Top

ವರಮಹಾಲಕ್ಷ್ಮೀ ಹಬ್ಬಕ್ಕೆ ಅಂಬಿ ವರ್ಸಸ್ ದಿ ವಿಲನ್ಸ್..?

ವರಮಹಾಲಕ್ಷ್ಮೀ ಹಬ್ಬಕ್ಕೆ ಅಂಬಿ ವರ್ಸಸ್ ದಿ ವಿಲನ್ಸ್..?
X

ವೀರ ಪರಂಪರೆ.... ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಜೋಡಿ ಮಾಡಿದ ಮೋಡಿ ಎಂಥದ್ದು ಅನ್ನೋದನ್ನ ಹೇಳೋ ಸಿನಿಮಾ. ಇವರಿಬ್ಬರ ಸಂಬಂಧ ಆ ಸಿನಿಮಾದಂತೆ ನಿಜ ಜೀವನದಲ್ಲೂ ಅಷ್ಟೇ ಪ್ರೀತಿಪೂರ್ವಕವಾಗಿದೆ. ಆದ್ರೀಗ ತಂದೆ ಸಮಾನ ಅಂಬಿ ವಿರುದ್ದ ಕಿಚ್ಚ ತೊಡೆ ನಿಲ್ತಿದ್ದಾರೆ. ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡ್ತಿದೆ.

ಅರೇ ಇದೇನಪ್ಪಾ ಸಡನ್ ಆಗಿ ಏನಾಯ್ತು ಇವ್ರ ಮಧ್ಯೆ ಅಂತ ಹುಬ್ಬೇರಿಸ್ಬೇಡಿ. ಯಾಕಂದ್ರೆ ಸುದೀಪ್ ಅಖಾಡಕ್ಕೆ ಇಳಿಯಲಿರೋದು ಬಾಕ್ಸ್ ಆಫೀಸ್ ವಿಚಾರದಲ್ಲಿ ಎನ್ನಲಾಗ್ತಿದೆ. ಹೌದು... ಅಂಬಿಯ ಅಂಬಿ ನಿಂಗ್ ವಯಸ್ಸಾಯ್ತೋ ಹಾಗೂ ಕಿಚ್ಚನ ದಿ ವಿಲನ್ ಸಿನಿಮಾಗಳೆರಡೂ ಒಟ್ಟೊಟ್ಟಿಗೆ ರಿಲೀಸ್ ಆಗಲಿವೆ ಅನ್ನೋ ಸುದ್ದಿ ಜೋರಾಗಿ ಹರಿದಾಡ್ತಿದೆ.

ಅಂದಹಾಗೆ ಇವೆರಡೂ ಈ ವರ್ಷದ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾಗಳ ಲಿಸ್ಟ್​ನಲ್ಲಿರೋ ಔಟ್ ಅಂಡ್ ಔಟ್ ಕಮರ್ಷಿಯಲ್ ಎಂಟ್ರಟೈನರ್ಸ್​. ಮೇಕಿಂಗ್ ಹಾಗೂ ಟೀಸರ್​ಗಳಿಂದ ಧೂಳೆಬ್ಬಿಸಿರೋ ಬಹುಕೋಟಿ ವೆಚ್ಚದ ಸಿನಿಮಾಗಳು.

ಆಡಿಯೋ ಲಾಂಚ್​ಗೆ ರೆಡಿಯಾದ ಅಂಬಿ & ವಿಲನ್ಸ್..!

ಶೂಟಿಂಗ್ ಮುಗಿಸಿ ಆಡಿಯೋ ಲಾಂಚ್ ಪ್ಲ್ಯಾನ್​ನಲ್ಲಿರೋ ದಿ ವಿಲನ್ ಮತ್ತು ಅಂಬಿ ನಿಂಗ್ ವಯಸ್ಸಾಯ್ತೋ ಎರಡೂ ಸಿನಿಮಾಗಳು ಒಟ್ಟೊಟ್ಟಿಗೆ ಆಡಿಯೋ ಲಾಂಚ್​ಗೆ ಯೋಜನೆ ರೂಪಿಸ್ತಿವೆ. ಅದ್ರಲ್ಲೂ ಜೋಗಿ ಪ್ರೇಮ್ ನಿರ್ದೇಶನದ ಶಿವಣ್ಣ-ಸುದೀಪ್ ಮಲ್ಟಿಸ್ಟಾರ್ ದಿ ವಿಲನ್ ಆಡಿಯೋ ಲಾಂಚ್​ ದುಬೈನಲ್ಲಿ ಪ್ಲಾನ್ ಆಗಿರೋದು ವಿಶೇಷ.

