Top

ಸೀತಾರಾಮ ಕಲ್ಯಾಣ ಪಕ್ಕಾ ಸ್ವಮೇಕ್ ಸಿನಿಮಾ

ಸೀತಾರಾಮ ಕಲ್ಯಾಣ ಪಕ್ಕಾ ಸ್ವಮೇಕ್ ಸಿನಿಮಾ
X

ಸ್ಯಾಂಡಲ್​ವುಡ್ ಯುವರಾಜ ನಿಖಿಲ್ ಕುಮಾರ್ ಜಬರ್​ದಸ್ತ್ ಪರ್ಫಾರ್ಮೆನ್ಸ್​ನ ಸೀತಾರಾಮ ಕಲ್ಯಾಣ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ನಿಖಿಲ್ ಖಡಕ್ ಲುಕ್, ಮಾಸ್ ಎಂಟ್ರಿ, ಪವರ್​ಫುಲ್ ಆಕ್ಷನ್ ಝಲಕ್ ಮಿಕ್ಸ್ ಮಾಡಿರೋ ಟೀಸರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಸಿಕ್ಕಾಪಟ್ಟೆ ರಿಚ್​ ಆಗಿರೋ ಟೀಸರ್​ನಲ್ಲಿ ಮೈ ಜುಮ್​ ಅನ್ಸೋ ನಿಖಿಲ್ ಕುಮಾರ್ ಸ್ಟಂಟ್ಸ್ ಹೈಲೆಟ್. ಈ ಆಕ್ಷನ್ ಪ್ಯಾಕ್ಡ್ ಟೀಸರ್ ಲಕ್ಷ ಲಕ್ಷ ವೀವ್ಸ್ ಪಡೆದುಕೊಂಡು ಎಲ್ಲರ ಗಮನ ಸೆಳಿತಿದೆ.

ಮಂಗಳವಾರ ರಾಮನಗರದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಲಾಂಚ್ ಮಾಡಿದ್ರು. ಯುಟ್ಯೂಬ್​ಗೆ ಅಪ್​ಲೋಡ್​ ಆದ ಕೆಲವೇ ನಿಮಿಷಗಳಲ್ಲಿ 30 ಸಾವಿರ ವೀವ್ಸ್ ಪಡೆದುಕೊಂಡ ಟೀಸರ್, ನೋಡನೋಡುತ್ತಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.ರಿಲೀಸ್​ ಆದ ಕೇವಲ 22 ಗಂಟೆಗಳಲ್ಲಿ 2 ಮಿಲಿಯನ್ ವೀವ್ಸ್ ಸಾಧಿಸಿ, ಹೊಸ ದಾಖಲೆ ಬರೆದಿದೆ.

ಸೀತಾರಾಮ ಕಲ್ಯಾಣ ಟೀಸರ್, ಕಳೆದೆರಡು ದಿನಗಳಿಂದ ಯೂಟ್ಯೂಬ್​ ಟ್ರೆಂಡಿಂಗ್​ನ ನಂಬರ್​ ಒನ್ ಪ್ಲೇಸ್​ನಲ್ಲಿದೆ. ಜಾಗ್ವಾರ್, ಕುರುಕ್ಷೇತ್ರ ನಂತ್ರ ನಿಖಿಲ್ ಕುಮಾರ್ ಅಭಿನಯದ 3ನೇ ಸಿನಿಮಾ ಸೀತಾರಾಮ ಕಲ್ಯಾಣ. ಎ. ಹರ್ಷ ನಿರ್ದೇಶನದ ಈ ಹಳ್ಳಿ ಸೊಗಡಿನ ಪ್ರೇಮಕಥೆಯಲ್ಲಿ ಡಿಂಪಲ್ ಕ್ವೀನ್ ರಚಿತಾರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಆದ್ರೆ, ಟೀಸರ್​ನಲ್ಲಿ ಬೇರೆ ಕಲಾವಿದರ ದರ್ಶನ ಆಗಿಲ್ಲ.ಇದು ರಾಮನಾಗಿ ಕಾಣಿಸಿಕೊಂಡಿರೋ ಹೀರೋ ನಿಖಿಲ್,​ ಒನ್ ಮ್ಯಾನ್ ಶೋ.

ನಿಖಿಲ್​ ಪರ್ಫಾರ್ಮೆನ್ಸ್​ಗೆ ಫ್ಯಾನ್ಸ್ ಫಿದಾ ಆಗಿರೋದು ನಿಜ. ಆದ್ರೆ ಟೀಸರ್​ ತೆಲುಗಿನ ಸರೈನೋಡು ಸಿನಿಮಾ ಟೀಸರ್​ನ ನೆನಪಿಸುವಂತಿದೆ. ಅಲ್ಲು ಅರ್ಜುನ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ಸರೈನೋಡು. ಈ ಸಿನಿಮಾ ಟ್ರೈಲರ್ ಮತ್ತು ಟೀಸರ್​ ಛಾಯೆ ಕನ್ನಡದ ಸೀತಾರಾಮ ಕಲ್ಯಾಣ ಟೀಸರ್​ನಲ್ಲಿ ಕಾಣಿಸ್ತಿರೋದು ನಿಜ. ಇದೇ ಕಾರಣಕ್ಕೆ ಸೀತಾರಾಮ ಕಲ್ಯಾಣ, ಸರೈನೋಡು ರೀಮೇಕ್ ಅನ್ನೋ ಮಾತುಗಳು ಕೇಳಿ ಬರ್ತಿದೆ.

