Top

ಆಗಸ್ಟ್ 15ರಿಂದ ಕೆಪಿಎಲ್ ಶುರು : ಪಂದ್ಯದ ವೇಳಾಪಟ್ಟಿ ಹೀಗಿದೆ..

ಆಗಸ್ಟ್ 15ರಿಂದ ಕೆಪಿಎಲ್ ಶುರು : ಪಂದ್ಯದ ವೇಳಾಪಟ್ಟಿ ಹೀಗಿದೆ..
X

ಬೆಂಗಳೂರು : ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌)ನ 7ನೇ ಆವೃತ್ತಿಯ ಮೊದಲ ಪಂದ್ಯ ಆ.15ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಮತ್ತು ಹಾಲಿ ಚಾಂಪಿಯನ್ಸ್‌ ಬೆಳಗಾವಿ ಪ್ಯಾಂಥರ್ಸ್‌ ಮುಖಾಮುಖಿಯಾಗುವುದರೊಂದಿಗೆ ಶುರುವಾಗಲಿದೆ.

ಅಂದಹಾಗೇ ಆ.15 ರಿಂದ 17ರ ವರೆಗೆ 3 ಪಂದ್ಯಗಳು ಬೆಂಗಳೂರಿನಲ್ಲಿ ಜರುಗಿದರೆ, ಆ.19ರಿಂದ 26ರವರೆಗೆ ಹುಬ್ಬಳ್ಳಿಯ ರಾಜನಗರ ಕ್ರೀಡಾಂಗಣದಲ್ಲಿ ಒಟ್ಟು 8 ದಿನ 11 ಪಂದ್ಯಗಳು ನಡೆಯಲಿವೆ. ಆ.28 ರಿಂದ ಸೆ.6ರವರೆಗೆ ಮೈಸೂರಿನ ಎಸ್‌ಡಿಎನ್‌ಆರ್‌ ಒಡೆಯರ್‌ ಕ್ರೀಡಾಂಗಣದಲ್ಲಿ ಫೈನಲ್‌ ಸೇರಿದಂತೆ ಹತ್ತು ಪಂದ್ಯಗಳು ಜರುಗಲಿವೆ.

