Top

ಆಗಸ್ಟ್‌ 7ರಂದು BMTC, KSRTC, ಆಟೋ, ಟ್ಯಾಕ್ಸಿ ಸಿಗೋದಿಲ್ಲ.!!

ಆಗಸ್ಟ್‌ 7ರಂದು BMTC, KSRTC, ಆಟೋ, ಟ್ಯಾಕ್ಸಿ ಸಿಗೋದಿಲ್ಲ.!!
X

ಬೆಂಗಳೂರು : ಮೋಟಾರು ವಾಹನ ತಿದ್ದುಪಡಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ, ಸಾರಿಗೆ ನೌಕರರು ಬೀದಿಗಿಳಿಯಲಿದ್ದಾರೆ.

ಸಾರಿಗೆ ನೌಕರರ ಪ್ರತಿಭಟನೆಯಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಆಟೋ, ಟ್ಯಾಕ್ಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗಿ, ಪ್ರಯಾಣಿಕರಿಗೆ ತೊಂದರೆ ಉಂಟಾಗಲಿದೆ.

ಕಾರಣ ಇಷ್ಟೇ, ಆಗಸ್ಟ್‌ 7ರಂದು ದೇಶವ್ಯಾಪಿ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಕೇಂದ್ರ ಮೋಟಾರು ವಾಹನ ತಿದ್ದುಪಡಿ ಮಸೂದೆಗೆ ತಿದ್ದುಪಡಿ ತರಲು ಹೊರಟಿರೋದೆ ಮುಷ್ಕರಕ್ಕೆ ಕಾರಣವಾಗಿದೆ.

ಈ ಕುರಿತು ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಾರಿಗೆ ಕಾರ್ಮಿಕ ಸಂಘಟನೆಗಳ ಅನೇಕರು, ಆಗಸ್ಟ್‌ 7ರಂದು ದೇಶವ್ಯಾಪಿ ಮುಷ್ಕರ ನಡೆಸಲಾಗುವುದೆಂದು ತಿಳಿಸಿದ್ದಾರೆ.

https://www.youtube.com/watch?v=4Rayem5HkX0&list=PLmylWU4EY3N_2BIFm6MuUkFrBn2j7ZbtF&index=7

ಕೇಂದ್ರ ಸರ್ಕಾರ ತಿದ್ದುಪಡಿ ಮಾಡಲು ಹೊರಟಿರುವ ಹೊಸ ತಿದ್ದುಪಡಿ ಮಸೂದೆಯಲ್ಲಿ ಜನವಿರೋಧಿ ಅಂಶಗಳಿವೆ. ಹೀಗಾಗಿ ಇದನ್ನು ಕೈಬಿಡಬೇಕು ಎಂದು ಆಗಸ್ಟ್‌ 7ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು.

ರೋಡ್‌ ಸೇಫ್ಟಿ ಹೆಸರಿನಲ್ಲಿ ಕೇಂದ್ರ ಸರ್ಕಾರ ಹಳೆಯ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಇದು ಸಾರಿಗೆ ಕಾರ್ಮಿಕರಿಗೆ ಮರಣ ಶಾಸನ ಬರೆದಂತೆ.

ಇಂತಹ ಹೊಸ ಕಾಯ್ದೆಯ ಹೆಸರಿನಲ್ಲಿ ತಿದ್ದು ಪಡಿ ಮಾಡುತ್ತಿರುವುದು ನಿಲ್ಲಿಸಬೇಕು. ಇದನ್ನು ನಾವು ವಿರೋಧಿಸುತ್ತೇವೆ ಎಂದು ಕಾರ್ಮಿಕ ಮುಖಂಡ ರೇವಪ್ಪ ತಿಳಿಸಿದ್ದಾರೆ.

Next Story

RELATED STORIES