ಸೀತಾರಾಮ ಕಲ್ಯಾಣ, ಸರೈನೋಡು ಸಿನಿಮಾ ರೀಮೇಕ್ ಅನ್ನೋ ಮಾತು ಸುಳ್ಳು. ಯಾಕಂದ್ರೆ, ಈಗಾಗಲೇ ಬಚ್ಚನ್ ಸಿನಿಮಾ ನಿರ್ಮಾಪಕ ಉದಯ್ ಮೆಹ್ತಾ, ಸರೈನೋಡು ರೀಮೇಕ್​ ರೈಟ್ಸ್ ಖರೀದಿಸಿದ್ದಾರೆ. ಧ್ರುವಾ ಸರ್ಜಾ ಸರೈನೋಡು ರೀಮೇಕ್​ನಲ್ಲಿ ನಟಿಸೋ ಸಾಧ್ಯತೆಯಿದೆ. ಹಾಗಾಗಿ ಸೀತಾರಾಮ ಕಲ್ಯಾಣ, ಸರೈನೋಡು ರೀಮೇಕ್ ಅನ್ನೋದು ತಪ್ಪಾಗತ್ತೆ.

ಸರೈನೋಡು ಚಿತ್ರಕ್ಕೆ ಸ್ಟಂಟ್ಸ್ ಕಂಪೋಸ್ ಮಾಡಿದ ರಾಮ್-ಲಕ್ಷ್ಮಣ್ ಮಾಸ್ಟರ್ಸ್, ಸೀತಾರಾಮ ಕಲ್ಯಾಣ ಚಿತ್ರಕ್ಕೂ ಆಕ್ಷನ್ ಕಂಪೋಸ್ ಮಾಡಿದ್ದಾರೆ. ಅಷ್ಟೆಅಲ್ಲ ತೆಲುಗು ಸಿನಿಮಾಗಳ ಮಾದರಿಯಲ್ಲಿ ಸೀತಾರಾಮ ಕಲ್ಯಾಣ ಚಿತ್ರವನ್ನ ಕಟ್ಟಿಕೊಡಲಾಗ್ತಿದೆ. ಅದೇ ಕಾರಣಕ್ಕೆ ಟೀಸರ್ ಸರೈನೋಡು ಮತ್ತು ಇತರೆ ತೆಲುಗು ಸಿನಿಮಾಗಳನ್ನ ನೆನಪಿಸ್ತಿದೆ ಅಷ್ಟೆ. ​ಅದು ಬಿಟ್ರೆ, ಸೀತಾರಾಮ ಕಲ್ಯಾಣ ಯಾವುದೇ ಸಿನಿಮಾ ರೀಮೇಕ್ ಅಲ್ಲ. ಇದು ಪಕ್ಕಾ ಸ್ವಮೇಕ್ ಸಿನಿಮಾ.

ಶರತ್ ಕುಮಾರ್, ಮಧುಬಾಲಾ, ಚಿಕ್ಕಣ್ಣ, ಆರ್ಮುಗ ರವಿಶಂಕರ್, ಆದಿತ್ಯ ಮೆನನ್ ರೀತಿಯ ಘಟಾನುಘಟಿ ಕಲಾವಿದರು ಸೀತಾರಾಮ ಕಲ್ಯಾಣ ಬಳಗದಲ್ಲಿದ್ದಾರೆ. ಚನ್ನಾಂಬಿಕಾ ಫಿಲ್ಮ್ ಬ್ಯಾನರ್​ನಲ್ಲಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಬಹಳ ಅದ್ಧೂರಿಯಾಗಿ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಅನೂಪ್ ರುಬಿನ್ಸ್ ಮ್ಯೂಸಿಕ್ ಚಿತ್ರಕ್ಕಿದ್ದು, ಟೀಸರ್ ಬಿಜಿಎಮ್​ನಲ್ಲೇ ಅನೂಪ್ ಗಮನ ಸೆಳೆದಿದ್ದಾರೆ.ಟೀಸರ್​​ನಲ್ಲೇ ಧೂಳೆಬ್ಬಿಸಿರೋ ಸೀತಾರಾಮ ಕಲ್ಯಾಣ ದಸರಾ ಹಬ್ಬದ ಸಂಭ್ರಮದಲ್ಲಿ ತೆರೆಗೆ ಬರೋ ಸಾಧ್ಯತೆಯಿದೆ.

ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES