Top

ಸುದೀಪ್ ವಿರುದ್ಧ ವಂಚನೆ ಆರೋಪ..!

ಸುದೀಪ್ ವಿರುದ್ಧ ವಂಚನೆ ಆರೋಪ..!
X

ಚಿಕ್ಕಮಗಳೂರು: ಕಿಚ್ಚಸುದೀಪ್ ನಿರ್ಮಾಣದ ವಾರಸ್ದಾರ ಎಂಬ ಧಾರಾವಾಹಿಗೆ ಸಂಬಂಧಪಟ್ಟಂತೆ, ಸುದೀಪ್ ವಿರುದ್ಧ ವಂಚನೆ ಆರೋಪದ ದೂರು ದಾಖಲಾಗಿದೆ.

ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ಒಂದನ್ನ ಸುದೀಪ್, ತಮ್ಮ ನಿರ್ಮಾಣದ ಧಾರಾವಾಹಿ ವಾರಸ್ದಾರಗಾಗಿ ಬಾಡಿಗೆಗೆ ಪಡೆದಿದ್ದು, ಅದರ ಬಾಡಿಗೆ ಹಣವನ್ನು ಎಸ್ಟೇಟ್ ಮಾಲೀಕನಿಗೆ ನೀಡಿಲ್ಲವೆಂಬ ಆರೋಪ ಕೇಳಿ ಬಂದಿದೆ. ಈ ಕಾರಣಕ್ಕಾಗಿ ಕಾಫಿ ಎಸ್ಟೇಟ್ ಮಾಲೀಕ, ಫಿಲ್ಂ ಚೇಂಬರ್ ಹಾಗೂ ಸಿಎಂಗೆ ದೂರು ನೀಡಿದ್ದಾರೆ.

ಚಿಕ್ಕಮಗಳೂರು ಕಾಫಿ ಎಸ್ಟೇಟ್ ಮಾಲೀಕ ದೀಪಕ್ ಮಯೂರ್ ಪಟೇಲ್, ಸುದೀಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಎಸ್ಟೇಟ್ ನಾಶ ಮಾಡಿ, ಶೂಟಿಂಗ್ ಮಾಡಲಾಗಿತ್ತು ಎಂದಿದ್ದಾರೆ. ಕಿಚ್ಚ ಕ್ರಿಯೇಶನ್ಸ್ ಅಡಿ ಧಾರವಾಹಿ ನಿರ್ಮಾಣವಾಗಿತ್ತು.ಆದ್ರೆ ಎಸ್ಟೇಟ್ ಬಾಡಿಗೆಗೆ ಪಡೆದ ಸುದೀಪ್ ಹಣ ನೀಡದಿದ್ದಕ್ಕೆ ಮಾಲೀಕ ಚಿಂತೆಗೀಡಾಗಿದ್ದಾರೆ. ಸದ್ಯ ತನಗೆ ಬರಬೇಕಾದ ಲಕ್ಷ ಲಕ್ಷ ಹಣ ಬಾಕಿ ಇರೋದಕ್ಕೆ ದೀಪಕ್ ಕಂಗಾಲ್ ಆಗಿದ್ದು, ನೊಂದ ರೈತನ ಕಷ್ಟ ಸುದೀಪ್‌ಗೆ ತಲುಪದಿದ್ದಕ್ಕೆ ದೀಪಕ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಫಿಲ್ಂ ಛೇಂಬರ್ ಮತ್ತು ಮುಖ್ಯಮಂತ್ರಿಗಳಿಗೆ ದೀಪಕ್ ದೂರು ನೀಡಿದ್ದಾರೆ.

ಇನ್ನು ಟಿವಿ5ಗೆ ಬಂದ ಮಾಹಿತಿಯ ಪ್ರಕಾರ, ಪರಿಹಾರವಾಗಿ ಮಾಲೀಕನಿಗೆ ಹಣ ಸಂದಾಯವಾಗಿದೆ.

Next Story

RELATED STORIES