Top

ರಶ್ಮಿಕಾ ಬಗ್ಗೆ ಇಲ್ಲಸಲ್ಲದ ಕಾಮೆಂಟ್: ಗರಂ ಆದ ಕರ್ನಾಟಕ ಕ್ರಶ್

ರಶ್ಮಿಕಾ ಬಗ್ಗೆ ಇಲ್ಲಸಲ್ಲದ ಕಾಮೆಂಟ್: ಗರಂ ಆದ ಕರ್ನಾಟಕ ಕ್ರಶ್
X

ಕಿರಿಕ್ ಪಾರ್ಟಿಗಳಿಗೆ ಚಮಕ್​ ಕೊಡ್ತಾ ಕೊಡ್ತಾ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕಿದ ಚೆಲುವೆ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸೌತ್ ಸಿನಿದುನಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಈ ಕೊಡಗಿನ ಕುವರಿ, ಇದೀಗ ಟಾಲಿವುಡ್​ನಲ್ಲಿ ಫುಲ್ ಬ್ಯುಸಿ. ರಶ್ಮಿಕಾ ಅಭಿನಯದ ತೆಲುಗಿನ ಎರಡನೇ ಸಿನಿಮಾ ಗೀತಾಗೋವಿಂದಂ ರಿಲೀಸ್​ಗೆ ರೆಡಿಯಾಗಿದೆ. ಇದ್ರ ನಡುವೆ ಚಿತ್ರದಲ್ಲಿನ ರಶ್ಮಿಕಾ ಪೋಸ್ಟರ್​ವೊಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್​ಗೆ ಕಾರಣವಾಗಿದೆ.

ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ, ಗೀತಗೋವಿಂದಂ ಪಕ್ಕಾ ಯೂತ್​ಫುಲ್ ರೊಮ್ಯಾಂಟಿಕ್ ಸಿನಿಮಾ. ನಿರ್ದೇಶಕ ಪರುಶು ರಾಮ್​ ಸಿಕ್ಕಾಪಟ್ಟೆ ರಿಚ್​ ಆಗಿ, ಗೀತಾಗೋವಿಂದರ ಲವ್ ಸ್ಟೋರಿನ ಹೇಳೋಕೆ ಬರ್ತಿದ್ದಾರೆ. ಈಗಾಗ್ಲೇ ಗೀತಾಗೋವಿಂದಂ ಸಾಂಗ್ಸ್ ಸೂಪರ್ ಹಿಟ್ ಆಗಿದ್ದು, ಸ್ಯಾಂಪಲ್​ಗಳಲ್ಲಿ ರಶ್ಮಿಕಾ ಕ್ಯೂಟ್​​ ಲುಕ್ಸ್​ಗೆ ಫ್ಯಾನ್ಸ್ ಫಿದಾ ಆಗೋಗಿದ್ದಾರೆ. ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಒಬ್ಬನ ಜೊತೆ ಎಂಗೇಜ್ಮೆಂಟ್, ಮತ್ತೊಬ್ಬನ ಜೊತೆ ರೊಮ್ಯಾನ್ಸಾ..?! ಅಂತ ರಶ್ಮಿಕಾ ಮಂದಣ್ಣ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡ್ತಿದ್ದಾರೆ.

ಕಿರಿಕ್ ಪಾರ್ಟಿ ಚಿತ್ರದಲ್ಲಿ ಜೊತೆಯಾಗಿ ನಟಿಸಿದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಿನಿಮಾ ಮುಗಿಯೋ ವೇಳೆಗೆ ಪ್ರೀತಿಲಿ ಬಿದ್ದಿದ್ರು. ಕಳೆದ ವರ್ಷ ವಿರಾಜಪೇಟೆಯಲ್ಲಿ ಅದ್ದೂರಿಯಾಗಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಇಬ್ಬರು ಉಂಗುರ ಬದಲಿಸಿಕೊಂಡಿದ್ರು. ಎಂಗೇಜ್ಮೆಂಟ್ ಆದ್ರೂ, ಇಬ್ರು ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಮದುವೆ ಯಾವಾಗ ಅನ್ನೋದು ಇನ್ನೋದು ಕನ್ಫರ್ಮ್ ಆಗಿಲ್ಲ.

ಕನ್ನಡದಲ್ಲಿ ಕಿರಿಕ್ ಪಾರ್ಟಿ ನಂತ್ರ ಚಮಕ್, ಅಂಜನಿಪುತ್ರ ಸಿನಿಮಾಗಳಲ್ಲಿ ನಟಿಸಿ, ಗೆದ್ದ ರಶ್ಮಿಕಾ ಚಲೋ ಸಿನಿಮಾ ಮೂಲಕ ಟಾಲಿವುಡ್​ಗೆ ಪರಿಚಿತರಾದ್ರು. ಇದೀಗ ರಶ್ಮಿಕಾ ಅಭಿನಯದ ಗೀತಗೋವಿಂದಂ ಸಿನಿಮಾ ರಿಲೀಸ್​ಗೂ ಮೊದ್ಲೇ ಬೇಜಾನ್ ಸೌಂಡ್ ಮಾಡ್ತಿದೆ.ಇತ್ತೀಚೆಗೆ ಚಿತ್ರದ ಆಡಿಯೋ ಪೋಸ್ಟರ್​ನಲ್ಲಿ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರು.ಇದೇ ಪೋಸ್ಟರ್​ ಟ್ರೋಲ್​ಗೆ ಕಾರಣವಾಗಿರೋದು.

