Top

ಮುನಿರತ್ನ ಮೇಲೆ ಮುನಿದರಾ ಡಿ ಬಾಸ್ ದರ್ಶನ್..?

ಮುನಿರತ್ನ ಮೇಲೆ ಮುನಿದರಾ ಡಿ ಬಾಸ್ ದರ್ಶನ್..?
X

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

ಕುರುಕ್ಷೇತ್ರ... ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ. ಮೇಕಿಂಗ್ ಹಾಗೂ ಟೀಸರ್​ಗಳಿಂದ ಧೂಳೆಬ್ಬಿಸಿರೋ ಈ ಸಿನಿಮಾ, ಇದೀಗ ಬೇರೆ ವಿಚಾರಕ್ಕೆ ಸುದ್ದಿ ಆಗ್ತಿದೆ. ಚಿತ್ರದ ಮೇಲೆ ದರ್ಶನ್ ಮುನಿಸಿಕೊಂಡಿದ್ದಾರೆ. ನಿಖಿಲ್ ಡಬ್ಬಿಂಗ್ ಮಾಡಿಲ್ಲ ಅನ್ನೋ ಗಾಸಿಪ್​ಗಳು ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಹರಿದಾಡ್ತಿದೆ. ಈ ಕುರಿತ ಮುಂದೆ ಓದಿ..

"ಕುರುಕ್ಷೇತ್ರ"ದಲ್ಲಿ ಭುಗಿಲೆದ್ದ ಹೊಸ ವಿವಾದ

ಯೆಸ್... ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ದಟ್ಟವಾಗಿ ಹರಿದಾಡ್ತಿದೆ. ಕುರುಕ್ಷೇತ್ರದಲ್ಲಿ ದುರ್ಯೋಧನ- ಅಭಿಮನ್ಯುವಿನ ಮಧ್ಯೆ ಶೀತಲ ಯುದ್ದ ಶುರುವಾಗಿದೆ. ವ್ಯಾಸರ ಕುರುಕ್ಷೇತ್ರದಲ್ಲಿ ಸುಯೋಧನ- ಅರ್ಜುನ ತನಯ ಮುಖಾಮುಖಿ ಆಗೋ ಪ್ರಸಂಗವೇ ಇಲ್ಲ. ಆದ್ರೆ ಮುನಿರತ್ನ ಕುರುಕ್ಷೇತ್ರದಲ್ಲಿ ಮಾತ್ರ ಸಿನಿಮಾ ತೆರೆ ಕಾಣೋಕ್ಕೂ ಮುನ್ನವೇ ಯುದ್ದ ಶುರುವಾಗಿದೆ.

https://www.youtube.com/watch?v=Obly4B678rQ&index=33&list=PLmylWU4EY3N9gD5JWuWNqw5S_XHugS1np

ಅರೇ ಸಿನಿಮಾದಲ್ಲಿ ದುರ್ಯೋಧನ- ಅಭಿಮನ್ಯು ಯುದ್ದವಿದೆಯಾ ಅಂತ ಹುಬ್ಬೇರಿಸಬೇಡಿ. ನಾವು ಹೇಳ್ತಿರೋದು ಈ ಪಾತ್ರಧಾರಿಗಳ ಮಧ್ಯೆ ಉಂಟಾಗಿರೋ ವೈಮನಸ್ಸಿನ ಕುರಿತು ಅಷ್ಟೇ. ಹೌದು... ದರ್ಶನ್​ಗೆ ಕುರುಕ್ಷೇತ್ರ ಚಿತ್ರದ ಮೇಲೆ ಬೇಸರ ಮೂಡಿದೆ. ತಮ್ಮ ಪಾತ್ರಕ್ಕಿಂತ ಅಭಿಮನ್ಯು ಪಾತ್ರಕ್ಕೇ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗ್ತಿದೆ ಅಂತ ಮನಸ್ತಾಪಗಳಿಗೆ ಕಾರಣವಾಗಿದೆ.

