Top

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ: ದಶಕದ ಕನಸು ಈಡೇರುವುದೇ?

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ: ದಶಕದ ಕನಸು ಈಡೇರುವುದೇ?
X

ಟಿ-20 ಸರಣಿ ಗೆಲುವಿನೊಂದಿಗೆ ಶುಭಾರಂಭ.. ಏಕದಿನ ಸರಣಿ ಸೋಲಿನ ಆಘಾತ.. ಇದು ಭಾರತ ಇಂಗ್ಲೆಂಡ್ ಪ್ರವಾಸದಲ್ಲಿ ಪಡೆದ ಫಲಿತಾಂಶ. ಇದೀಗ ಭಾರತ ಪ್ರವಾಸದ ಕೊನೆಯ ಭಾಗಕ್ಕೆ ಬಂದಿದ್ದು ಆಗಸ್ಟ್ 1ರಿಂದ ಆರಂಭಗುವಾಗುವ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಲು ಹಾತೊರೆಯುತ್ತಿದೆ.

ಭಾರತ 2007ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ನಲ್ಲಿ ಸರಣಿ ಗೆದ್ದಿತ್ತು. ಈ ಹಿನ್ನೆಲೆಯಲ್ಲಿ ಭಾರತ ತಂಡ ಸುಮಾರು 11 ವರ್ಷಗಳ ನಂತರ ಇಂಗ್ಲೆಂಡ್​ನಲ್ಲಿ ಸರಣಿ ಗೆಲುವಿನ ಗುರಿ ಹೊಂದಿದೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಂತಿಮ 11 ಆಟಗಾರರ ಬಗ್ಗೆ ಗೊಂದಲದಲ್ಲಿದ್ದಾರೆ. ಅನುಭವಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜಸ್​ಪ್ರೀತ್ ಬುಮ್ರಾ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ಆದರೆ ಮೊಹಮದ್ ಶಮಿ, ಇಶಾಂತ್ ಶರ್ಮ ಮತ್ತು ಹಾರ್ದಿಕ್ ಪಾಂಡ್ಯ ವೇಗದ ದಾಳಿಯನ್ನು ಮುನ್ನಡೆಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಇಬ್ಬರು ಸ್ಪಿನ್ನರ್ ಹಾಗೂ ಮೂವರು ವೇಗಿಗಳನ್ನು ಆಡಿಸಬೇಕೆ ಅಥವಾ ನಾಲ್ವರು ವೇಗಿಗಳನ್ನು ಕಣಕ್ಕಿಳಿಸಬೇಕೆ ಎಂಬ ಗೊಂದಲ ಇದೆ. ಹಾಗಾದರೆ ಆರ್​.ಅಶ್ವಿನ್​, ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಸ್ಥಾನಕ್ಕಾಗಿ ಹೋರಾಟ ನಡೆಯಲಿದೆ.

ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಫಾರ್ಮ್ ಕೊರತೆ ಎದುರಿಸುತ್ತಿರುವ ಚೇತೇಶ್ವರ್ ಪೂಜಾರ ಅವರನ್ನು ಹೊರಗಿಡಬೇಕೆ ಬೇಡವೇ ಎಂಬ ಬಗ್ಗೆಯೂ ಗೊಂದಲ ಇದೆ. ಅಜಿಂಕ್ಯ ರಹಾನೆ, ಕೆ.ಎಲ್​. ರಾಹುಲ್ ಅವರನ್ನು ಆಡಿಸುವ ಬಗ್ಗೆ ಒತ್ತಡಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ದಿನೇಶ್ ಕಾರ್ತಿಕ್ ಬಗ್ಗೆ ಚರ್ಚೆಗಳು ನಡೆದಿದೆ.

ಇದೇ ವೇಳೆ ಭಾರತ ಯಾರನ್ನೇ ಆಡಿಸಿದರೂ ಇಂಗ್ಲೆಂಡ್​ನ ಅಲಿಸ್ಟರ್ ಕುಕ್, ಜೋ ರೂಟ್​ ಅವರನ್ನು ಪ್ರಮುಖವಾಗಿ ಕಟ್ಟಿ ಹಾಕಲು ತಂತ್ರ ರೂಪಸಿಬೇಕಾಗಿದೆ.ಅದೇ ರೀತಿ ಬೌಲಿಂಗ್​ನಲ್ಲಿ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆ್ಯಂಡರ್ಸನ್ ಅವರನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಬೇಕಾಗಿದೆ.

Next Story

RELATED STORIES