Top

ಕೊನೆಗೂ ಬಿಡುಗಡೆಯಾದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ

ಕೊನೆಗೂ ಬಿಡುಗಡೆಯಾದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ
X

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಸಚಿವ ಸಂಪುಟ ವಿಸ್ತರಣೆಯಾಗಿತ್ತು. ಸಂಪುಟ ವಿಸ್ತರಣೆ ನಂತರ ಎರಡೂ ಪಕ್ಷಗಳಲ್ಲಿ ಭಿನ್ನಮತ ಸ್ಫೋಟಗೊಳ್ಳುವ ಭೀತಿ ಇತ್ತು. ಇದೀಗ ಜಿಲ್ಲಾ ಉಸ್ತುವಾರಿ ನೇಮಕವನ್ನು ಕೊನೆಗೂ ಅಧಿಕೃತಗೊಳಿಸುವ ಮೂಲಕ ಸಮಾಧಾನಪಡಿಸುವ ಪ್ರಯತ್ನ ನಡೆದಿದೆ.

ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಮಂಗಳವಾರ 30 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಮಾಡಿದ್ದಾರೆ. ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮತ್ತು ಡಿ.ಕೆ. ಶಿವಕುಮಾರ್​ಗೆ ಎರಡು ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ.

ಪರಮೇಶ್ವರ್​ಗೆ ಬೆಂಗಳೂರು ನಗರ ಮತ್ತು ತುಮಕೂರು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದ್ದರೆ, ಡಿ.ಕೆ. ಶಿವಕುಮಾರ್​ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆದ್ದ ಬಳ್ಳಾರಿ ಹಾಗೂ ಹಾಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ರಾಮನಗರ ಜಿಲ್ಲೆಯ ಉಸ್ತುವಾರಿಯನ್ನು ವಹಿಸಲಾಗಿದೆ. ಭಾರೀ ವಿವಾದಕ್ಕೆ ಕಾರಣವಾಗಿದ್ದ ಮೈಸೂರು ಜಿಲ್ಲೆಯನ್ನು ಜಿ.ಟಿ.ದೇವೇಗೌಡ ಅವರಿಗೆ ವಹಿಸಲಾಗಿದೆ.

 • ಜಿ.ಪರಮೇಶ್ವರ್- ಬೆಂಗಳೂರುನಗರ, ತುಮಕೂರು
 • ಡಿ.ಕೆ.ಶಿವಕುಮಾರ್- ರಾಮನಗರ, ಬಳ್ಳಾರಿ
 • ಕೆ.ಜೆ.ಜಾರ್ಜ್- ಚಿಕ್ಕಮಗಳೂರು
 • ರಮೇಶ್ ಜಾರಕಿಹೊಳಿ- ಬೆಳಗಾವಿ
 • ಶಿವಾನಂದ ಪಾಟೀಲ್- ಬಾಗಲಕೋಟೆ
 • ಪ್ರಿಯಾಂಕ ಖರ್ಗೆ- ಕಲಬುರಗಿ
 • ರಾಜಶೇಖರ್ ಪಾಟೀಲ್- ಯಾದಗಿರಿ
 • ವೆಂಕಟರಮಣಪ್ಪ- ಚಿತ್ರದುರ್ಗ
 • ಶಿವಶಂಕರರೆಡ್ಡಿ- ಚಿಕ್ಕಬಳ್ಳಾಪುರ
 • ಕೃಷ್ಣಭೈರೇಗೌಡ- ಬೆಂ.ಗ್ರಾಮಾಂತರ,ಕೋಲಾರ
 • ಯು.ಟಿ.ಖಾದರ್- ದಕ್ಷಿಣ ಕನ್ನಡ
 • ಜಯಮಾಲಾ- ಉಡುಪಿ
 • ಆರ್.ಶಂಕರ್- ಕೊಪ್ಪಳ
 • ಎನ್.ಮಹೇಶ್ -ಗದಗ
 • ವೆಂಕಟರಾವ್ ನಾಡಗೌಡ- ರಾಯಚೂರು
 • ಎಸ್.ಆರ್.ಶ್ರೀನಿವಾಸ್- ದಾವಣಗೆರೆ
 • ಸಿ.ಎಸ್.ಪುಟ್ಟರಾಜು- ಮಂಡ್ಯ
 • ಸಾ.ರಾ.ಮಹೇಶ್- ಕೊಡಗು
 • ಬಂಡೆಪ್ಪ ಕಾಶೆಂಪುರ್- ಬೀದರ್
 • ಹೆಚ್.ಡಿ.ರೇವಣ್ಣ- ಹಾಸನ
 • ಡಿ.ಸಿ.ತಮ್ಮಣ್ಣ- ಶಿವಮೊಗ್ಗ
 • ಎಂ.ಸಿ.ಮನಗೂಳಿ- ವಿಜಯಪುರ
 • ಜಿ.ಟಿ.ದೇವೇಗೌಡ- ಮೈಸೂರು

Next Story

RELATED STORIES