Top

ಈ ಬಸ್‌ ನಿಲ್ದಾಣದಲ್ಲಿ ನಿಂತ್ರೆ, ಅಪಾಯ ಗ್ಯಾರಂಟಿ.!

ಈ ಬಸ್‌ ನಿಲ್ದಾಣದಲ್ಲಿ ನಿಂತ್ರೆ, ಅಪಾಯ ಗ್ಯಾರಂಟಿ.!
X

ಶಿರಸಿ : ಮಳೆ ಬಂತೆಂದರೆ ಸಾಕು ಸೋರುವ ಕಟ್ಟಡ, ಬಿರುಕು ಬಿಟ್ಟಿರುವ ಗೋಡೆಗಳು, ಕಟ್ಟಡದ ಒಳಗಡೆ ನಿಂತರೂ ಛತ್ರಿ ಬಿಡಿಸಿ ನಿಂತುಕೊಳ್ಳುವ ಪರಿಸ್ಥಿತಿ, ಮೇಲಿರುವ ರೂಫ್ ನ ಭಾಗಗಳು ಯಾವಾಗ ಕಿತ್ತುಬೀಳುತ್ತೋ ಎನ್ನುವ ಭಯದಿಂದಲೇ ನಿಂತಿರುವ ಪ್ರಯಾಣಿಕರು, ಇದ್ಯಾವ ಕಟ್ಟಡ ಆನ್ಕೊಂಡ್ರಾ ? ಮುಂದೆ ಓದಿ..

ಯೆಸ್, ನಾವೀಗ ಹೇಳ್ತಿರೋದು ಉತ್ತರ ಕನ್ನಡ ಜಿಲ್ಲೆ ಶಿರಸಿಯ ಹಳೇ ಬಸ್ ನಿಲ್ದಾಣದ ಪರಿಸ್ಥಿತಿ. ಈ ಬಸ್ ನಿಲ್ದಾಣ ನಿರ್ಮಾಣವಾಗಿ 58 ವರ್ಷ ಕಳೆದಿದೆ. ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ ಕೂಡ. ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಪ್ರಯಾಣಿಕರು ನಿಲ್ಲುವ ಸ್ಥಳ ಇದು. ಎಲ್ಲಾ ಬಸ್ ಶೆಡ್ಯೂಲ್ ಗಳೂ ಇಲ್ಲಿಂದಲೇ ಕಾರ್ಯನಿರ್ವಹಿಸುತ್ತಿವೆ.

ನಗರದಿಂದ 2 ಕಿಲೋಮೀಟರ್ ಹೊರಗಡೆ ಹೊಸ ಬಸ್ ನಿಲ್ದಾಣ ನಿರ್ಮಾಣವಾಗಿದ್ದರೂ ನಗರದಿಂದ ಹೊರಗಿರುವ ಕಾರಣ ಅದರ ಉಪಯೋಗ ಅಷ್ಟಕ್ಕಷ್ಟೇ ಆಗಿದೆ. ಇನ್ನು ಕಟ್ಟಡವು ಎರಡು ಅಂತಸ್ತುಗಳಿಂದ ಕೂಡಿದ್ದು, ಮೇಲ್ಗಡೆ ಭಾಗವು ಯಾವುದೇ ಉಪಯೋಗವಿಲ್ಲದೆ ಸಂಪೂರ್ಣವಾಗಿ ನಿರ್ಲಕ್ಷಿತವಾಗಿದ್ದು ಸೋರುತ್ತಿದೆ.

ಕೆಳಗಡೆ ಭಾಗದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಹಾಗೂ ನಿಯಂತ್ರಣಾಧಿಕಾರಿಗಳ ಕೊಠಡಿ ಸೇರಿದಂತೆ ಹಲವಾರು ಅಂಗಡಿಗಳಿವೆ. ಆದರೆ ಈಗ ಕಟ್ಟಡವು ಸಂಪೂರ್ಣ ಶಿಥಿಲವಾಗಿದ್ದು ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ರೂಫ್ ಗಳಲ್ಲಿರುವ ಕಂಬಿಗಳಿಗೆಲ್ಲಾ ತುಕ್ಕು ಹಿಡಿದಿದ್ದು ರೂಫ್ ತುಂಡು ತುಂಡಾಗಿ ಕುಸಿದು ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಕಟ್ಟಡದ ಸ್ಥಿತಿ ವೀಕ್ಷಿಸಿದರು.

ಈ ಬಳಿಕ ಮಾಧ್ಯಮದೊಂದಿಗೆ ಮಾತಾಡಿದ ಅವರು ಈ ಬಸ್ಟ್ಯಾಂಡ್ ಕೆಡವಿ ಬೇರೆ ಕಟ್ಟಡವನ್ನು ನಿರ್ಮಾಣ ಮಾಡಬೇಕೆಂದು ಮನವಿ ಮಾಡ್ತಾನೆ ಇದ್ದೇವೆ. ಈ ಶಿಥಿಲಾವಸ್ಥೆಯನ್ನು ನೋಡಿದಾಗ ಹಿಂದಿನ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ಪರವಾಗಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ. ಅಲ್ಲದೇ ಕಟ್ಟಡ ಯಾವಾಗ ಬಿಳುತ್ತೆ ಅನ್ನೋ ಭಯದಲ್ಲಿ ಪ್ರಯಾಣಿಕರು ಇದ್ದಾರೆ. ಕಟ್ಟಡ ಕೆಡವಲು ಆದೇಶ ಏನೋ ಬಂದಿದೆ ಆದ್ರೆ ಕೆಡವಿದರೆ ಬೇರೆ ಮಂಜೂರಿಯಾಗಿಲ್ಲ. ಹಿಂದಿನ ಸರ್ಕಾರವಂತೂ ಅಭಿವೃದ್ಧಿ ಪರವಾಗಿ, ಜನರ ಪರವಾದ ಕಾಳಜಿ , ಜವಾಬ್ದಾರಿಯನ್ನು ಹಿಂದೆಂದೂ ಕಂಡಿಲ್ಲ. ಈ ಸರ್ಕಾರ ಇನ್ನು ಈಗ ಅಷ್ಟೇ ಅಸ್ತಿತ್ವಕ್ಕೆ ಬರ್ತಾ ಇದೆ ಅಂದ್ರು.

ಒಂದ್ಕಡೆ ಕಟ್ಟಡದ ಪರಿಸ್ಥಿತಿ ಹೀಗಾದರೆ, ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಸರಿಯಾಗಿ ಇಲ್ಲ. ಕುಡಿಯುವ ನೀರಂತೂ ಇಲ್ಲವೇ ಇಲ್ಲ. ಯಾವಾಗ ಗೋಡೆ ಕುಸಿದು ಮೈಮೇಲೆ ಬಿಳುತ್ತೋ ಎನ್ನುವ ಆತಂಕದಲ್ಲಿ ಪ್ರಯಾಣಿಕರು ನಿತ್ಯ ಜೀವವನ್ನು ಕೈಲಿ ಹಿಡಿದು ನಿಲ್ತಾ ಇದಾರೆ.

ಇನ್ನು ಈ ಬಗ್ಗೆ ಶಾಸಕರನ್ನ ಕೇಳಿದ್ರೆ ಇದೇ ಜಾಗದಲ್ಲಿ ಈ ಕಟ್ಟಡವನ್ನ ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿಯೇನೋ ದೊರೆತಿದೆ. ಆದ್ರೆ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಕೂಡ ಮನಸ್ಸು ಮಾಡ್ತಿಲ್ಲ ಎನ್ನುವ ಉತ್ತರ. ಆದ್ರೆ ಇಲ್ಲಿಯ ಪರಿಸ್ಥಿತಿಯನ್ನು ನೋಡಿದಾಗ ಒಂದೊಮ್ಮೆ ಕಟ್ಟಡ ಬಿದ್ದು ಪ್ರಯಾಣಿಕರ ಪ್ರಾಣಹಾನಿ ಸಂಭವಿಸಿದರೆ ಇದಕ್ಕೆಲ್ಲಾ ಹೊಣೆ ಯಾರು ಎನ್ನುವ ಪ್ರಶ್ನೆ ಕಾಡತೊಡಗಿದೆ.

ವರದಿ : ವಿನಾಯಕ್ ಹೆಗಡೆ, ಟಿವಿ5 ಶಿರಸಿ

Next Story

RELATED STORIES