Top

ಶಿವಮೊಗ್ಗ ಅಬಕಾರಿ ಇಲಾಖೆಯಿಂದ ಹೊಸ ಪ್ಲಾನ್‌ : ಏನದು ಗೊತ್ತಾ.?

ಶಿವಮೊಗ್ಗ ಅಬಕಾರಿ ಇಲಾಖೆಯಿಂದ ಹೊಸ ಪ್ಲಾನ್‌ : ಏನದು ಗೊತ್ತಾ.?
X

ಶಿವಮೊಗ್ಗ : ಜಿಲ್ಲೆಯಲ್ಲಿ ಗಾಂಜಾ ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದೆ. ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಗಾಂಜಾವನ್ನು ಬೆಳೆಯಲಾಗುತ್ತಿದೆ. ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಗಾಂಜಾ ಮಾಫಿಯಾ ಜಿಲ್ಲೆಯಲ್ಲಿ ಕಡಿಮೆಯಾಗಿಲ್ಲ. ಶಿಕಾರಿಪುರ ಹಾಗೂ ಸೊರಬ, ಸಾಗರ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ ತಾಲ್ಲೂಕಿನ ವಿವಿಧ ಕಡೆ ಗಾಂಜಾವನ್ನು ಬೆಳೆಯಾಗುತ್ತಿದೆ.

ಈಗಾಗಲೇ ಪೊಲೀಸರು ಕೂಡ ಗಾಂಜಾ ಬೆಳೆಯನ್ನು ಬೆಳೆಯದಂತೆ ಎಚ್ಚರಿಕೆಯನ್ನ ನೀಡಿದ್ದರೂ ಕೂಡ ಬೆಳೆ ಮಾತ್ರ ಕಡಿಮೆಯಾಗಿಲ್ಲ. ಗಾಂಜಾ ಬೆಳೆಗೆ ಇದು ಸಕಾಲವಾಗಿದ್ದು, ಮಿಶ್ರಬೆಳೆಗಳ ನಡುವೆ ಗಾಂಜಾವನ್ನು ನಾಟಿ ಮಾಡಿ ಬೆಳೆಯಲಾಗುತ್ತದೆ. ಬೇರೆ ಬೆಳೆಗಳು ದೊಡ್ಡದಾಗುತ್ತಿದ್ದಂತೆ ಗಾಂಜಾ ಬೆಳೆಯೂ ಕೂಡ ದೊಡ್ಡದಾಗುತ್ತಿದೆ.

ಹೀಗಾಗಿ ಅಬಕಾರಿ ಅಧಿಕಾರಿಗಳಿಗೆ ಮತ್ತು ಪೊಲೀಸರು ಗಾಂಜಾವನ್ನು ಪತ್ತೆ ಮಾಡುವುದು ಕಷ್ಟವಾಗಿದೆ. ಅಲ್ಲದೇ, ಗಾಂಜಾ ಬೆಳೆಯನ್ನು ನಿಯಂತ್ರಣ ಮಾಡುವುದು ಅಬಕಾರಿ ಅಧಿಕಾರಿಗಳಿಗೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಪ್ರದೇಶದಲ್ಲಿ ಬೆಳೆಯುವ ಗಾಂಜಾ ಬೆಳೆಯನ್ನು ಪತ್ತೆ ಹಚ್ಚಲು ಅಬಕಾರಿ ಇಲಾಖೆ ಮುಂದಾಗಿದೆ.

ಯಾವ ಗ್ರಾಮಗಳಲ್ಲಿ ಗಾಂಜಾವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ಗ್ರಾಮಕ್ಕೆ ತೆರಳುವ ಅಬಕಾರಿ ಇಲಾಖೆ ಸಿಬ್ಬಂದಿ ದ್ರೋಣ್ ಕ್ಯಾಮರ ಮೂಲಕ ಗಾಂಜಾ ಬೆಳೆಯನ್ನು ಪತ್ತೆಹಚ್ಚಲು ಮುಂದಾಗಿದೆ.

ಈ ಬಾರಿ ಅಬಕಾರಿ ಇಲಾಖೆ ಸಿಬ್ಬಂದಿ ಈಗಾಗಲೇ ಗಾಂಜಾ ಬೆಳೆಯುವ ಗ್ರಾಮಗಳ ಪಟ್ಟಿಯನ್ನು ಸಿದ್ದ ಪಡಿಸಿದ್ದು ಆ ಗ್ರಾಮಗಳಲ್ಲಿ ದ್ರೋಣ್ ಕ್ಯಾಮರ ಬಳಸಿ ಗಾಂಜಾ ಬೆಳೆ ಪತ್ತೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಹಾಗೂ ಬೆಳೆ ಎಗ್ಗಿಲ್ಲದೇ ಬೆಳೆಯಲಾಗುತ್ತಿದ್ದು ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದು ಕೊಂಡಿದೆ. ಈ ಹಿನ್ನೆಲೆಯಲ್ಲಿ ಗಾಂಜಾಕ್ಕೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಮುಂದಾಗಿದೆ.

ಒಟ್ಟಾರೆಯಾಗಿ ಡ್ರೋಣ್ ಕ್ಯಾಮರ ಬಳಸಿ ಗಾಂಜಾ ಬೆಳೆ ಪತ್ತೆ ಮಾಡಿದರೂ ಕೂಡ ಕೆಲವೊಮ್ಮೆ ಕ್ಯಾಮರಾ ಕಣ್ಣಿಗೆ ಗಾಂಜಾ ಗಿಡಗಳು ಕಾಣಿಸುವ ಸಾಧ್ಯತೆ ಕಡಿಮೆ ಇದೆ. ಇಂತಹ ಪ್ರದೇಶಗಳ ಮೇಲೆ ಅಬಕಾರಿ ಸಿಬ್ಬಂದಿ ಹಾಗೂ ಪೊಲೀಸರು ನಿರಂತರವಾಗಿ ದಾಳಿ ನಡೆಸಿಬೇಕು. ಈ ಮೂಲಕ ಶಿವಮೊಗ್ಗ ಜಿಲ್ಲೆಯನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿ ಮಾಡಿ, ಜಿಲ್ಲೆಗೆ ಅಂಟಿರುವ ಕಳಂಕವನ್ನು ಅಳಿಸಿಹಾಕಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ವರದಿ : ನವೀನ್ ಪುರದಾಳ್​, ಟಿವಿ5 ಶಿವಮೊಗ್ಗ

Next Story

RELATED STORIES