ಹೀರೋ ವಿಜಯ್​ ದೇವರಕೊಂಡ ಬೆನ್ನಿನ ಮೇಲೆ ರಶ್ಮಿಕಾ ಮಂದಣ್ಣ ಏರಿ ಕೂತಿರೋ ಕ್ಯೂಟ್ ಪೋಸ್ಟರ್ ಅದು. ಈ ಪೋಸ್ಟರ್​​ನ ರಶ್ಮಿಕಾ ಪೋಸ್ಟ್ ಮಾಡ್ತಿದ್ದಂತೆ ಕೆಟ್ಟ ಕೆಟ್ಟ ಕಾಮೆಂಟ್​ಗಳು ಬರೋಕೆ ಶುರುವಾಗಿದೆ. ಒಬ್ಬನ ಜೊತೆ ಎಂಗೇಜ್ಮೆಂಟ್ ಮಾಡ್ಕೊಂಡು ಮತ್ತೊಬ್ಬನ ಜೊತೆ ರೊಮ್ಯಾನ್ಸ್ ಮಾಡ್ತೀಯಾ, ನಿಶ್ಚಿತಾರ್ಥ ಆದ್ಮೇಲೆ ಇದೆಲ್ಲಾ ಬೇಕಾ..? ಅಂತ ಕೆಲವರು ಟ್ರೋಲ್ ಮಾಡೋಕೆ ಪ್ರಾರಂಭಿಸಿದ್ದಾರೆ.

ಟ್ರೋಲ್​ ಮಾಡಿದವರ ಮೇಲೆ ಗರಂ ಆಗಿರೋ ರಶ್ಮಿಕಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ಪುರುಷರು ಮದುವೆ ಆದ್ಮೇಲೂ ಬೇರೆ ಹೀರೋಯಿನ್ಸ್ ಜೊತೆ ಆನ್​ಸ್ಕ್ರೀನ್ ರೊಮ್ಯಾನ್ಸ್ ಮಾಡಿದ್ರೆ, ನಿಮಗೆ ಪ್ರಾಬ್ಲಂ ಇಲ್ಲ. ಅದೇ ಒಬ್ಬ ಹೀರೋಯಿನ್ ಮದ್ವೆ, ಅಥವಾ ಎಂಗೇಜ್ಮೆಂಟ್ ಆದ್ಮೇಲೆ ಬೇರೆ ಹೀರೋ ಜೊತೆ ಆನ್​ಸ್ಕ್ರೀನ್ ರೊಮ್ಯಾನ್ಸ್ ಮಾಡಿದ್ರೆ, ನೀವು ಸಹಿಸಲ್ಲ. ಆಕೆ ಮೇಲಿರೋ ಗೌರವ ಕಡಿಮೆ ಆಗುತ್ತೆ ಅಲ್ವಾ..? ಇದೇನ್ ನ್ಯಾಯ..?” ಅಂತ ರಶ್ಮಿಕಾ ಪ್ರಶ್ನಿಸಿದ್ದಾರೆ.

“ಫೇಕ್​ ಅಕೌಂಟ್​ಗಳಿಂದ ಕೆಲವರು ಇಷ್ಟಬಂದಂತೆ ಕಾಮೆಂಟ್ಸ್ ಮಾಡ್ತಾರೆ.ಯಾಕೆ ಅಂತ ಕೇಳಿದ್ರೆ, ಸಾರಿ ನಿಮ್ಮ ಜೊತೆ ಮಾತಾಡ್ಬೇಕು ಅಂತ ಹೀಗೆ ಮಾಡಿದ್ವಿ ಅಂತಾರೆ.ಅರೆ.. ನಾವು ಮನುಷ್ಯರು. ನಮ್ಮ ಫೀಲಿಂಗ್ಸ್​ನ ಹರ್ಟ್ ಮಾಡಿದ್ರೆ ಹೆಂಗೆ..? ನೆಗೆಟಿವ್ ಕಮೆಂಟ್ ಮಾಡೋರಲ್ಲಿ ಬೇರೆಯವರು ಫ್ಯಾನ್ಸ್ ಹೆಚ್ಚು ಇರ್ತಾರೆ. ಅಂತವರನ್ನ ನಾನು ಕೇರ್ ಮಾಡೋದೇ ಇಲ್ಲ” ಅಂತಾರೆ ರಶ್ಮಿಕಾ.

ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES