Top

ಗ್ರಾಮ ತೊರದಿದ್ದ ಕುಟುಂಬಗಳ ಮನವೊಲಿಕೆ : ತಾತ್ಕಾಲಿಕ ಸ್ಥಳದಲ್ಲಿ ನೆಲೆ.!!

ಚಿಕ್ಕಮಗಳೂರು : ಚಂದ್ರಗ್ರಹಣಕ್ಕೂ ಮುನ್ನಾ ದಿನ, ಚಿಕ್ಕಮಗಳೂರು ಜಿಲ್ಲೆಯ ಎನ್​.ಆರ್​ ಪುರ ತಾಲೂಕಿನ ಬಾಳೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಯಲ್ಲಿ ಸುಮಾರು 15 ವರ್ಷಗಳಿಂದ ನೆಲೆ ನಿಂತಿದ್ದ ಕುಟುಂಬಗಳು ಜ್ಯೋತಿಷಿ ಮಾತನ್ನು ನಂಬಿ ಬದುಕಿ ಬಾಳಿದ್ದ ಗ್ರಾಮವನ್ನೇ ತೊರೆದಿದ್ದರು. ಈ ಕುಟುಂಬಗಳನ್ನು ಇಂದು ಮನವೊಲೀಸಿ, ಮರಳಿ ಗ್ರಾಮಕ್ಕೆ ಕರೆತರುವಲ್ಲಿ, ತಾಹಶೀಲ್ದಾರರು ಹಾಗು ಶಾಸಕರು ಯಶಸ್ವಿಯಾಗಿದ್ದಾರೆ.

https://www.youtube.com/watch?v=l9tH--B0qB4

ಈ ಬಗ್ಗೆ ಗ್ರಾಮ ತೊರೆದ ಕುಟುಂಬಗಳ ಮಾಹಿತಿ ಪಡೆದಿದ್ದ ಎನ್‌ ಆರ್‌ ಪುರದ ತಹಶೀಲ್ದಾರ್‌ ಹಾಗೂ ಶಾಸಕ ಟಿ ಡಿ ರಾಜೇಗೌಡ, ಗ್ರಾಮಸ್ಥರನ್ನು ಮನವೊಲಿಸಿದ್ದಾರೆ. ಸದ್ಯಕ್ಕೆ ಎನ್. ಆರ್ ಪುರ ಪಟ್ಟಣದಲ್ಲೇ ವಾಸವಿದ್ದು, ಬಳಿಕ ಬೇರೆಡೆ ಜಾಗ ನೀಡುವುದಾದರೆ ನಾವು ಸಾಶ್ವತವಾಗಿ ನೆಲೆಸುವುದಾಗಿ ಕುಟುಂಬಳು ಒಪ್ಪಿಕೊಂಡಿವೆ. ಎನ್.ಆರ್.ಪುರ ದಲ್ಲಿ ತಾತ್ಕಾಲಿಕ ವಾಸ ಮಾಡಲು ವ್ಯವಸ್ಥೆ ಮಾಡುವುದಾಗಿ ಶಾಸಕರು ಹಾಗೂ ತಾಲೂಕು ಆಡಳಿತದಿಂದ ಭರವಸೆ ನೀಡಿದೆ.

ಇದೀಗ ಶಾಸಕರ ಮಾತಿಗೆ ಬೆಲೆಕೊಟ್ಟಿರುವ ಕುಟುಂಬಗಳು ಸ್ಥಳೀಯವಾಗಿ ನೀಡಬೇಕಾದ ಸೌಲಭ್ಯಗಳನ್ನು ನೀಡುವಂತೆಯೂ ಒತ್ತಾಯಿಸಿವೆ. ಸದ್ಯ ಎನ್.ಆರ್ ಪುರ ಪಟ್ಟಣದ ಬಳಿ ಇರೋ ಹೊಗ್ರಳ್ಳಿ ಮುಚ್ಚಿರುವ ಶಾಲೆಯಲ್ಲಿ ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದು, ಗಂಜೀಕೇಂದ್ರ ಮಾದರಿಯಲ್ಲಿ ಕುಟುಂಬಗಳಿಗೆ ಆಶ್ರಯ ನೀಡಲಾಗಿದೆ.

Next Story

RELATED STORIES