ದತ್ತು ಪುತ್ರನೊಂದಿಗೆ ಕಾಲ ಕಳೆದ ದರ್ಶನ್

X
TV5 Kannada30 July 2018 7:27 AM GMT
ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ದತ್ತು ಮಗನೊಂದಿಗೆ ಇವತ್ತು ಖುಷಿಯಿಂದ ಕಾಲ ಕಳೆದ್ರು. ಇದೇನಪ್ಪ ದರ್ಶನ್ ದತ್ತು ಮಗ ಯಾರು ಅಂದ್ರಾ. ದರ್ಶನ್ ಆರು ವರ್ಷದ ಹಿಂದೆ ದತ್ತುಪಡೆದ ಹುಲಿ.
ಹೌದು, ದರ್ಶನ್ ದತ್ತು ಪಡೆದ ಹುಲಿಯೊಂದಿಗೆ ಇಂದು ಕಾಲಕಳೆದರು. ನಿನ್ನೆ ಹುಲಿ ದಿನಾಚರಣೆ ಹಾಗೂ ಯುವ ಸಂಘಟನೆ ಕಾರ್ಯಕ್ರಮಕ್ಕೆ ಮೈಸೂರಿನ ಮೃಗಾಲಯಕ್ಕೆ ಭೇಟಿ ನೀಡಿದ ದರ್ಶನ್, ತಮ್ಮ ಮಗ ವಿನೀಶ್ನನ್ನು ಜೊತೆಯಲ್ಲಿ ಕರೆ ತಂದಿದ್ದರು. ಕಾರ್ಯಕ್ರಮದ ನಂತರ ಪುತ್ರ ವಿನೀಶ್ ಜೊತೆ ಹುಲಿ ವೀಕ್ಷಿಸಿದ ದರ್ಶನ್, ಅದರೊಂದಿಗೆ ಕಾಲ ಕಳೆದರು. ಇನ್ನು ತಮ್ಮ ದತ್ತು ಪುತ್ರನಿಗೂ ಕೂಡ ವಿನೀಶ್ ಎಂದೇ ನಾಮಕರಣ ಮಾಡಿದ್ದಾರೆ ದರ್ಶನ್.
Next Story