Top

ಮೊದಲ ಟೆಸ್ಟ್: ಅಶ್ವಿನ್ ದಾಳಿಗೆ ನಲುಗಿದ ಇಂಗ್ಲೆಂಡ್

ಮೊದಲ ಟೆಸ್ಟ್: ಅಶ್ವಿನ್ ದಾಳಿಗೆ ನಲುಗಿದ ಇಂಗ್ಲೆಂಡ್
X

ಸ್ಪಿನ್ನರ್ ರವಿಚಂದ್ರ ಅಶ್ವಿನ್ ಮಾರಕ ದಾಳಿಗೆ ಇಂಗ್ಲೆಂಡ್ ತತ್ತರಿಸಿದರೂ ಮೊದಲ ದಿನವೇ ಆಲೌಟ್ ಆಗುವ ಅಪಾಯದಿಂದ ಪಾರಾಯಿತು. ಇದರ ಹೊರತಾಗಿಯೂ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಗೌರವ ಹಂಚಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ ಭಾರತಕ್ಕೆ ನಿಜವಾದ ಸವಾಲು ಇರುವುದು ಎರಡನೇ ದಿನದ ಬ್ಯಾಟಿಂಗ್ ಮೇಲೆ.

ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬಸ್ಟನ್ ನಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಇಂಗ್ಲೆಂಡ್ ತಂಡ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆದರೆ ಭಾರತೀಯ ಬೌಲರ್ ಗಳ ಚುರುಕಿನ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ದಿನದಂತ್ಯಕ್ಕೆ 9 ವಿಕೆಟ್ ಗೆ 285 ರನ್ ಕಲೆ ಹಾಕಿದೆ. ದಿನದ ಕೊನೆಯ ಓವರ್ ನಲ್ಲಿ ಮೊಹಮದ್ ಶಮಿ ಎಸೆತದಲ್ಲಿ ದಿನೇಶ್ ಕಾರ್ತಿಕ್ ಕ್ಯಾಚ್ ಬಿಟ್ಟಿದ್ದರಿಂದ ಇಂಗ್ಲೆಂಡ್ ಮೊದಲ ದಿನವೇ ಆಲೌಟ್ ಆಗುವ ಅಪಮಾನಕ್ಕೆ ಒಳಗಾಗುತ್ತಿತ್ತು.

ಇಂಗ್ಲೆಂಡ್ ಪರ ನಾಯಕ ಜೋ ರೂಟ್ 156 ಎಸೆತಗಳಲ್ಲಿ 9 ಬೌಂಡರಿ ಸೇರಿದ 80 ರನ್ ಕಲೆ ಹಾಕಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರೆ, ಜಾನಿ ಬೇರ್ ಸ್ಟೊ 88 ಎಸೆತಗಳಲ್ಲಿ 9 ಬೌಂಡರಿ ಸೇರಿದ 70 ರನ್ ಬಾರಿಸಿದರು. ಇವರಿಬ್ಬರು 4ನೇ ವಿಕೆಟ್ ಗೆ 104 ರನ್ ಜೊತೆಯಾಟ ನಿಭಾಯಿಸಿದರು. ನಾಯಕ ವಿರಾಟ್ ಕೊಹ್ಲಿ ಅದ್ಭುತ ಕ್ಷೇತ್ರರಕ್ಷಣೆ ಮೂಲಕ ರೂಟ್ ಅವರನ್ನು ರನೌಟ್ ಮಾಡುವ ಮೂಲಕ ಅಪಾಯಕಾರಿಯಾಗಿದ್ದ ಈ ಜೊತೆಯಾಟವನ್ನು ಮುರಿದರು. ನಂತರ ಮತ್ತೆ ದಾಳಿ ಚುರುಕುಗೊಳಿಸಿದ ಭಾರತೀಯ ಬೌಲರ್ ಗಳು ತಂಡಕ್ಕೆ ಮತ್ತೆ ಮೇಲುಗೈ ಒದಗಿಸಿಕೊಟ್ಟರು.

ಮೊಹಮದ್ ಶಮಿ 2 ವಿಕೆಟ್ ಕಿತ್ತರೆ, ಇಶಾಂತ್ ಶರ್ಮ ಮತ್ತು ಉಮೇಶ್ ಯಾದವ್ ತಲಾ 1 ವಿಕೆಟ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಒಂದೂ ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ಮೊದಲ ಇನಿಂಗ್ಸ್ 90 ಓವರ್ 9 ವಿಕೆಟ್ 285 (ಜೋ ರೂಟ್ 80, ಬೇರ್ ಸ್ಟೊ 70, ಜೆನ್ನಿಂಗ್ಸ್ 42, ಕುರಿಯನ್ 24, ಬೆನ್ ಸ್ಟೋಕ್ಸ್ 21, ಅಶ್ವಿನ್ 60/4, ಶಮಿ 64/2, ಇಶಾಂತ್ 46/1 ಉಮೇಶ್ 56/1).

Next Story

RELATED STORIES