Top

287ಕ್ಕೆ ಆಲ್ ಔಟ್ ಆದ ರೂಟ್ ಪಡೆ

287ಕ್ಕೆ ಆಲ್ ಔಟ್ ಆದ ರೂಟ್ ಪಡೆ
X

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ, ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಆಂಗ್ಲರನ್ನ 287ಕ್ಕೆ ಆಲೌಟ್​​ ಆಗುವ ಮೂಲಕ ತನ್ನ ಇನ್ನಿಂಗ್ಸ್ ಮುಗಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ಗರಿಷ್ಠ ಮೊತ್ತ ಪೇರಿಸುವಲ್ಲಿ ಎಡವಿತ್ತು. ನಾಯಕ ರೂಟ್ (80/156), ಬೇರ್ಸ್ಟೋವ್ (70/88) ಮತ್ತು ಕೀಟನ್ ಜೆನ್ನಿಂಗ್ಸ್ (42/98) ರನ್ ಬೆಂಬಲದೊಂದಿಗೆ 88 ಓವರ್ ಮುಕ್ತಾಯಕ್ಕೆ 9 ವಿಕೆಟ್ ಕಳೆದು 285 ರನ್ ಸಾಧಾರಣ ಮೊತ್ತ ಪೇರಿಸಿತ್ತು. ಪಂದ್ಯದ ಎರಡನೇ ದಿನವಾದ ಇಂದು ಕ್ರೀಸ್ ನಲ್ಲಿದ್ದ ಸ್ಯಾಮ್ ಕರ್ರನ್ (24/71) ಮತ್ತು ಜೇಮ್ಸ್ ಆ್ಯಂಡರ್ಸನ್ ಇವರಲ್ಲಿ ಆ್ಯಂಡರ್ಸನ್ 2 ರನ್ ಗಳಿಸಿ (15 ಎಸೆತ) ಔಟಾದರು. ಇಂಗ್ಲೆಂಡ್ 89.4 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 287ರನ್ ಪೇರಿಸಲಷ್ಟೇ ಶಕ್ತವಾಯಿತು. ಭಾರತದ ಬೌಲರ್ ರವಿಚಂದ್ರನ್ ಅಶ್ವಿನ್ 60 ರನ್ನಿಗೆ 4 ವಿಕೆಟ್, ಶಮಿ 64 ರನ್ನಿಗೆ 3 ವಿಕೆಟ್ ಉರುಳಿಸಿ ಆಂಗ್ಲರನ್ನು ಕಾಡಿದರು.

Next Story

RELATED STORIES