Top

ಚಾಲೆಂಜ್‌ ಸ್ವೀಕರಿಸಿ ವಿವಾದಕ್ಕೆ ಸಿಲುಕಿದ ಬಿಗ್‌ಬಾಸ್‌ ಬೇಬಿ

ಚಾಲೆಂಜ್‌ ಸ್ವೀಕರಿಸಿ ವಿವಾದಕ್ಕೆ ಸಿಲುಕಿದ ಬಿಗ್‌ಬಾಸ್‌ ಬೇಬಿ
X

ಮೈಸೂರು: ಬಿಗ್ ಬಾಸ್‌ ಖ್ಯಾತಿಯ ನಿವೇದಿತಾ ಗೌಡ, ಕಿಕಿ ಚಾಲೆಂಜ್ ಸ್ವೀಕರಿಸಿ, ವಿವಾದಕ್ಕೆ ಸಿಲುಕಿದ್ದಾರೆ. ಈ ಚಾಲೆಂಜ್ ಅಪಾಯಕಾರಿಯಾಗಿದ್ದು, ಕಾರ್ ಡೋರ್ ಓಪೆನ್ ಮಾಡಿ, ಕಾರಿನಿಂದ ಇಳಿದು ಹೆಜ್ಜೆ ಹಾಕಬೇಕು.

ಕಿಕಿ ಚಾಲೆಂಜ್ ವಿದೇಶದಲ್ಲಿ ಫೇಮಸ್ ಆಗದ್ದು, ಇದೀಗ ಭಾರತಕ್ಕೂ ಹೆಜ್ಜೆ ಇಟ್ಟಿದೆ. ಇದನ್ನ ಚಾಲೆಂಜ್ ಆಗಿ ಸ್ವೀಕರಿಸುತ್ತಿರುವ ಭಾರತೀಯರು, ತಾವು ಕೂಡ ಕಾರ್ ಡೋರ್ ಓಪನ್ ಮಾಡಿ, ಕಿಕಿ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ.

ಹೀಗೆ ಕಿಕಿ ಚಾಲೆಂಜ್ ಸ್ವೀಕರಿಸಿರುವ ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ, ತಮ್ಮ ಕಾರಿನಿಂದ ಇಳಿದು, ಕಿಕಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ಇದನ್ನ ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನ ನೋಡಿದ ನೆಟ್ಟಿಗರು, ಇದು ಅಪಾಯಕಾರಿ ಎಂದು ಗೊತ್ತಿದ್ದರು ನಿವೇದಿತಾ ಚಾಲೆಂಜ್ ಸ್ವೀಕರಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

Next Story

RELATED STORIES