Top

ಬ್ರಿಮ್ಸ್‌ ಅವ್ಯಹಾರ ಪ್ರಕರಣ : 8 ಜನರ ವಿರುದ್ಧ ಎಫ್‌ಐಆರ್‌

ಬ್ರಿಮ್ಸ್‌ ಅವ್ಯಹಾರ ಪ್ರಕರಣ : 8 ಜನರ ವಿರುದ್ಧ ಎಫ್‌ಐಆರ್‌
X

ಬೀದರ್ : ಬ್ರಿಮ್ಸ್ ನಲ್ಲಿನ ಅವ್ಯವಹಾರ ಪ್ರಕರಣದ ತನಿಖೆಯನ್ನ ಎಸಿಬಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಅವ್ಯವಹಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಟು ಜನ್ರ ವಿರುದ್ದ ಎಸಿಬಿ ಎಫ್ಐಆರ್ ದಾಖಲಿಸಿದೆ.

ಡಾ.ಆನಂದ್ ಸಾಗರ್ ರೆಡ್ಡಿ, ಬಾಬು ಕೋಟಿ, ಕಚೇರಿ ಅಧೀಕ್ಷಕರು, ಪ್ರಕಾಶ್ ಮಾಳಗೆ, ಪ್ರಥಮ ದರ್ಜೆ ಸಹಾಯಕರು, ಕಲ್ಲಪ್ಪ , ಶಿವಾಜಿ, ದ್ವಿತಿಯ ದರ್ಜೆ ಸಹಾಯಕ, ಶ್ರೀಮತಿ ಹರ್ಷ, ಪ್ರಥಮದರ್ಜೆ ಸಹಾಯಕಿ, ಪ್ರಕಾಶ ಶರಣಪ್ಪ ಮಡಿವಾಳ, ಬ್ರಿಮ್ಸ್ ಅಧಿಕ್ಷಕರು,ಹಾಗೂ ಅನುಸೂಯ ಬ್ರಿಮ್ಸ್ ಸಹಾಯಕ ಆಡಳಿತ ಅಧಿಕಾರಿ ಇವರುಗಳ ಮೇಲೆ ಎಸಿಬಿ ಅಧೀಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.

ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 5 ಕೋಟಿ ಅಧಿಕ ಅವ್ಯವಹಾರ ನಡೆದಿದೆ ಎಂದು ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣವನ್ನ ಕೈಗೆತ್ತುಕೊಂಡಿದ್ದ ಎಸಿಬಿ ಅಧಿಕಾರಿಗಲು ತನಿಖೆ ನಡೆಸಿ, ಬ್ರಿಮ್ಸ್ ನಿರ್ದೇಶಕ ಚನ್ನಣ್ಣ ಸೇರಿದಂತೆ ಹತ್ತು ಜನ್ರ ವಿರುದ್ದ ಎಫ್ ಐಆರ್ ದಾಖಲಿಸಲು ಫೇಬ್ರವರಿಯಲ್ಲಿ ಸರ್ಕಾರಕ್ಕೆ ಅನುಮತಿ ಕೋರಿತ್ತು.

ಈದೀಗ ಎಫ್ಐಆರ್ ದಾಖಲಿಸಲು ಸರ್ಕಾರ ಅನುಮತಿ ನೀಡಿದ್ದರಿಂದ ಎಸಿಬಿ ಅಧಿಕಾರಿಗಲು ಎಫ್ ಐಆರ್ ದಾಖಲಿಸಿದೆ. ಇಂದು ಎಸಿಬಿ ಅಧಿಕಾರಿಗಳು ಬ್ರೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮತ್ತೆ ತನಿಖೆಯನ್ನು ಶುರುಮಾಡಿದ್ದಾರೆ. ಬ್ರಿಮ್ಸ್ ಕಚೇರಿಯಲ್ಲಿ ಕೆಲ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ತನಿಖೆಯಗೆ ಬ್ರಿಮ್ಸ್ ನಿರ್ದೇಶಕ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ಎನ್ನುವ ಬಗ್ಗೆ ಎಸಿಬಿ ಮೂಲಗಳು ತಿಳಿಸಿವೆ.

Next Story

RELATED STORIES