ಅಂದಹಾಗೆ ಇದು ದರ್ಶನ್​ರ 50ನೇ ಸಿನಿಮಾ. ಅದೇ ವಿಚಾರಕ್ಕಾಗಿಯೇ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಆದ್ರೀಗ ಸಿನಿಮಾದಲ್ಲಿದ್ದ ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿಖಿಲ್ ಕುಮಾರ್ ಪಾತ್ರವನ್ನ ಮತ್ತಷ್ಟು ದೊಡ್ಡದಾಗಿ ತೋರಿಸೋಕೆ ನಿರ್ಮಾಪಕ ಮುಂದಾಗಿದ್ದಾರೆ. ಇದು ದರ್ಶನ್ ಹಾಗೂ ಅವ್ರ ಫ್ಯಾನ್ಸ್​​ಗೆ ಅಸಮಾಧಾನ ಉಂಟುಮಾಡಿದೆ.

ಕುರುಕ್ಷೇತ್ರಕ್ಕೂ ಮುನ್ನ ಸೀತಾರಾಮ ಕಲ್ಯಾಣ ರಿಲೀಸ್..?!

ಇದು ಕುರುಕ್ಷೇತ್ರದ ಹೊಸ ವಿವಾದ. ಇತ್ತೀಚೆಗಷ್ಟೇ ಸೀತಾರಾಮ ಕಲ್ಯಾಣದ ಟೀಸರ್ ಲಾಂಚ್ ಆಗಿದೆ. ಅದು ನಂಬರ್ ಒನ್ ಟ್ರೆಂಡಿಂಗ್​ನಲ್ಲೂ ಇದೆ. ಆದ್ರೆ ಇದೇ ಸೀತಾರಾಮ ಕಲ್ಯಾಣಕ್ಕಾಗಿ ನಿಖಿಲ್ ಕುರುಕ್ಷೇತ್ರದ ಡಬ್ಬಿಂಗ್​ಗೆ ಹೋಗಿಲ್ಲ ಅನ್ನೋ ಸುದ್ದಿ ದಟ್ಟವಾಗಿ ಹರಿದಾಡ್ತಿದೆ. ಹೋಮ್ ಬ್ಯಾನರ್ ಸಿನಿಮಾದ ಮೇಲಿನ ವ್ಯಾಮೋಹದಿಂದ ನಿಖಿಲ್ ಕುರುಕ್ಷೇತ್ರಕ್ಕಿಂತ ಮೊದಲು ಸೀತಾರಾಮ ಕಲ್ಯಾಣ ರಿಲೀಸ್ ಮಾಡಿಸೋ ಸನ್ನಾಹದಲ್ಲಿದ್ದಾರೆ ಎನ್ನಲಾಗ್ತಿದೆ.

ಕಾಂಟ್ರವರ್ಸಿ ಕುರಿತು ಅಭಿಮನ್ಯು ಹೇಳೋದೇನು..?

ಮೂವಿ ಮನೆ ಟೀಂ ಜೊತೆ ಮಾತನಾಡಿದ ಸ್ಯಾಂಡಲ್​ವುಡ್ ಯುವರಾಜ ನಿಖಿಲ್ ಕುಮಾರ್, ಗಾಂಧಿನಗರದಲ್ಲಿ ಹರಿದಾಡ್ತಿರೋ ಈ ಎಲ್ಲಾ ಅಂತೆಕಂತೆಗಳಿಗೆ ತೆರೆ ಎಳೆದಿದ್ದಾರೆ.