ದುಬೈನಲ್ಲಿ ಆಗಸ್ಟ್ 10ಕ್ಕೆ ದಿ ವಿಲನ್ ಆಡಿಯೋ ಲಾಂಚ್

ಇದೇ ಆಗಸ್ಟ್ 10ರ ಸಂಜೆ 6 ಗಂಟೆಗೆ ದುಬೈನ ಬೃಹತ್ ವೇದಿಕೆ ಶೇಕ್ ರಷೀದ್ ಆಡಿಟೋರಿಯಂನಲ್ಲಿ ಅದ್ದೂರಿ ಆಡಿಯೋ ಫಂಕ್ಷನ್ ನಡೆಯಲಿದೆ. ಅರ್ಜುನ್ ಜನ್ಯ ಮ್ಯೂಸಿಕ್ ಬ್ಯಾಂಡ್ ಜೊತೆಗೆ ರಚಿತಾ ರಾಮ್, ಭಾವನಾ ರಾವ್, ಶ್ರದ್ದಾ ಶ್ರೀನಾಥ್, ರಾಧಿಕಾ ಚೇತನ್ ಹಾಗೂ ಸಂಯುಕ್ತಾ ಹೆಗಡೆ ಲೈವ್ ಡಾನ್ಸ್ ಫರ್ಫಾರ್ಮೆನ್ಸ್ ಕೂಡ ಇರಲಿದೆಯಂತೆ.

ಇತ್ತ ಜಾಕ್ ಮಂಜು ನಿರ್ಮಾಣದ ಹಾಗೂ ಗುರುದತ್ತ ಗಾಣಿಗ ನಿರ್ದೇಶನದ ಅಂಬಿ ನಿಂಗ್ ವಯಸ್ಸಾಯ್ತೋ ಆಡಿಯೋ ಲಾಂಚ್​ ಕೂಡ ಆಗಸ್ಟ್ ಎರಡನೇ ವಾರದಲ್ಲೇ ಪ್ಲಾನ್ ಆಗ್ತಿದೆ. ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಯಂಗ್ ರೆಬೆಲ್ ಸ್ಟಾರ್ ಆಗಿ ನಟಿಸೋದ್ರ ಜೊತೆ ಸಿನಿಮಾ ನಿರ್ಮಾಣದಲ್ಲೂ ಜಾಕ್ ಮಂಜುಗೆ ಸಾಥ್ ಕೊಟ್ಟಿದ್ದಾರೆ. ಹಾಗಾಗಿ ಒಟ್ಟೊಟ್ಟಿಗೆ ಆಡಿಯೋ ಲಾಂಚ್ ಹೇಗೆ ನಡೆಯಲಿದೆ ಅನ್ನೋ ಕುತೂಹಲ ಹೆಚ್ಚಿದೆ.

ಬಾಕ್ಸ್ ಆಫೀಸ್ ಕ್ಲ್ಯಾಶ್​ಗೆ ಬ್ರೇಕ್ ಹಾಕ್ತಾರಾ ಇಲ್ವಾ..?!

ಎರಡೂ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್​ ಭರದಿಂದ ಸಾಗ್ತಿದ್ದು, ವರಮಹಾಲಕ್ಷ್ಮೀ ಹಬ್ಬಕ್ಕೆ ಎರಡೂ ಸಿನಿಮಾ ಒಂದೇ ದಿನ ರಿಲೀಸ್ ಆಗೋ ಸಾಧ್ಯತೆಯಿದೆ. ಹೀಗೆ ನಡೆದಲ್ಲಿ, ಬಾಕ್ಸ್ ಆಫೀಸ್​ನಲ್ಲಿ ಬಿಗ್ ಕ್ಲ್ಯಾಶ್ ಆಗೋದ್ರ ಜೊತೆಗೆ ಸಿನಿಪ್ರಿಯರಿಗೂ ಯಾವ ಸಿನಿಮಾ ಮೊದಲು ನೋಡಬೇಕು ಅನ್ನೋ ಗೊಂದಲ ಶುರುವಾಗೋದು ಕನ್ಫರ್ಮ್​.

ಇನ್ನು ಸುದೀಪ್ ಎರಡೂ ಸಿನಿಮಾದ ಭಾಗವಾದ್ದರಿಂದ ಸುದೀಪ್ ಅವ್ರೇ ಈ ಸಮಸ್ಯೆ ಬಗೆಹರಿಸಬೇಕಿದೆ. ಥಿಯೇಟರ್ ಕ್ಲ್ಯಾಶ್ ಆಗದಂತೆ ಕನಿಷ್ಟ ಎರಡು ವಾರ ಹೆಚ್ಚೂ ಕಡಿಮೆ ಗ್ಯಾಪ್​ನಲ್ಲಿ ತೆರೆಕಂಡರೆ ಎರಡೂ ತಂಡಗಳಿಗೆ ಒಳ್ಳೆಯದು. ಅದೇನೇ ಇರಲಿ, ಎರಡೂ ಸಿನಿಮಾಗಳ ನಿರ್ಮಾಪಕರಿಗೆ ವರಮಹಾಲಕ್ಷ್ಮಿ ಜೇಬು ತುಂಬುವಂತೆ ಮಾಡಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

Next Story

RELATED STORIES