Top

ಸಾವಿನಲ್ಲೂ ಒಂದಾದ ತಾಯಿ-ಮಗ!

ಸಾವಿನಲ್ಲೂ ಒಂದಾದ ತಾಯಿ-ಮಗ!
X

ತಾಯಿ-ಮಗ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಬಹುಶಃ ನಾವು ಎಲ್ಲಿಯೂ ಕೇಳಲು ಅಥವಾ ನೋಡುವುದಕ್ಕೆ ಸಾಧ್ಯವಿಲ್ಲ. ತಾಯಿ ಕರಳು ಎಂತಹದ್ದು ಎಂಬುದಕ್ಕೆ ಮೈಸೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ.

ಮೈಸೂರಿನ ಅಗ್ರಹಾರದಲ್ಲಿ ತಾಯಿ ಮತ್ತು ಮಗ ಒಂದೇ ದಿನ ಮೃತಪಟ್ಟು ಸಾವಿನಲ್ಲೂ ಒಂದಾಗಿದ್ದಾರೆ. ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆ ತಾಯಿ ಕೂಡ ಮೃತಪಟ್ಟಿದ್ದಾರೆ.

ತಾಯಿ ಶಾಂತಮ್ಮಣ್ಣಿ (72) ಮತ್ತು ದಿಲೀಪ್ (49) ಸಾವಿನಲ್ಲೂ ಒಂದಾದ ಅಮ್ಮ-ಮಗ.

ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮಗ ಇಬ್ಬರೂ ಬಳಲುತ್ತಿದ್ದರು. ತಾಯಿಗೆ ಕಿಡ್ನಿ ಸಂಬಂಧಿಸಿದಂತೆ ಸಮಸ್ಯೆಯಿದ್ದರೆ, ಮಗನಿಗೆ ಹೃದಯಸಂಬಂಧಿ ಸಮಸ್ಯೆ ಇತ್ತು.

ಮಗ ಬೆಳಗ್ಗೆ 6 ಗಂಟೆಗೆ ಮಗ ಮೃತಪಟ್ಟರು. ಮಗನ ಸಾವಿನ ಸುದ್ದಿ ಕೇಳಿದ ತಾಯಿಯೂ ಹೃದಯಾಘಾತದಿಂದ ಸಾವಿಗೀಡಾದರು. ಇದೀಗ ಇಬ್ಬರ ಅಂತ್ಯಕ್ರಿಯೆಯನ್ನು ಮೈಸೂರಿನ ವಿದ್ಯಾರಣ್ಯಪುರಂನ ರುದ್ರಭೂಮಿಯಲ್ಲಿ ಒಟ್ಟಿಗೆ ನಡೆಸಲು ನಿರ್ಧರಿಸಲಾಗಿದೆ.

Next Story

RELATED STORIES