Top

ತವರು ಮನೆಗೆ ವಾಪಸ್ ಆದ ಮಾಡ್ರನ್ ಜೂಲಿ : ಟೆರರಿಸ್ಟ್ ಗೆಟಪ್ನಲ್ಲಿ ತುಪ್ಪದ ಬೆಡಗಿ.!

ತವರು ಮನೆಗೆ ವಾಪಸ್ ಆದ ಮಾಡ್ರನ್ ಜೂಲಿ : ಟೆರರಿಸ್ಟ್ ಗೆಟಪ್ನಲ್ಲಿ ತುಪ್ಪದ ಬೆಡಗಿ.!
X

ಜೂಲಿ ಅವತಾರದಲ್ಲಿ ಮತ್ತೇರಿಸಿದ್ದ ಕುಂದ ನಗರ ಕುವರಿ ಈಗ ಝಾನ್ಸಿ ಗೆಟಪ್​​ನಲ್ಲಿ ದುಷ್ಟರನ್ನು ಬೆಂಡೆತ್ತಲಿದ್ದಾರೆ.. ಅದು ಅಕ್ಕ ಪಕ್ಕದ ಇಂಡಸ್ಟ್ರಿಯಲ್ಲಲ್ಲಾ, ನಮ್ಮ ಸ್ಯಾಂಡಲ್​ವುಡ್​​ ಸಿನಿಮಾದಲ್ಲೇ. ಯೇಸ್ ಫೋರ್ತ್ ಜನರೇಶನ್ ಜೂಲಿ ಲಕ್ಷ್ಮೀ ರಾಯ್ ಮತ್ತೆ ತವರು ಮನೆ ಚಂದನವನಕ್ಕೆ ವಾಪಸ್ ಬರುತ್ತಿದ್ದಾರೆ. ಅದು ಝಾನ್ಸಿ ಅವತಾರದಲ್ಲಿ.

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಲ್ಪಾನ ಚಿತ್ರದಲ್ಲಿ ನಟಿಸಿದ್ದ ಲಕ್ಷ್ಮೀ ರಾಯ್ ಮತ್ತೆ ಕನ್ನಡಕ್ಕೆ ವಾಪಸ್ ಬರ್ಲೇ ಇಲ್ಲ.. ಟಾಲಿವುಡ್​, ಕಾಲಿವುಡ್ ಹಾಗೂ ಮಾಲಿವುಡ್​​ನ ಸ್ಟಾರ್ ನಟರ ಜೊತೆಗೆ ಕಾಣಿಸಿಕೊಳ್ತಿದ್ದವರು ಏಕ್ದಮ್ ಜೂಲಿ ಗೆಟಪ್​ನಲ್ಲಿ ಬಾಲಿವುಡ್​ಗೂ ಹಾರಿಬಿಟ್ಟರು.. ಜೂಲಿ ನಂತರ ಲಕ್ಷ್ಮೀ ಕರುನಾಡ ಪ್ರೇಕ್ಷಕರಿಗೆ ಕೈಗೆಟುಗದ ಹುಣ್ಣಿಮೆ ಚಂದ್ರ ಆಗಿಬಿಟ್ಟಿದ್ರು.. ಆದ್ರೆ ಕನ್ನಡತಿ ಲಕ್ಷ್ಮೀ ರಾಯ್​ಗೆ ಕನ್ನಡದ ಮೇಲಿನ ಅಭಿಮಾನ ವಾಪಸ್ ಮತ್ತೆ ಸ್ಯಾಂಡಲ್​ವುಡ್​ಗೆ ಬಲಾಗಲಿಟ್ಟು ಬರುವಂತೆ ಮಾಡಿದೆ.

ಕನ್ನಡದಿಂದ ನೇರವೆರುತ್ತಿದ್ದಿ ಲಕ್ಷ್ಮೀಯ ಕನಸು..!

ಅಷ್ಟಕ್ಕೂ ಲಕ್ಷ್ಮೀ ರಾಯ್ ರವರನ್ನು ಮತ್ತೆ ಕನ್ನಡಕ್ಕೆ ಬರುವಂತೆ ಮಾಡುತ್ತಿರುವವರು ಖ್ಯಾತ ನಿರ್ದೇಶಕ ಪಿವಿಎಸ್​ ಗುರುಪ್ರಸಾದ್.. ಕನ್ನಡದಲ್ಲಿ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಗುರುಪ್ರಸಾದ್ ಹೇಣೆದಿರುವ ರಿಯಲಿಸ್ಟಿಕ್ ಕಹಾನಿಗೆ ಮನಸೋತು ಲಕ್ಷ್ಮೀ ರಾಯ್ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಝಾನ್ಸಿ ಚಿತ್ರ ಫೀಮೇಲ್ ಓರಿಯೆಂಟೆಡ್ ಚಿತ್ರವಾಗಿದ್ದು, ಲಕ್ಷ್ಮೀಯವರಿಗೆ ಒಂದೆ ಚಿತ್ರದಲ್ಲಿ ಡಿಫರೆಂಟ್ ಶೇಡ್​ವೂಳ ಪಾತ್ರ ಸಿಕ್ಕಿದೆ..