TV5ನಲ್ಲಿ ವಿವಾದಗಳಿಗೆ ಸ್ಪಷ್ಟನೆ ನೀಡಿದ ನಿಖಿಲ್ ಕುಮಾರ್

‘ಯಾವುದೇ ಕಾರಣಕ್ಕೂ ಕುರುಕ್ಷೇತ್ರಕ್ಕೂ ಮುನ್ನ ಸೀತಾರಾಮ ಕಲ್ಯಾಣ ರಿಲೀಸ್ ಆಗಲ್ಲ. ಇನ್ನೂ ಸೀತಾರಾಮ ಕಲ್ಯಾಣದ 30 ದಿನದ ಚಿತ್ರೀಕರಣ ಬಾಕಿಯಿದೆ. ನಾನು ಕಮಿಟ್ ಆದ ಕುರುಕ್ಷೇತ್ರ ಸಿನಿಮಾದ ಚಿತ್ರೀಕರಣ ಮುಗಿಸಿಕೊಟ್ಟಿದ್ದೇನೆ. ಡಬ್ಬಿಂಗ್​ಗೆ ಬಂದಿಲ್ಲ ಅನ್ನೋ ಆರೋಪ ಕೇಳಿ ಬರ್ತಿದೆ. ಆದ್ರೆ ಈ ರೀತಿಯ ಆರೋಪವನ್ನ ನಿರ್ಮಾಪಕರಾಗಲಿ, ಚಿತ್ರತಂಡವಾಗಲಿ ಮಾಡಿಲ್ಲ. ಇನ್ನು ಅದನ್ನ ಆರೋಪ ಅಂತ ಹೇಗೆ ಪರಿಗಣಿಸೋಕೆ ಸಾಧ್ಯ..? ಡಬ್ಬಿಂಗ್ ಅಷ್ಟೇ ಅಲ್ಲ, ಪ್ರಮೋಷನ್ಸ್ ಕಾರ್ಯಗಳಲ್ಲೂ ನಾನು ಭಾಗಿಯಾಗುತ್ತೇನೆ.

ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಹೆಚ್ಚಿನ ಪ್ರಧಾನ್ಯತೆ ಕೊಟ್ಟಿರೋ ವಿಚಾರವಾಗಿ ಒಂದಷ್ಟು ಮಾತುಗಳು ಕೇಳಿಬರ್ತಿವೆ. ಕುರುಕ್ಷೇತ್ರ ಆಗಲಿ, ಅದ್ರಲ್ಲಿನ ಅಭಿಮನ್ಯು ಪಾತ್ರ ಆಗಲಿ ಕಾಲ್ಪನಿಕ ಅಲ್ಲ. ಕುರುಕ್ಷೇತ್ರದಲ್ಲಿ ಆ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಸಿನಿಮಾದಲ್ಲೂ ಅಷ್ಟೇ ಇದೆ. ಅದನ್ನ ನಾನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ ಅನ್ನೋ ಭರವಸೆ ಕೊಡಬಲ್ಲೆ. ಇದರ ಹೊರತಾಗಿ ಕೇಳಿ ಬರ್ತಿರೋ ಮಾತುಗಳೆಲ್ಲಾ ಊಹಾಪೋಹಗಳಷ್ಟೇ. ಅದ್ಯಾವುದಕ್ಕೂ ಕಿವಿಗೊಡಬೇಡಿ.’

ಜಾಗ್ವಾರ್ ನಂತ್ರ ಕುರುಕ್ಷೇತ್ರ, ಸೀತಾರಾಮ ಕಲ್ಯಾಣ ಹೀಗೆ ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿ ಇರೋ ನಿಖಿಲ್, ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳೋ ಪ್ಲಾನ್​ನಲ್ಲಿದ್ದಾರೆ. ವರ್ಷಕ್ಕೆ ಎರಡು ಸಿನಿಮಾ ಮಾಡ್ಬೇಕು ಅನ್ನೋ ಭರವಸೆ ಕೊಟ್ಟಿರೋ ನಿಖಿಲ್, ಸದಭಿರುಚಿಯ ಫ್ಯಾಮಿಲಿ ಎಂಟ್ರಟೈನರ್ ಸಿನಿಮಾಗಳಲ್ಲಿ ನಟಿಸಲಿದ್ದಾರಂತೆ. ಅಲ್ಲಿಗೆ ಅಪ್ಪನಂತೆ ರಾಜಕೀಯದ ಕಡೆ ಹೋಗದೆ, ಚಿತ್ರರಂಗದಲ್ಲೇ ಉಳಿದುಕೊಳ್ಳೋ ಪಣ ತೊಟ್ಟಿರೋ ನಿಖಿಲ್​ಗೆ ನಾವು ಕೂಡ ಆಲ್ ದಿ ಬೆಸ್ಟ್ ಹೇಳೋಣ.

Next Story

RELATED STORIES