Top

ಸಾವಿರ ಪಂದ್ಯಗಳ ಹೊಸ್ತಿಲಲ್ಲಿ ಇಂಗ್ಲೆಂಡ್

ಸಾವಿರ ಪಂದ್ಯಗಳ ಹೊಸ್ತಿಲಲ್ಲಿ ಇಂಗ್ಲೆಂಡ್
X

ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್​​ ಪಂದ್ಯ ನಾಳೆಯಿಂದ ಬರ್ಮಿಂಗ್ ಹ್ಯಾಮ್‌ನಲ್ಲಿ ಆರಂಭವಾಗಲಿದೆ. ಈ ಮಧ್ಯೆ ಇಂಗ್ಲೆಂಡ್ ತಂಡ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆಯಲು ಸಿದ್ದವಾಗಿದೆ. ನಾಳೆ ಎಜ್​​​ ಬಾಸ್ಟನ್​ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 1000ನೇ ಟೆಸ್ಟ್​​ ಪಂದ್ಯವನ್ನು ಆಡಲಿದೆ. ಈ ಮೂಲಕ ಇಂಗ್ಲೆಂಡ್ ಕ್ರಿಕೆಟ್ ತಂಡ ಕ್ರಿಕೆಟ್ ಇತಿಹಾಸದಲ್ಲಿ ಮಗದೊಂದು ಮೈಲಿಗಲ್ಲು ಸ್ಥಾಪಿಸಲಿದೆ.

1877ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯವನ್ನಾಡಿದ ಇಂಗ್ಲೆಂಡ್ ಸದ್ಯ 999 ಪಂದ್ಯ ಆಡಿ ಸಾವಿರದ ಹೊಸ್ತಿಲಲ್ಲಿದೆ. ಆಗಸ್ಟ್​ 1 ರಿಂದ ಭಾರತ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಂಗ್ಲರು ಕಣಕ್ಕಿಳಿಯಲಿದ್ದು, 141 ವರ್ಷಗಳ ಬಳಿಕ ನಾಲ್ಕಂಕೆ ಸಾಧನೆ ಮೆರೆಯಲಿದೆ. ಆಡಿರುವ 999 ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ 357 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, 297 ಸೋತಿದೆ. ಅಂತೆಯೆ 345 ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದೆ. ಸದ್ಯ 999 ಟೆಸ್ಟ್​ ಪಂದ್ಯಗಳನ್ನು ಆಡಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, 812 ಪಂದ್ಯದೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. 535 ಪಂದ್ಯವಾಡಿರುವ ವೆಸ್ಟ್​​ ಇಂಡೀಸ್ ತಂಡ ಮೂರನೇ ಹಾಗೂ 522 ಪಂದ್ಯದೊಂದಿಗೆ ಭಾರತ ನಾಲ್ಕನೇ ಸ್ಥಾನ ಅಲಂಕರಿಸಿದೆ.

Next Story

RELATED STORIES