Top

ಗೌರಿ ಲಂಕೇಶ್ ಹಂತಕರ ಹಿಟ್ ಲೀಸ್ಟ್‌ನಲ್ಲಿ 37 ಚಿಂತಕರು.?

ಗೌರಿ ಲಂಕೇಶ್ ಹಂತಕರ ಹಿಟ್ ಲೀಸ್ಟ್‌ನಲ್ಲಿ 37 ಚಿಂತಕರು.?
X

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ, ದಿನೇ ದಿನೇ ಹೊಸ ಹೊಸ ತಿರುವನ್ನು ಪಡೆಯುತ್ತಿದೆ. ಹತ್ಯೆಯ ಸಂಬಂಧ ಈವರೆಗೆ ಹನ್ನೊಂದು ಮಂದಿ ಬಂಧನ ಮಾಡಲಾಗಿದೆ.

ಕಳೆದ ನಿನ್ನೆ ರಾತ್ರಿ ಹುಬ್ಬಳ್ಳಿಯಲ್ಲಿ ಎಸ್‌ಐಟಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಮಿತ್ ಬದ್ದಿ ಹಾಗೂ ಗಣೇಶ ಮಿಸ್ಕಿನ್ ಎಂದು ಗುರುತಿಸಲಾಗಿದೆ.

ಈ ಎಲ್ಲಾ ಬೆಳವಣಿಗೆಯ ನಡುವೆ, ಗೌರಿ ಲಂಕೇಶ್‌ ಹತ್ಯೆಯ ಹಂತಕರ ಜಾಲ, ಚಾಚಿಕೊಳ್ಳುತ್ತಲೇ ಇದೆ. ಮಹಾರಾಷ್ಟ್ರದ ಮಾಸ್ಟರ್ ಮೈಂಡ್‌ ಅಮೋಲ್‌ ಕಾಳೆಗೆ ಹಿಟ್‌ಲಿಸ್ಟ್‌ ಕೊಟ್ಟ ರಾಜ್ಯದ ವ್ಯಕ್ತಿ ಸೇರಿದಂತೆ ಇನ್ನೂ ಕೆಲವರು ಪತ್ತೆಯಾಗಬೇಕಿದೆ.

ಇನ್ನೂ "ಅಧರ್ಮೀಯರ ವಿನಾಶ" ಹೆಸರಿನಲ್ಲಿ ರಾಜ್ಯ ಹಾಗೂ ಹೊರರಾಜ್ಯದ 37 ಚಿಂತಕರನ್ನು ಕೊಲ್ಲಲು ಕಾರ್ಯಾಚರಣೆ ಪ್ರಾರಂಭಿಸಿದ್ದ ಈ ಜಾಲವು, ವ್ಯವಸ್ಥಿತವಾಗಿ ಸಂಚು ರೂಪಿಸಿ, ಗೌರಿಲಂಕೇಶ್‌ ಹತ್ಯೆ ಮಾಡಿದೆ.

ಆರೋಪಿಗಳ ಹೇಳಿಕೆ ಮತ್ತು ಅವರಿಂದ ವಶಪಡಿಸಿಕೊಳ್ಳಲಾದ ಡೈರಿಯಲ್ಲಿ ಈ ಎಲ್ಲಾ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲೂ, ಎಡಪಂಥೀಯ 37 ಚಿಂತಕರ ಹೆಸರುಗಳ ಪಟ್ಟಿಯನ್ನೆ ರೆಡಿ ಮಾಡಿದ್ದರಂತೆ.

ಈ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಬಂಧಿತರಿಂದ ಹೆಕ್ಕಿ ತೆಗೆದಿದ್ದಾರೆ.

ಹಂತಕರ ಹಿಟ್‌ಲೀಸ್ಟ್‌ನಲ್ಲಿದ್ದ ಚಿಂತಕರು

  1. ಗಿರೀಶ್ ಕಾರ್ನಾಡ್‌
  2. ಚಂದ್ರಶೇಕರ ಪಾಟೀಲ್‌
  3. ನಿಡುಮಾಮಿಡಿ ಸ್ವಾಮೀಜಿ
  4. ಬಂಜಗೆರೆ ಜಯಪ್ರಕಾಶ್
  5. ಬಿ ಟಿ ಲಲಿತಾ ನಾಯಕ್‌
  6. ಕೆ.ಎಸ್‌.ಭಗವಾನ್‌
  7. ಸಿ ಎಸ್‌ ದ್ವಾರಕನಾಥ್‌

ಸೇರಿದಂತೆ ಒಟ್ಟು 37 ಎಡಪಂಥೀಯ ಚಿಂತಕರನ್ನು ಹತ್ಯೆ ಮಾಡಲು ಸ್ಕೈಚ್‌ ರೂಪಿಸಿದ್ದರಂತೆ. ಈ ಹಿನ್ನಲೆಯಲ್ಲಿ ಬಂಧಿಸಿರುವ 11 ಹಂತಕರಿಂದ 48 ಮೊಬೈಲ್‌, 5 ಡೈರಿಗಳು ಹಾಗೂ 22 ಸಾವಿರದ 931 ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಸೆಪ್ಟೆಂಬರ್ 5, 2017ರಂದು ಗೌರಿ ಲಂಕೇಶ್‌ ಹತ್ಯೆಯಾಯಿತು. ಈ ಹತ್ಯೆಯ 165 ದಿನಗಳ ಬಳಿಕ ಮೊದಲ ಆರೋಪಿ ಸಿಕ್ಕಿದ್ದು. ಇಂತಹ ತನಿಖೆಯನ್ನು 39 ಪೊಲೀಸರ ತಂಡ ನಡೆಸುತ್ತಿದೆ. ಇದುವರೆಗೆ ಇದಕ್ಕಾಗಿ ಖರ್ಚಾಗಿರುವ ವೆಚ್ಚ 95ಲಕ್ಷ ಎಂದು ತಿಳಿದು ಬಂದಿದೆ.

Next Story

RELATED STORIES