ಆಟೋ ಚಲಾಯಿಸುವಾಗ ಹೆಲ್ಮೆಟ್ ಹಾಕದಿದ್ರೆ ಫೈನ್..!

X
TV5 Kannada31 July 2018 6:46 AM GMT
ಟ್ರಾಫಿಕ್ ಪೊಲೀಸ್ ಓರ್ವ ಆಟೋ ಚಾಲಕ ಹೆಲ್ಮೆಟ್ ಧರಿಸಲಿಲ್ಲವೆಂದು ದಂಡ ಹಾಕಿರುವ ಹಾಸ್ಯಾಸ್ಪದ ಘಟನೆ ನಡೆದಿದೆ. ಪುತ್ತೂರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ರಸೀತಿಯೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ಈ ಹೊಸ ರೂಲ್ಸ್ ಬಗ್ಗೆ ಕೇಳಿದ ಸಾರ್ವಜನಿಕರು ಅಳಬೇಕೋ ನಗಬೇಕೋ ಎಂದು ತಿಳಿಯದೇ ಕಂಗಾಲಾಗಿದ್ದಾರೆ.
ಪುತ್ತೂರಿನ ಟ್ರಾಫಿಕ್ ಪೊಲೀಸ್ ಮೂರಕ್ಕಿಂತ ಹೆಚ್ಚು ಮಂದಿಯನ್ನ ಆಟೋದಲ್ಲಿ ಕೂರಿಸಿದ್ದಕ್ಕಾಗಿ ಮತ್ತು ಹೆಲ್ಮೆಟ್ ಧರಿಸಲಿಲ್ಲವೆಂಬ ಕಾರಣಕ್ಕೆ, ಆಟೋ ಚಾಲಕನಿಗೆ 700ರೂಪಾಯಿ ದಂಡ ವಿಧಿಸಿದ್ದು, ಇದಕ್ಕಾಗಿ ರಸೀತಿಯೂ ನೀಡಿದ್ದಾರೆ.
ಆಟೋ ಚಾಲಕ ವಿಠ್ಠಲ್ ಎಂಬಾತ 9 ಶಾಲಾ ಮಕ್ಕಳನ್ನು ತನ್ನ ಆಟೋದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ. ಈ ಕಾರಣಕ್ಕೆ ದಂಡ ವಿಧಿಸಿದ್ದು ಸರಿಯಾದರೂ, ಎರಡನೇ ಕಾರಣ ಮಾತ್ರ ಹಾಸ್ಯಾಸ್ಪದವಾಗಿದೆ.
Next Story