Top

ಸುದೀಪ್ ಅಭಿನಯದ ಸಿನಿಮಾ ಸೆಟ್ ಧ್ವಂಸ

ಸುದೀಪ್ ಅಭಿನಯದ ಸಿನಿಮಾ ಸೆಟ್ ಧ್ವಂಸ
X

ಕಿಚ್ಚಾ ಸುದೀಪ್ ಮತ್ತು ಚಿರು ಅಭಿನಯದ ಸೈರಾ ಚಿತ್ರತಂಡಕ್ಕೆ HMDA (Hyderabad Metropolitan Development Authority)ಬಿಗ್ ಶಾಕ್ ನೀಡಿದೆ. ಸೈರಾ ಚಿತ್ರಕ್ಕಾಗಿ ಹಾಕಿದ ಸೆಟ್‌ನ್ನ ಕೆಡವಲಾಗಿದೆ.

ಸೈರಾ ಚಿತ್ರಕ್ಕಾಗಿ ಹೈದರಾಬಾದ್ ಹೊರವಲಯದಲ್ಲಿ ಸೆಟ್ ನಿರ್ಮಿಸಲಾಗಿತ್ತು. ಆದ್ರೆ ಆ ಜಾಗ ಸರ್ಕಾರದ್ದಾಗಿದ್ದು, ಅಲ್ಲಿ ಯಾವುದೇ ಸೆಟ್ ಹಾಕುವಂತಿಲ್ಲವಾಗಿದ್ದರಿಂದ HMDA ಸೈರಾ ಸೆಟ್ ಕೆಡವಿದೆ. ಈ ಹಿಂದೆ ರಾಮ್‌ ಚರಣ್ ನಟನೆಯ ರಂಗಸ್ಥಳಂ ಸೆಟ್ ಅದೇ ಜಾಗದಲ್ಲಿ ಹಾಕಲಾಗಿತ್ತು. ಆಗಲೂ ರಂಗಸ್ಥಳಂ ಚಿತ್ರತಂಡಕ್ಕೆ HMDA ನೋಟಿಸ್ ಕಳಿಸಿತ್ತು. ಆದ್ರೆ ರಂಗಸ್ಥಳಂ ಚಿತ್ರತಂಡ ನೋಟಿಸ್ ಗೆ ಪ್ರತಿಕ್ರಿಯಿಸಿರಲಿಲ್ಲ. ಅದೇ ಜಾಗದಲ್ಲಿ ಸೈರಾ ಸೆಟ್ ನಿರ್ಮಾಣ ಮಾಡಲಾಗಿದ್ದು, ಇದೀಗ ಸೆಟ್ ಕೆಡವಲಾಗಿದೆ.

ಸೈರಾ ಸ್ವತಂತ್ರ ಯೋಧ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನಾಧರಿತ ಚಿತ್ರವಾಗಿದ್ದು, ಸುರೇಂದರ್ ರೆಡ್ಡಿ ನಿರ್ದೇಶನದ ಚಿತ್ರವನ್ನ ರಾಮ್ ಚರಣ್ ನಿರ್ಮಾಣ ಮಾಡ್ತಿದ್ದಾರೆ.

https://www.youtube.com/watch?v=LaNM0qcvgeA

Next Story

RELATED STORIES