ಕೆಪಿಎಲ್‌ 7ನೇ ಆವೃತ್ತಿಯ ವೇಳಾಪಟ್ಟಿ ಈ ಕೆಳಗಿನಂತಿದೆ

  • ಆ.16: ಹುಬ್ಬಳ್ಳಿ-ಬಿಜಾಪುರ, ಬೆಂಗಳೂರು, ಸಂಜೆ 6.30ಕ್ಕೆ
  • ಆ.17: ಬೆಂಗಳೂರು-ಬಳ್ಳಾರಿ, ಬೆಂಗಳೂರು, ಸಂಜೆ 6.30ಕ್ಕೆ
  • ಆ.19: ಹುಬ್ಬಳ್ಳಿ-ಶಿವಮೊಗ್ಗ, ಹುಬ್ಬಳ್ಳಿ, ಸಂಜೆ 6.30ಕ್ಕೆ
  • ಆ.20: ಬಳ್ಳಾರಿ-ಮೈಸೂರು, ಹುಬ್ಬಳ್ಳಿ, ಸಂಜೆ 6.30ಕ್ಕೆ
  • ಆ.21: ಬೆಳಗಾವಿ-ಬಿಜಾಪುರ, ಹುಬ್ಬಳ್ಳಿ, ಸಂಜೆ 6.30ಕ್ಕೆ
  • ಆ.22: ಹುಬ್ಬಳ್ಳಿ-ಬಳ್ಳಾರಿ, ಹುಬ್ಬಳ್ಳಿ, ಸಂಜೆ 4.00ಕ್ಕೆ
  • ಆ.22: ಬೆಂಗಳೂರು-ಬಿಜಾಪುರ, ಹುಬ್ಬಳ್ಳಿ,ಸಂಜೆ 8.30ಕ್ಕೆ
  • ಆ.23: ಹುಬ್ಬಳ್ಳಿ-ಬೆಳಗಾವಿ, ಹುಬ್ಬಳ್ಳಿ, ಸಂಜೆ 6.30ಕ್ಕೆ
  • ಆ.24: ಬಿಜಾಪುರ-ಮೈಸೂರು, ಹುಬ್ಬಳ್ಳಿ, ಸಂಜೆ 6.30ಕ್ಕೆ
  • ಆ.25: ಬೆಳಗಾವಿ-ಬಳ್ಳಾರಿ, ಹುಬ್ಬಳ್ಳಿ, ಸಂಜೆ 4.00ಕ್ಕೆ
  • ಆ.25: ಶಿವಮೊಗ್ಗ-ಬೆಂಗಳೂರು, ಹುಬ್ಬಳ್ಳಿ, ಸಂಜೆ 6.30ಕ್ಕೆ
  • ಆ.26: ಮೈಸೂರು-ಹುಬ್ಬಳ್ಳಿ, ಹುಬ್ಬಳ್ಳಿ, ಸಂಜೆ 4.00ಕ್ಕೆ
  • ಆ.26: ಬಿಜಾಪುರ-ಬಳ್ಳಾರಿ, ಹುಬ್ಬಳ್ಳಿ, ಸಂಜೆ 6.30ಕ್ಕೆ
  • ಆ.28: ಮೈಸೂರು-ಶಿವಮೊಗ್ಗ, ಮೈಸೂರು, ಸಂಜೆ 6.30ಕ್ಕೆ
  • ಆ.29: ಶಿವಮೊಗ್ಗ-ಬೆಳಗಾವಿ, ಮೈಸೂರು, ಸಂಜೆ 6.30ಕ್ಕೆ
  • ಸೆ.1: ಮೈಸೂರು-ಬೆಳಗಾವಿ, ಮೈಸೂರು, ಸಂಜೆ 4.00ಕ್ಕೆ
  • ಸೆ.1: ಹುಬ್ಬಳ್ಳಿ-ಬೆಂಗಳೂರು, ಮೈಸೂರು, ಸಂಜೆ 6.30ಕ್ಕೆ
  • ಸೆ.2: ಶಿವಮೊಗ್ಗ-ಬಿಜಾಪುರ, ಮೈಸೂರು, ಸಂಜೆ 4.00ಕ್ಕೆ
  • ಸೆ.2: ಬೆಂಗಳೂರು-ಮೈಸೂರು, ಮೈಸೂರು, ಸಂಜೆ 6.30ಕ್ಕೆ
  • ಸೆ.3: ಬಳ್ಳಾರಿ-ಶಿವಮೊಗ್ಗ ಮೈಸೂರು, ಸಂಜೆ 6.30ಕ್ಕೆ
  • ಸೆ.4: ಕ್ವಾಲಿಫೈಯರ್‌ 1-ಕ್ವಾಲಿಫೈಯರ್‌ 4, ಮೈಸೂರು, 6.30ಕ್ಕೆ
  • ಸೆ.5: ಕ್ವಾಲಿಫೈಯರ್‌ 2-ಕ್ವಾಲಿಫೈಯರ್‌ 3, ಮೈಸೂರು, 6.30ಕ್ಕೆ
  • ಸೆ.6: ಫೈನಲ್‌, ಮೈಸೂರು, ಸಂಜೆ 6.30ಕ್ಕೆ

ಇನ್ನೂ ಪಂದ್ಯಗಳ ಟಿಕೆಟ್‌ ದರವನ್ನು 50 ರೂ ನಿಂದ 1000 ರೂ.ವರೆಗೂ ನಿಗದಿಪಡಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ 3 ಪಂದ್ಯಗಳಿಗೆ ಸ್ಟೇಡಿಯಂ ಮತ್ತು ಆನ್‌ಲೈನ್‌ನಲ್ಲಿ ಕೂಡ ಟಿಕೆಟ್ ಸಿಗಲಿದೆ.

ಆನ್‌ಲೈನ್‌ ನಲ್ಲಿ ಟಿಕೇಟ್‌ ಖರೀದಿಸುವವರು ಈ ಲಿಂಗ್‌ 1, ಲಿಂಕ್‌ 2 ಹಾಗೂ ಲಿಂಕ್‌ 3 ಕ್ಲೀಕ್‌ ಮಾಡಿ ಖರೀದಿಸಬಹುದು..

Next Story

RELATED STORIES