Top

ಡಿಸಿಎಂ ಡಾ.ಜಿ.ಪರಮೇಶ್ವರ್‌ ನನಗೆ ಬಾಸ್‌ ಎಂದ ಬಿಜೆಪಿ ಶಾಸಕ.!!

ಡಿಸಿಎಂ ಡಾ.ಜಿ.ಪರಮೇಶ್ವರ್‌ ನನಗೆ ಬಾಸ್‌ ಎಂದ ಬಿಜೆಪಿ ಶಾಸಕ.!!
X

ತುಮಕೂರು : ನಗರ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಡಿಸಿಎಂ ಜಿ.ಪರಮೇಶ್ವರ್ ರನ್ನ ಬಾಸ್‌ ಎಂದು ಕರೆದಿದ್ದಾರೆ.

ತುಮಕೂರು ನಗರದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಜಿಲ್ಲಾ ಉಸ್ತುವಾರಿ ಪಟ್ಟ ಹೊತ್ತಿರುವ ಪರಮೇಶ್ವರ್ ಸಾಹೆಬ್ರೆ ಸದ್ಯ ನಮಗೆಲ್ಲಾ ಬಾಸ್. ನಗರ ಕ್ಷೇತ್ರದ ಸಮಸ್ಯೆ ಅವರಿಗೆ ಮನವರಿಕೆ ಮಾಡಿ ಅಭಿವೃದ್ದಿಗಾಗಿ ಹೆಚ್ಚಿನ ಪ್ಯಾಕೇಜ್ ತರುವಂತೆ ಪರಮೇಶ್ವರ್ ಸಾಹೆಬ್ರ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಇನ್ನೂ ಮುಂದುವರೆದು ಮಾತನಾಡಿದ ಅವರು, ಸ್ಮಾರ್ಟ ಸಿಟಿ ಕಾಮಗಾರಿಗಳನ್ನ ನಾನು ಇಲ್ಲಿ ವರೆಗೆ ಸೂಕ್ಷ್ಮವಾಗಿ ಗಮನಿಸಿಲ್ಲ. ನಾನು ಶಾಸಕರಾಗಿ ಇನ್ನೂ ಕೇವಲ 75 ದಿನಗಳು ಮಾತ್ರ ಕಳೆದಿವೆ. ಸ್ಮಾಟ್ ರ್ ಸಿಟಿ ಕೆಲಸಕಾರ್ಯಗಳಲ್ಲಿ ಏನಾದರೂ ಲೋಪ ಕಂಡುಬಂದರೆ ಸುಮ್ಮನೆ ಕೂರಲ್ಲಾ ಅಂತಾ ಸೌಮ್ಯ ಸ್ವಭಾದ ಶಾಸಕರ ಜ್ಯೋತಿಗಣೇಶ್ ಸಿಟ್ಟಿನಿಂದಲ್ಲೇ ಸುದ್ದಿಗೋಷ್ಠಿಯ ಮೂಲಕವೇ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

Next Story

RELATED STORIES