Top

ಮಠ VS ದೇವಸ್ಥಾನದ ನಡುವೆ ಕಿತ್ತಾಟ.!!

ಮಠ VS ದೇವಸ್ಥಾನದ ನಡುವೆ ಕಿತ್ತಾಟ.!!
X

ಮಂಗಳೂರು : ರಾಜ್ಯದ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವಾ ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಇಲಾಖೆ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಮಠದ ನಡುವಿನ ವಿವಾದ ತಾರಕಕ್ಕೇರಿದೆ.

ಧಾರ್ಮಿಕ ದತ್ತಿ ಇಲಾಖೆಯ ಒಳಪಡೋ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಸೇವೆ ಒಳಗೊಂಡಂತೆ ಇನ್ನಿತರ ಸೇವಾ ಪೂಜೆಗಳನ್ನು ನಡೆಸೋದಕ್ಕೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ ನೋಟೀಸ್ ಮಠ ಹಾಗೂ ದೇವಸ್ಥಾನದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಕ್ಷೇತ್ರದಲ್ಲಿ ಅನಧಿಕೃತವಾಗಿ ಪುರೋಹಿತವರ್ಗ ಇಲ್ಲಿ ಸೇವಾ ಪೂಜೆಗಳನ್ನು ಮಾಡಿ ಭಕ್ತರಿಂದ ಹೆಚ್ಚು ಹಣ ಪಡೆದುಕೊಳ್ಳುತ್ತಾರೆ ಇದರಿಂದ ಹರಕೆ ಹೊತ್ತುಕೊಂಡು ಬರೋ ಹೊರಭಾಗದ ಭಕ್ತರು ಇದರಿಂದ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಇದರ ಬೆನ್ನಲ್ಲೇ ಜಾರಿಯಾದ ನೊಟೀಸ್ ನಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧೀನದಲ್ಲಿ ಯಾವುದೇ ಮಠ ಮಧಿರವಾಗಲಿ ಇತರ ಶಾಲೆಯಾಗಲಿ ಇಲ್ಲ ದೇವಾಲಯದ ಕೌಂಟರ್ ಹಾಗೂ ಕಚೇರಿಯಲ್ಲಿ ಕಾಣಿಕೆ ಸಂದಾಯ ಮಾಡಿದ್ದಲ್ಲಿ ಮಾತ್ರ ದೇವರಿಗೆ ಸಲ್ಲುತ್ತೆ ಎಂದು ಉಲ್ಲೇಖ ಮಾಡಲಾಗಿತ್ತು. ಇದು ಮಠ ಹಾಗೂ ಧಾರ್ಮಿಕ ದತ್ತಿ ಆಡಳಿತಕ್ಕೆ ಒಳಪಡೋ ದೇವಸ್ಥಾನದ ಆಡಳಿತ ಮಂಡಳಿ ನಡುವಿನ ಜಟಾಪಟಿಗೆ ಕಾರಣವಾಗಿದೆ.

ಕುಕ್ಕೆಯಲ್ಲಿ ದೇವಸ್ಥಾನ ಹಾಗೂ ಮಠ ಜೊತೆಯಾಗಿ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಧಾರ್ಮಿಕ ದತ್ತಿ ಇಲಾಖೆ ಕಾನೂನು ಪ್ರಯೋಗಿಸಿ ಮಠದ ವತಿಯಿಂದ ಮಾಡೋ ಪೂಜಾ ಸೇವೆಗಳನ್ನು ಮಾಡೋದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂಬುವುದು ಮಠದ ಪರ ಇರೋರ ವಾದ. ಈ ಪೂಜಾ ಗೊಂದಲ ಕ್ಷೇತ್ರದಲ್ಲಿ ಹೊಸತೊಂದು ವಿವಾದ ಹುಟ್ಟಿಸಿದೆ.

Next Story

RELATED STORIES