Top

ಪ್ರಸಿದ್ಧ ದೇವಾಲಯಕ್ಕೆ ಬೀಗ..!

ಪ್ರಸಿದ್ಧ ದೇವಾಲಯಕ್ಕೆ ಬೀಗ..!
X

ಮೈಸೂರು: ಟಿ.ನರಸೀಪುರದ ವಿಶ್ವವಿಖ್ಯಾತ ಸೋಮನಾಥೇಶ್ವರ ದೇಗುಲಕ್ಕೆ ಗ್ರಾಮಸ್ಥರೇ ಬೀಗ ಹಾಕಿರುವ ಘಟನೆ ನಡೆದಿದೆ.ಪುರಾತತ್ವ ಇಲಾಖೆಯ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಗುಲದ ಮುಂಭಾಗವೇ ಪ್ರತಿಭಟನೆ ಕೈಗೊಂಡ ಗ್ರಾಮಸ್ಥರು, ಮನೆ ನಿರ್ಮಾಣಕ್ಕೂ ಅವಕಾಶ ನೀಡದ ಹಿನ್ನಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2010ರಲ್ಲಿ ದೇಗುಲದ‌ ಸಮೀಪ ಮನೆ ಕಟ್ಟದಂತೆ ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಆದೇಶದ ಅನ್ವಯ ಯಾವುದೇ ಮನೆಯನ್ನ 100 ಮೀ. ಅಂತರದಲ್ಲಿ ಕಟ್ಟುವ ಹಾಗಿಲ್ಲ. ದೇಗುಲದ ಸುತ್ತಲಿನ ಯಾವುದೇ ದಿಕ್ಕಿನಲ್ಲಿ 100ಮೀ. ಒಳಗೆ ಮನೆ ಕಟ್ಟುವಂತಿಲ್ಲ. ಆದರೆ 100ಮೀ ಹೊರತುಪಡಿಸಿ ಆಚೆ‌ ನಿರ್ಮಾಣಕ್ಕೆ‌ ಅನುಮತಿ ನೀಡಲಾಗಿತ್ತು. ಆದ್ರೆ 2012ರಲ್ಲಿ ನೂರಾರು ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಅನುಮತಿ ಕೊಡಬೇಕಿದ್ದ ಪುರಾತತ್ವ ಇಲಾಖೆ, ಕಣ್ಣೊರೆಸುವ ತಂತ್ರದಂತೆ, ಕೇವಲ 13ಜನಕ್ಕೆ ಅನುಮತಿ ನೀಡಿದೆ. ಈ ಕಾರಣಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಮನೆ ನಿರ್ಮಿಸಿಕೊಳ್ಳಲು ಬಂದ ಹಣ ಬಿಡುಗಡೆ ಮಾಡಿಲ್ಲವೆಂದು ಪ್ರತಿಭಟನೆಗಿಳಿದಿದ್ದಾರೆ.

ಅನೇಕ ಬಾರಿ ಅಧಿಕಾರಿಗಳು ಆಶ್ವಾಸನೆ ನೀಡಿದ್ರು ಪ್ರಯೋಜನವಾಗಿಲ್ಲ. ಈ ಬಾರಿ ಬೇಡಿಕೆ ಈಡೇರಿಸದಿದ್ರೆ ದೇಗುಲದೊಳಗೆ ಅಡುಗೆ ಮಾಡಿ ವಾಸ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಇನ್ನು ದೇಗುಲಕ್ಕೆ ಬೀಗ ಜಡಿದ ಪರಿಣಾಮ, ಪರವಾಸಿಗರು ಮನೆಕಡೆ ಹೆಜ್ಜೆ ಇಡುತ್ತಿದ್ದಾರೆ.

https://www.youtube.com/watch?v=6CUMHXjrc38

Next Story

RELATED STORIES