ್ರತ್ಯೇಕ ರಾಜ್ಯ ಬೇಡಾ ಎಂದು ರಕ್ಷಣವೇಧಿಕೆ (ಪ್ರವೀಣ್ ಶೇಟ್ಟಿ) ಬಣದ ಉ.ಕ ಅಧ್ಯಕ್ಷ ಶರಣು ಗದ್ದುಗೆ ಆಗ್ರಹಿಸಿದರು.

ವರದಿ : ಬಾಳಗೌಡ ಪಾಟೀಲ್, ಟಿವಿ5 ಯಾದಗಿರಿ

Next Story

RELATED STORIES