Top

ಮಾನವಿಯತೆ ಮೆರೆದ ಜಡ್ಜ್.!!

ಮಾನವಿಯತೆ ಮೆರೆದ ಜಡ್ಜ್.!!
X

ಚಿತ್ರದುರ್ಗ : ಕೊಲೆ ಹಂತಕನಿಗೆ ಕೆವಲ 11 ದಿನದೊಳಗೆ ಜೈಲುಶಿಕ್ಷೆ ವಿಧಿಸಿ ಇತಿಹಾಸ ಸೃಷ್ಟಿಸಿದ ಚಿತ್ರದುರ್ಗ ಪ್ರಧಾನ ಮತ್ತು ಸೆಷನ್ ನ್ಯಾಯಾಧೀಶ ಎಸ್ ಬಿ ವಸ್ತ್ರಮಠ ಅಪಾರಾಧಿಯ ಇಬ್ಬರು ಮಕ್ಕಳಿಗೆ ಆಶ್ರಯ ಕಲ್ಪಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಬಗ್ಗಲರಂಗವ್ವನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಘಟನೆ. ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಪತ್ನಿ ಸಾಕಮ್ಮ ಅವರನ್ನು ಕೊಲೆ ಮಾಡಿದ ಪತಿ ಶ್ರೀಧರ್ ಎಂಬಾತನಿಗೆ ಜುಲೈ 9ರಂದು ನ್ಯಾಯಧೀಶರು ಶಿಕ್ಷೆ ಪ್ರಕಟಮಾಡಿದ್ದರು.

ದಂತಿಯ ಪುತ್ರರಾದ 2 ವರ್ಷದ ಮೈಲಾರಿ ಮತ್ತು 3 ವರ್ಷದ ಧನುಷ್ ಇದೀಗ ಅಜ್ಜಿ ಬಳಿ ಆಶ್ರಯ ಪಡೆಯುತ್ತಿದ್ದು, ಪಂಚಾಯಿತ್ ರಾಜ್ ಇಲಾಖೆಯಿಂದ ಎರಡು ವಾರದೊಳಗೆ 1 ಲಕ್ಷದ 60 ಸಾವಿರ ಹಣ ಜೊತೆಗೆ 25 ಬೈ 28 ವಿಸ್ತೀರ್ಣದ ನಿವೇಷನ ಮಂಜೂರು ಮಾಡಿದ್ದು ಭೂಮಿ ಪೂಜೆ ನೇರವೇರಿಸಿದ್ದಾರೆ.

ಅಷ್ಟೇಲ್ಲದ ಆ ಮಕ್ಕಳಿಗೆ ಎರಡೂವರೆ ಲಕ್ಷ ಹಣ ನೀಡುವಂತೆ ಸಂತ್ರಸ್ಥ ಪರಿಹಾರ ಇಲಾಖೆ ಪತ್ರಕೂಡ ನ್ಯಾಯಧೀಶರು ಬರೆದಿದ್ದಾರೆ. ಶಿಕ್ಷೆ ವಿಧಿಸುದಷ್ಟೇ ನ್ಯಾಯಾಧೀಶರ ಕೆಲಸವಲ್ಲ ಎಂದು ನೋಂದವರಿಗೆ ನ್ಯಾಯ ಸಿಗಬೇಕು ಸಂತ್ರಸ್ತರಿಗೆ ನ್ಯಾಯಾಂಗ ಇಲಾಖೆಯಲ್ಲಿ ಅವಕಾಶ ಇದೆ ಎಂದು ನ್ಯಾಯಧೀಶ ವಸ್ರಮಠ ಹೇಳಿದ್ದಾರೆ.

ವರದಿ : ವೀರೇಶ್ ವಿ ಚಳ್ಳಕೆರೆ, ಟಿವಿ5 ಚಿತ್ರದುರ್ಗ

Next Story

RELATED STORIES