Top

ಗರ್ಭಿಣಿಯರಿಗೆ ಸರ್ಕಾರಿ ಸೀಮಂತ : ನೂರಕ್ಕೂ ಹೆಚ್ಚು ಗರ್ಭಿಣಿಯರು ಭಾಗಿ

ಗರ್ಭಿಣಿಯರಿಗೆ ಸರ್ಕಾರಿ ಸೀಮಂತ : ನೂರಕ್ಕೂ ಹೆಚ್ಚು ಗರ್ಭಿಣಿಯರು ಭಾಗಿ
X

ತುಮಕೂರು : ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಇಂತಹ ಅಪೂರ್ವ ಕ್ಷಣವೊಂದಕ್ಕೆ ಸಾಕ್ಷಿಯಾಗಿತ್ತು. ತುಂಬು ಗರ್ಭೀಣಿಯರಿಗೆ ತವರು ಮನೆಯಲ್ಲೂ ನೀಡದಂತಹ ಪ್ರೀತಿ.. ಆದರವನ್ನ ನೀಡಿ ಸಂತೈಸಿತ್ತು.

ವಿಶ್ವಸ್ತನ್ಯಪಾದ ಸಪ್ತಾಹದ ಅಂಗವಾಗಿ ನಗರದ ಬಾಲಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರದ ವತಿಯಿಂದಲೇ ಗರ್ಭೀಣಿಯರಿಗೆ ಸೀಮಂತ ಕಾರ್ಯ ನೆವೇರಿಸಲಾಯಿತು. ವಿವಿಧ ತಾಲೂಕಿನಿಂದ ಬಂದಂತಹ 150 ಕ್ಕೂ ಹೆಚ್ಚು ಗರ್ಭೀಣಿಯರಿಗೆ ಸೀಮಂತ ಮಾಡಿ ಸತ್ಕರಿಸಲಾಯಿತು. ತಾಂಬೂಲ, ಹೂವು-ಹಣ್ಣು. ಅರಸಿಣ-ಕುಂಕುಮ, ಸೀರೆ.ಧಾನ್ಯಗಳನ್ನು ಕೊಟ್ಟು ಅರ್ಥಪೂರ್ಣವಾಗಿ ಸೀಮಂತ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಕೇವಲ ಸೀಮಂತ ಮಾತ್ರ ಮಾಡಲಾಗಿಲ್ಲ. ಗರ್ಭಾವಸ್ಥೆಯ ಅವಧಿಯಲ್ಲಿ ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಎಚ್ಚರಿಕೆ, ಸ್ತನ್ಯಪಾನದ ಮಹತ್ವ ಹಾಗೂ ಮಕ್ಕಳ ಪೋಷಣೆ ಬಗ್ಗೆ ಉಪನ್ಯಾಸದ ಜಾಗೃತಿ ಮೂಡಿಸಲಾಯಿತು. ಅಲ್ಲದೇ ಪೋಷ್ಠಿಕಾಂಶದ ಕೊರತೆ ಮಕ್ಕಳಲ್ಲಿ ಕಾಣಿಸಿಕೊಳ್ಳದಂತೆ ಯಾವ ಆಹಾರ ನೀಡಬೇಕೆಂಬುದನ್ನ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡಲಾಯಿತು.

ಈ ವೇಳೆ ಮಕ್ಕಳ ತಜ್ಞೆ ಡಾ.ರಜಿನಿ, ಸ್ತನ್ಯಪಾನ ಮಕ್ಕಳು ಮತ್ತು ತಾಯಿಯಲ್ಲಿನ ಬಾಂಧವ್ಯವನ್ನ ಗಟ್ಟಿಗೊಳಿಸುತ್ತದೆ. ಬಹುಕಾಲದ ವರೆಗೆ ಮಕ್ಕಳಿಗೆ ಎದೆಹಾಲು ಉಣಿಸಿದರೆ ತಾಯಿ-ಮತ್ತು ಮಕ್ಕಳ ಇಬ್ಬರ ಆರೋಗ್ಯವೂ ವೃದ್ದಿಸುತ್ತದೆ ಎಂದು ಸಲಹೆ ನೀಡಿದ್ರು.

ಸ್ತನ್ಯಪಾನದ ಅರಿವು ಕಾರ್ಯಕ್ರಮಕ್ಕೆ ಗರ್ಭಿಣಿಯರನ್ನು, ಮಹಿಳೆಯರನ್ನು ಸೆಳೆಯುವ ಉದ್ದೇಶದಿಂದ ಜಿಲ್ಲಾಡಳಿತ ಕೈಗೊಂಡ ಸರ್ಕಾರಿ ಸೀಮಂತ ಯಶಸ್ವಿಯಾಗಿದೆ. ಸಾಂಪ್ರದಾಯಿಕವಾಗಿ ಸಾಮೂಹಿಕ ಸೀಮಂತ ನೆರವೇರಿಸಿ ಹೆಂಗಳೆಯರ ಮೆಚ್ಚುಗೆಗೆ ಸಂಯುಕ್ತ ಇಲಾಖೆಗಳು ಪಾತ್ರವಾದವು.

ವರದಿ : ಟಿ.ಯೋಗಿಶ್, ಟಿವಿ5 ತುಮಕೂರು

Next Story

RELATED STORIES