Top

ಅನಾಥ ಮಕ್ಕಳ ವಿಮಾನಯಾನ

ಅನಾಥ ಮಕ್ಕಳ ವಿಮಾನಯಾನ
X

ಬಳ್ಳಾರಿ : ಅವರೆಲ್ಲ ಅನಾಥ ಮಕ್ಕಳು. ಅವರು ಆಶ್ರಮದ ಮುಂದೆ ನಿಂತು ಆಗಸದಲ್ಲಿ ಹಾರಾಡುವ ವಿಮಾನವನ್ನು ನೋಡುತ್ತಿದ್ದರು. ಆದ್ರೇ ಇವತ್ತು ಅವರಿಗೆ ವಿಮಾನದಲ್ಲಿ ಕೂಡುವ ಭಾಗ್ಯ ಒದಗಿ ಬಂದಿತ್ತು.

ಹೌದು ಹೈದ್ರಾಬಾದ್ನ ವಾಲ್ಮೀಕ್ ಫೌಂಡೇಷನ್ ನಿಂದ ಸುಮಾರು 300 ಅನಾಥ ಮಕ್ಕಳಿಗೆ ದೇಶದ ವಿವಿಧ ಭಾಗಗಳಲ್ಲಿ ವಿಮಾನದಲ್ಲಿ ಕರೆದುಕೊಂಡು ಹೋಗಲು ಉದ್ದೇಶಿಸಿದ್ದು ಮೋದಲ ಭಾಗವಾಗಿ ಬಳ್ಳಾರಿಯ ಜಿಂದಾಲ ವಿಮಾನ ನಿಲ್ದಾಣಕ್ಕೆ ಸುಮಾರು 30 ಮಕ್ಕಳನ್ನು ಟ್ರೂ ಜೆಟ್ ವಿಮಾನದಲ್ಲಿ ಕರೆದುಕೊಂಡು ಬರಲಾಗಿದೆ.

ನಾಳೆ ಈ ಮಕ್ಕಳಿಗೆ ವಿಶ್ವ ವಿಖ್ಯಾತ ಹಂಪಿಯನ್ನು ತೋರಿಸಿ ನಂತರ ಟ್ರೂ ಜೆಟ್ ವಿಮಾನದಲ್ಲಿ ಹೈದ್ರಾಬಾದ್ ಗೆ ಕರೆದುಕೊಂಡು ಹೋಗಲಾಗುತ್ತದೆ. ಇನ್ನೂ ಈ ಮಕ್ಕಳೊಂದಿಗೆ ಮಿಸೆಸ್ ಇಂಡಿಯಾ ಕೂಡಾ ಆಗಮಿಸಿದ್ದಾರೆ‌. ಆ ಮಕ್ಕಳೆಲ್ಲ ವಿಮಾನವನ್ನು ದೂರದಿಂದ ನೋಡಿ ಸಂತಸ ಪಡ್ತಿದ್ರೂ ಆದ್ರೇ ಇವತ್ತು. ಅದೇ ವಿಮಾನದಲ್ಲಿ ಬಂದಿರೋದು ಮಕ್ಕಳಿಗೆ ಸಂತಸ ಇಮ್ಮಡಿಗೊಳಿಸಿತ್ತು.

ವರದಿ : ವೆಂಕಟೇಶ ಕುಲಕರ್ಣಿ, ಟಿವಿ5 ಬಳ್ಳಾರಿ.

Next Story

RELATED STORIES