ಅಗ್ನಿ ಕುಂಡದಲ್ಲಿ ಮಕ್ಕಳನ್ನ ಹಿಡಿದು ನೃತ್ಯ

ಕೋಲಾರ: ಕೋಲಾರದ ಕೆಜಿಎಫ್ ತಾಲೂಕಿನ ಮಾರಿಕುಪ್ಪಂ ಪ್ರಾಂಕಿನ್ ಕೋ ಬಡಾವಣೆಯಲ್ಲಿ ನಡೆದ ಕರಗ ಮಹೋತ್ಸವದಲ್ಲಿ ಕರಗ ಪೂಜಾರಿ ಅಗ್ನಿ ಕುಂಡದಲ್ಲಿ ಮಕ್ಕಳನ್ನು ಹಿಡಿದು ನೃತ್ಯ ಮಾಡಿದ ಘಟನೆ ನಡೆದಿದೆ.
ಶ್ರೀ ದೇವಿ ಮಾರಿಯಮ್ಮನ್ ದೇಗುಲದ 25ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಕರಗ ಮಹೋತ್ಸವ ಆಯೋಜಿಸಲಾಗಿತ್ತು. ಈ ವೇಳೆ ಕರಗ ಪೂಜಾರಿ ಸತೀಶ್ ಮಕ್ಕಳನ್ನು ಹೊತ್ತು ಅಗ್ನಿಕುಂಡ ಪ್ರವೇಶ ಮಾಡಿ, ಮೈ ಮೇಲೆ ಅರಿವಿಲ್ಲದಂತೆ ನೃತ್ಯ ಮಾಡುತ್ತಾ ಮಕ್ಕಳನ್ನು ಹಿಡಿದು ನೃತ್ಯ ಮಾಡಿದ್ದಾರೆ.
ಇನ್ನು ಕಳೆದ 25ವರ್ಷದಿಂದ ಈ ಕರಗ ಮಹೋತ್ಸವ ನಡೆಯುತ್ತಿದ್ದು, ಅಗ್ನಿಕುಂಡ ಪ್ರವೇಶ ಮಾಡುವಾಗ ಮಕ್ಕಳನ್ನು ಹಿಡಿದು ಸಾಗಿದ್ರೆ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದಾಗುವುದೆಂಬ ನಂಬಿಕೆ ಇದೆ. ಈ ಕಾರಣಕ್ಕಾಗಿ ಪೋಷಕರು ಒಬ್ಬರಾದ ಮೇಲೆ ಒಬ್ಬರಂತೆ ತಮ್ಮ ಮಕ್ಕಳನ್ನು ಪೂಜಾರಿಯ ಕೈಗೆ ನೀಡಿದರು. ಇನ್ನು ಕೆಜಿಎಫ್ ನ ಮಾರಿಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರಗ ನಡೆದಿದ್ದು, ಮಕ್ಕಳನ್ನು ಹಿಡಿದು ಅಗ್ನಿ ಕುಂಡದಲ್ಲಿ ಪ್ರವೇಶ ಮಾಡ್ತಿದ್ರು ಕೂಡ, ಪೊಲೀಸರು ಮೂಕ ಪ್ರೇಕ್ಷರಂತೆ ಇದ್ದರು.