ಝಾನ್ಸಿ ಚಿತ್ರ ಸ್ತ್ರೀ ಪ್ರಧಾನ ಕಥೆಹೊಂದಿದ್ದು, ಪೊಲೀಸ್​ ಅವತಾರದಲ್ಲಿ ಲಕ್ಷ್ಮೀ ಕ್ಯಾಮೆರಾ ಎದುರಿಸಲಿದ್ದಾರೆ.. ಝಾನ್ಸಿ ಆಗಸ್ಟ್ ಕೊನೆಯವಾರದಲ್ಲಿ ಸೆಟ್ಟೇರಲಿದ್ದು, ಚಿತ್ರಕ್ಕಾಗಿ ಲಕ್ಷ್ಮೀ ರಾಯ್ ಮಾರ್ಶಲ್ ಆರ್ಟ್​​ ಕಲೆಯಲಿದ್ದಾರೆ..

ಇದು ಪಿಸಿ ಶೇಖರ್ ಕಲ್ಪನೆಯ ಭೂಗತ ಕಹಾನಿ..!

ಈಗಾಲೇ ಫಿಮೇಲ್ ಆ್ಯಕ್ಷನ್ ಓರಿಯೆಂಟೆಡ್ ಸಿನಿಮಾಗಳಲ್ಲಿ ರಾಗಿಣಿ ಮಿಂಚು ಹರಿಸಿದ್ದಾರೆ.. ಆದ್ರೆ ಈ ಭಾರಿ ಕೊಂಚ ಡಿಫರೆಂಟ್.. ದುಷ್ಟರನ್ನು ಸದೇ ಬಡೆಯುವ ರಣಚಂಡಿಯಾಗಿದ್ದವರು ತಾವೇ ಈಗ ಭೂಗತ ಪಾತಕಿಯ ರೀತಿ ಪೋಸ್ ಕೊಟ್ಟಿದ್ದಾರೆ.. ಇದಕ್ಕೆ ಕಾರಣ ನಿರ್ದೇಶಕ ಪಿಸಿ.ಶೇಖರ್..

ಸ್ಟೈಲ್ ಕಿಂಗ್, ರೋಮಿಯೋ, ರಾಗ ಸಿನಿಮಾಗಳಂತ ಕ್ಲಾಸ್ ಆಂಡ್ ಮಾಸ್ ಸಿನಿಮಾಗಳಿಂದ ಬೆಳ್ಳಿತೆರೆಯನ್ನು ಬೆಳಗಿಸಿದ್ದರು ಪಿ.ಸಿ.ಶೇಖರ್ ಈಗ ಟೆರರಿಸಮ್ ಪಾಠ ಮಾಡಲಿದ್ದಾರೆ.. ರಾಗಿಣಿಯವರನ್ನು ಮುಖ್ಯಭೂಮಿಕೆಯಲ್ಲಿಟ್ಟುಕೊಂಡು, ಬೆಂಗಳೂರಿನಲ್ಲಿ 2011ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಬೆಳಕು ಚೆಲ್ಲಲಿದ್ದಾರೆ... ಚಿತ್ರದ ಪ್ರೋಮೋಷನ್ ಅಂಗವಾಗಿ ರಾಗಿಣಿಯವರ ಫಸ್ಟ್ ಲುಕ್​ನ ರಿವೀಲ್ ಮಾಡಿದ್ದಾರೆ.

ಶೂಟಿಂಗೂ , ಎಡಿಟಿಂಗೂ ಎಲ್ಲಾ ಮುಗಿಸಿಕೊಂಡಿರುವ ಚಿತ್ರತಂಡ ಈಗ ಪ್ರಚಾರಕ್ಕೆ ಇಳಿದ್ದಿದೆ.. ರೆಬಲ್ ಸ್ಟಾರ್ ಅಂಬರೀಶ್​ರವರಿಂದ ಪೋಸ್ಟರ್ ಲಾಂಚ್ ಮಾಡ್ಸಿದೆ.. ಇನ್ನು ಚಿತ್ರದ ಬಗ್ಗೆ ನಾಯಕಿ ರಾಗಿಣಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು , ತಮ್ಮ ಅಭಿನಯದ ಅನುಭವವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಕನ್ನಡದ ರಾ ಸುಂದರಿಯರಾದ ರಾಗಿಣಿ, ರಾಧಿಕಾ, ರಶ್ಮಿಕಾ, ರಚಿತಾ, ರಾಯ್ ಲಕ್ಷ್ಮೀ ಎಲ್ಲರೂ ಪ್ರಧಾನ ನಾಯಕಿಯಾರಾಗಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಬಾಲಿವುಡ್​ ಬೆಳ್ಳಿಪರದೆಯಲ್ಲಿ ಬೆಳಕು ಚೆಲ್ಲಿ ಗೆದ್ದಿದ್ದ ಸ್ತ್ರೀ ಸಿನಿಮಾ ಸ್ಫೂರ್ತಿಗಳು ಈಗ ಸ್ಯಾಂಡಲ್​​ವುಡ್ ಮಂದಿಯ ಮೇಲೆಯು ಪ್ರಭಾವ ಬೀರಿದೆ.. ಒಳ್ಳೆ ಒಳ್ಳೆ ಸಿನಿಮಾಗಳು ಕನ್ನಡದಲ್ಲಿ ಬಂದು ಪ್ರೇಕ್ಷಕರ ಮನಗೆಲ್ಲುವಂತ್ತಾಗಲಿ.

Next Story

RELATED STORIES