Top

ಪ್ರತಿದಿನ ಟ್ರಂಪ್ ಭಾವಚಿತ್ರಕ್ಕೆ ಪೂಜೆ ಮಾಡುವ ಭಾರತದ ಯುವಕ!

ಪ್ರತಿದಿನ ಟ್ರಂಪ್ ಭಾವಚಿತ್ರಕ್ಕೆ ಪೂಜೆ ಮಾಡುವ ಭಾರತದ ಯುವಕ!
X

ಹಣೆಗೆ ಕುಂಕುಮ ಇಟ್ಟು, ಹೂಹಾರ ಹಾಕಿ. ದೀಪ- ಧೂಪ ಹಚ್ಚಿ ಭಕ್ತಿಯಿಂದ ದೇವರನ್ನು ಪೂಜಿಸುವುದನ್ನು ನಾವೆಲ್ಲಾ ನೋಡಿದ್ದೇವೆ. ಅಭಿಮಾನ ಅತಿಯಾಗಿ ಕೆಲವರು ಸಿನಿಮಾ ನಟ-ನಟಿಯರ ದೇವಸ್ಥಾನ ಕಟ್ಟಿದ್ದನ್ನೂ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮನೆಯಲ್ಲಿ ಪ್ರತಿನಿತ್ಯ ಪೂಜಿಸುತ್ತಿದ್ದಾನೆ!

ತೆಲಂಗಾಣದ ಕೊನ್ನೆ ಎಂಬಲ್ಲಿ ವಾಸವಾಗಿರುವ 31 ವರ್ಷದ ಬಸ್ಯಾ ಎಂಬ ಯುವ ರೈತ, ಪ್ರತಿನಿತ್ಯ ಟ್ರಂಪ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಮನೆಯಲ್ಲಿ ದೇವರ ಜಾಗದಲ್ಲಿ ಟ್ರಂಪ್ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸುತ್ತಿದ್ದಾರೆ.

ಅಮೆರಿಕದಲ್ಲಿ ಭಾರತೀಯ ಮೇಲೆ ನಡೆಯುತ್ತಿರುವ ದ್ವೇಷದ ದಾಳಿಗಳಿಂದ ನೊಂದಿರುವ ಬಸ್ಯಾ ಟ್ರಂಪ್ ಅವರನ್ನು ಓಲೈಸಿದರೆ ಈ ದಾಳಿಗಳು ನಿಲ್ಲಬಹುದು ಎಂದು ಭಾವಿಸಿದ್ದಾನೆ. ಹಾಗಾಗಿ ಈ ರೀತಿ ಟ್ರಂಪ್ ಒಲಿಸಿಕೊಳ್ಳಲು ಪೂಜೆಯ ಮೊರೆ ಹೋಗಿದ್ದಾರೆ.

ಬಸ್ಯಾ ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಈ ವಿಚಿತ್ರ ಬೆಳವಣಿಗೆ ನಂತರ ಹುಚ್ಚ ಎಂದು ಕರೆಯತೊಡಗಿದ್ದಾರೆ. ಆದರೆ ಈ ಬಗ್ಗೆ ಬಸ್ಯಾಗೆ ಯಾವುದೇ ಬೇಸರವಿಲ್ಲ. ಭಾರತೀಯರು ಪ್ರೀತಿ-ವಿಶ್ವಾಸ ಹಂಚಲು ವಿದೇಶಗಳಿಗೆ ಹೋಗಿದ್ದಾರೆ. ಆದರೆ ಅವರ ಮೇಲೆ ಹಲ್ಲೆ ಮಾಡುವುದು ನಿಲ್ಲಬೇಕು. ಈ ಮೂಲಕ ಪ್ರೀತಿ ವಿಶ್ವಾಸ ಹಂಚಿಕೊಳ್ಳಬೇಕು ಎಂದು ಹೇಳುತ್ತಾನೆ.

ಅದರಲ್ಲೂ 2017ರಲ್ಲಿ ಕನಾಸ್​ನಲ್ಲಿ ನೌಕಾಪಡೆಯ ಸಿಬ್ಬಂದಿ ಶ್ರೀನಿವಾಸ್ ಕುಚಿಬೋಟ್ಲಾ ಅವರ ಹತ್ಯೆಯ ನಂತರ ಬಸ್ಯಾ ಆತಂಕ ಹೆಚ್ಚಾಗಿದೆ.

Next Story

RELATED STORIES